ನಡಕಲಪುರ ಗ್ರಾಮದ ಶ್ರೀಬಸವೇಶ್ವರ ಸ್ವಾಮಿಯ ಕೊಂಡೋತ್ಸವ

KannadaprabhaNewsNetwork |  
Published : Mar 19, 2026, 01:45 AM IST
17ಕೆಎಂಎನ್ ಡಿ24 | Kannada Prabha

ಸಾರಾಂಶ

ಸೋಮವಾರ ಬೆಳಗ್ಗೆ ಗ್ರಾಮದ ಹೊರವಲಯದ ಕೋಡಿ ಹಳ್ಳದಿಂದ ಗಂಗೆಯನ್ನು ತಂದು ಬಸವೇಶ್ವರ ಸ್ವಾಮಿ ದೇವರ ಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ ಅಭಿಷೇಕ, ಹಾಲಿನ ಅಭಿಷೇಕಗಳನ್ನು ನಡೆಸಿದ ನಂತರ ವಿವಿಧ ಪುಷ್ಪ- ಗಂಧ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಹಲಗೂರು: ಸಮೀಪದ ನಡಕಲಪುರ ಗ್ರಾಮದ ಶ್ರೀಬಸವೇಶ್ವರ ಸ್ವಾಮಿಯ ಕೊಂಡೋತ್ಸವ ವಿಜೃಂಭಣೆಯಿಂದ ಮಂಗಳವಾರ ಬೆಳಗಿನ ಜಾವ ನೆರವೇರಿತು. ಸೋಮವಾರ ಬೆಳಗ್ಗೆ ಗ್ರಾಮದ ಹೊರವಲಯದ ಕೋಡಿ ಹಳ್ಳದಿಂದ ಗಂಗೆಯನ್ನು ತಂದು ಬಸವೇಶ್ವರ ಸ್ವಾಮಿ ದೇವರ ಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ ಅಭಿಷೇಕ, ಹಾಲಿನ ಅಭಿಷೇಕಗಳನ್ನು ನಡೆಸಿದ ನಂತರ ವಿವಿಧ ಪುಷ್ಪ- ಗಂಧ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ನಂತರ ಮುತ್ತೈದೆಯರು ಆರತಿಯನ್ನು ಎತ್ತಿ ದೇವರಲ್ಲಿ ಪ್ರಾರ್ಥಿಸಿದರು. ಸೋಮವಾರ ರಾತ್ರಿ ಮಹಾ ಮಂಗಳಾರತಿ ನಂತರ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ಮಂಗಳವಾರ ಬೆಳಗಿನ ಜಾವ ಅರ್ಚಕರಾದ ಶಿವಪ್ಪ ವಿಶೇಷವಾಗಿ ಪೂಜೆ ನಡೆಸಿದ ನಂತರ ಅರ್ಚಕರಾದ ಪಾಲಾಕ್ಷ ಕೊಂಡವನ್ನು ಹಾಯ್ದರು. ನಂತರ ಪಲ್ಲಕ್ಕಿಯಿಂದ ಸಿಂಗರಿಸಿದ ಬಸವೇಶ್ವರ ದೇವರ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ನಾಡಗೌಡ ಮಲ್ಲಿಕಾರ್ಜುನಪ್ಪ, ಮಾದಪ್ಪ, ಬಸವಣ್ಣ, ಸಿದ್ದರಾಜು, ನಟರಾಜು, ನಾಗಭೂಷಣ, ಚಿಕ್ಕಣ್ಣ, ಸೋಮಣ್ಣ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಸ್‌ಸಿ ರಿಪೇರಿಗೆ ಸರ್ಕಾರದ ಪರಿಹಾರ ಸೂತ್ರ
ಅಕಾಲಿಕ ಮಳೆಗೆ ಲಕ್ಷಾಂತರ ಬೆಲೆಬಾಳುವ ದ್ರಾಕ್ಷಿ ಬೆಳೆ ನಾಶ