ಕನ್ನಡಪ್ರಭ ವಾರ್ತೆ ನವಲಗುಂದ
ಪಟ್ಟಣದ ಬಸವೇಶ್ವರ ನಗರದಲ್ಲಿ ಭಾನುವಾರ 18, 22 ಮತ್ತು 23ನೇ ವಾರ್ಡ್‌ಗಳಲ್ಲಿ ಲೋಕಸಭೆಯ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಶಾಸಕ ಎನ್.ಎಚ್. ಕೋನರಡ್ಡಿ ನೇತೃತ್ವದಲ್ಲಿ ಮತಯಾಚನೆ ರ‍್ಯಾಲಿ ಜರುಗಿತು.ಈ ವೇಳೆ ಮಾತನಾಡಿದ ಶಾಸಕ ಕೋನರಡ್ಡಿ, ಈಗಾಗಲೇ ನಮ್ಮ ಬಸವೇಶ್ವರ ನಗರಕ್ಕೆ ಸಾಕಷ್ಟು ಅನುದಾನ ನೀಡಿದ್ದೇವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಸದಾ ನಿಮ್ಮೊಂದಿಗೆ ಇರುತ್ತೇನೆ. ನನಗೆ ಆಶೀರ್ವಾದ ಮಾಡಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಅದರಂತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ವಿನೋದ ಅಸೂಟಿ ಅವರಿಗೂ ಆಶೀರ್ವಾದ ಮಾಡಿ ಸಂಸದರನ್ನಾಗಿಸಿ ದೆಹಲಿಗೆ ಕಳುಹಿಸಿ. ಈಗಾಗಲೇ ನಮ್ಮ ಸರ್ಕಾರ ನುಡಿದಂತೆ ನಡೆದು ತಮಗೆ ಹಲವಾರು ಯೋಜನೆ ಹಾಗೂ ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಇನ್ನೂ ಹೆಚ್ಚಿನ ಅನುಕೂಲತೆ ಪಡೆಯಲು ಕಾಂಗ್ರೆಸ್‌ಗೆ ಮತ ನೀಡಿ. ಇನ್ನು ಮಹಿಳೆಯರೇ ಮನೆಯ ಹೋಂ ಮಿನಿಸ್ಟರ್. ಎಲ್ಲವೂ ಅವರ ಆಳ್ವಿಕೆಯಲ್ಲಿದ್ದರೆ ಮನೆ ಸುಸೂತ್ರವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಉದ್ದೇಶದಿಂದ ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಅದನ್ನು ತಾವು ತಪ್ಪು ತಿಳಿಯಬಾರದು. ಯಾವ ಒಬ್ಬ ತಾಯಿ ಮತ್ತು ಹೆಂಡತಿ ತಾವು ಬಚ್ಚಿಟ್ಟ ಹಣ ಹಾಗೂ ಆಸ್ತಿಯೇ ಆಗಲಿ ಯಾವಾಗಲೂ ಮನೆಯ ಮಕ್ಕಳಿಗೆ ಮತ್ತು ಮನೆಯ ಪುರುಷರಿಗೆ ಇರುತ್ತದೆ ಎಂದರು.
ಇದೇ ವೇಳೆ ಐ.ಜಿ. ಲೋಕಾಪುರಿ ನೇತೃತ್ವಲ್ಲಿ ಮುಖಂಡರಾದ ಎಂ.ಬಿ. ತೋಟಿ ಸೇರಿದಂತೆ 16 ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಜೀವನ ಪವಾರ, ಮಂಜುನಾಥ ಜಾಧವ, ಆನಂದ ಹವಳಕೋಡ, ಪ್ರಕಾಶ ಶಿಗ್ಲಿ, ಆಸೀಫ್, ಬಸಣ್ಣ ಈಟಿ, ಅಪ್ಪಣ್ಣ ಹಳ್ಳದ, ಮಾಂತೇಶ ಭೋವಿ, ನಾಗರಾಜ ಭಜಂತ್ರಿ, ಎಂ.ಪಿ. ಬಾಳೆಹಳ್ಳಿಮಠ, ಶಿವಯ್ಯ ಕೌಡಿಮಠ, ನಾಗಲಿಂಗ ಬಡಿಗೇರ, ಶಂಕ್ರಪ್ಪ ಅಂಗಡಿ, ನಾರಾಯಣ ಆರ್ಯರ, ಅನ್ನಪೂರ್ಣಾ ಸುಣಗಾರ, ಮಂಜುಳಾ ಜಾಧವ, ಏಕನಾಥ ಜಾಧವ, ಮಂಜು ಅಸೂಟಿ, ಹಟೇಲಸಾಬ ರಾಮದುರ್ಗ, ಸಲೀಂ ಬಬರ್ಚಿ, ಮಂಜು ಸುಣಗಾರ ಸೇರಿದಂತೆ ಅನೇಕ ಪುರುಷ ಮತ್ತು ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದರು.