ಕೂವಲೆರ ಚಿಟ್ಟಡೆ ಕಪ್-2025: ಏಳು ತಂಡ ಮುನ್ನಡೆ

KannadaprabhaNewsNetwork |  
Published : Jan 20, 2025, 01:30 AM IST
ಚಿತ್ರ : 19ಎಂಡಿಕೆ2 : ಕೂವಲೆರ ಚಿಟ್ಟಡೆ ಕಪ್. | Kannada Prabha

ಸಾರಾಂಶ

ಕೂವಲೇರ ಚಿಟ್ಟಡೆ ಕಪ್‌ - 2025 2ನೇ ದಿನದ ಪಂದ್ಯದಲ್ಲಿ ಒಟ್ಟು 7 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ‘ಕೂವಲೆರ ಚಿಟ್ಟಡೆ ಕಪ್ -2025’ 2ನೇ ದಿನದ ಪಂದ್ಯದಲ್ಲಿ ಒಟ್ಟು 7 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು.

ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಅಲ್ಲಿನ ಜುಮಾ ಮಸೀದಿ ಮೈದಾನದಲ್ಲಿ ನಡೆಯುತ್ತಿರುವ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾಳೇರ, ಪರವಂಡ, ಕಂಬೇರ, ಗುಂಡಿಕೆರೆಯ ಕುಂಡಂಡ, ಅತಿಥೇಯ ಚಿಟ್ಟಡೆ ಕೂವಲೆರ (ಎ), ಕನ್ನಡಿಯಂಡ (ಎ) ಮತ್ತು ಚಿಟ್ಟಡೆಯ ಎರೆಟೆಂಡ (ಎ) ತಂಡಗಳು ಮುನ್ನಡೆ ಸಾಧಿಸಿದವು.

2ನೇ ದಿನದ ಮೊದಲ ಸುತ್ತಿನ ಪಂದ್ಯದಲ್ಲಿ ಎಡಪಾಲದ ಕಿಕ್ಕರೆ ತಂಡವು ಕೂತಂಬಟ್ಟಿರ ತಂಡವನ್ನು 2-1 ಸೆಟ್‌ಗಳಿಂದ ಸೋಲಿಸಿದರೆ, 2ನೇ ಪಂದ್ಯದಲ್ಲಿ ಕಂಬೇರ ತಂಡವು ಚಿಟ್ಟಡೆಯ ಎರೆಟೆಂಡ (ಬಿ) ತಂಡವನ್ನು 2- 0 ನೇರ ಸೆಟ್‌ನಲ್ಲಿ ಮಣಿಸಿತು. 3ನೇ ಪಂದ್ಯದಲ್ಲಿ ಪೇನತಂಡ ತಂಡವು ಕಣ್ಣಪಣೆ ತಂಡವನ್ನು 2- 0 ನೇರ ಸೆಟ್‌ನಲ್ಲಿ ಸೋಲಿಸಿ ಮುನ್ನಡೆದರೆ, 4ನೇ ಪಂದ್ಯದಲ್ಲಿ ಅತಿಥೇಯ ಚಿಟ್ಟಡೆ ಕೂವಲೆರ (ಎ) ಮಂದಮಾಡ ತಂಡವನ್ನು 2- 0 ನೇರ ಸೆಟ್‌ನಲ್ಲಿ ಪರಾಭವಗೊಳಿಸಿತು.

5ನೇ ಪಂದ್ಯದಲ್ಲಿ ಪುದಿಯಪೆರೆ ತಂಡವು ಚೆಕ್ಕೆರ ತಂಡವನ್ನು 2- 1 ನೇರ ಸೆಟ್‌ನಲ್ಲಿ ಮಣಿಸಿದರೆ, 6ನೇ ಪಂದ್ಯದಲ್ಲಿ ಚಿಟ್ಟಡೆಯ ಎರೆಟೆಂಡ (ಎ) ತಂಡವು ಗುಂಡಿಕೆರೆ ಮುಟ್ಟಲ್ ತಂಡವನ್ನು 2- 1 ಸೆಟ್‌ಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. 7ನೇ ಪಂದ್ಯದಲ್ಲಿ ಕಾಳೆರ ತಂಡವು ವಯಕೋಲಂಡ ತಂಡವನ್ನು 2- 0 ನೇರ ಸೆಟ್‌ಗಳಿಂದ ಪರಾಭವಗೊಳಿಸಿ ಮುನ್ನಡೆ ಸಾಧಿಸಿಕೊಂಡಿತು.

2ನೇ ಸುತ್ತಿನ ಮೊದಲ ಪಂದ್ಯದಲ್ಲಿ ಪರವಂಡ ತಂಡವು ಎಡಪಾಲ ಕಿಕ್ಕರೆ ತಂಡವನ್ನು 2-1 ಸೆಟ್ ಗಳಿಂದ ಪರಾಭವಗೊಳಿಸಿದರೆ, 2ನೇ ಪಂದ್ಯದಲ್ಲಿ ಕಂಬೇರ ತಂಡವು ಕೊಂಡಂಗೇರಿ ಜೋಯಿಪೆರ ತಂಡವನ್ನು 2-0ನೇರ ಸೆಟ್‌ಗಳಿಂದ ಮಣಿಸಿತು. 3ನೇ ಪಂದ್ಯದಲ್ಲಿ ಗುಂಡಿಕೆರೆಯ ಕುಂಡಂಡ ತಂಡವು ಪೇನತಂಡ ತಂಡವನ್ನು 2-0 ನೇರ ಸೆಟ್‌ಗಳಿಂದ ಪರಾಭವಗೊಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.

4ನೇ ಪಂದ್ಯದಲ್ಲಿ ಚಿಟ್ಟಡೆ ಕೂವಲೆರ (ಎ) ತಂಡವು ಪಡಿಯಾಣಿ ಅರೆಯಂಡ ತಂಡವನ್ನು 2-0 ಅಂತರಿದಂದ ಸೋಲಿಸಿತು. 5ನೇ ಪಂದ್ಯದಲ್ಲಿ ಕನ್ನಡಿಯಂಡ ತಂಡವು ಪುದಿಯಪೆರೆ ತಂಡವನ್ನು 2-0 ನೇರ ಸೆಟ್ಟಿನಲ್ಲಿ ಮಣಿಸಿತು. 2ನೇ ಸುತ್ತಿನ ಕೊನೆಯ ಪಂದ್ಯದಲ್ಲಿ ಚಿಟ್ಟಡೆಯ ಎರೆಟೆಂಡ (ಎ) ತಂಡವು ಪುಲಿಯಂಡ ತಂಡವನ್ನು 2-0 ನೇರ ಸೆಟ್‌ಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ