- ಕೊಪ್ಪದಲ್ಲಿ ೧೮,೬೧೯ ಗೃಹಲಕ್ಷ್ಮಿ ಫಲಾನುಭವಿಗಳು: ಓಣಿತೋಟ ರತ್ನಾಕರ್
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಮಾಸಿಕ ಸಭೆ ತಾಲೂಕು ಕಚೇರಿಯಲ್ಲಿ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.ಓಣಿತೋಟ ರತ್ನಾಕರ್ ಗ್ಯಾರಂಟಿ ಯೋಜನೆ ಬಗ್ಗೆ ಮಾಹಿತಿ ನೀಡಿ ಕೊಪ್ಪ ತಾಲೂಕಿನಲ್ಲಿ ಒಟ್ಟು ೧೮,೬೧೯ ಗೃಹಲಕ್ಷ್ಮಿ ಫಲಾನುಭವಿಗಳಿದ್ದು ಸೆಪ್ಟೆಂಬರ್ ಹಣ ಈ ವಾರದಲ್ಲಿ ಹಂತ ಹಂತ ವಾಗಿ ಬಿಡುಗಡೆಯಾಗುತ್ತಿದ್ದೂ ಒಟ್ಟು ೨೪ ಕಂತು ಹಣ ಜಮೆಯಾಗಲಿದೆ. ಗೃಹಜ್ಯೋತಿ ಯೋಜನೆಯಡಿ ೨೦೨೪ ರ ಏಪ್ರಿಲ್ ಮಾಹೆಯಿಂದ ೨೦೨೫ ನವೆಂಬರ್ ವರೆಗೆ ಕೊಪ್ಪ ತಾಲೂಕಿನಲ್ಲಿ ೨೨೭೧೪ ಕುಟುಂಬಗಳಿಗೆ ಉಚಿತ ವಿದ್ಯುತ್ ದೊರಯುತ್ತಿದ್ದೂ ಇಲ್ಲಿವರೆಗೆ ₹೧೮,0೨೭೪000 ಸರ್ಕಾರ ಭರಿಸಿದೆ. ಅನ್ನಭಾಗ್ಯ ಯೋಜನೆಯಡಿ ಕೊಪ್ಪ ತಾಲೂಕಿನಲ್ಲಿ ೧೫೭೪೮ ಕುಟುಂಬಗಳು ಹಾಗೂ ೪೩೯೯೩ ಫಲಾನುಭವಿಗಳು ಇದರ ಸೌಲಭ್ಯ ಪಡೆಯುತ್ತಿದ್ದು ಪ್ರತಿ ಕುಟುಂಬಕ್ಕೆ ೧೦ ಕೆಜಿ. ಅಕ್ಕಿ ವಿತರಣೆ ಆಗುತ್ತಿದೆ.
ಶಕ್ತಿ ಯೋಜನೆಯಡಿ ತಾಲೂಕಿನಲ್ಲಿ ೨೦೨೩-೨೪ ರಿಂದ ೨೦೨೫ ನವೆಂಬರ್ ರವರೆಗೆ ಚಿಕ್ಕಮಗಳೂರು ಹಾಗೂ ಶೃಂಗೇರಿ ಕ್ಷೇತ್ರದಿಂದ ಒಟ್ಟು ೨, ೭೪,೮೫000 ೧೦೧ ಜನ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಿದ್ದು ಒಟ್ಟು ₹೯೭,೭೫, ೧೫ ೫೯೧ ಸರ್ಕಾರ ಕೆ.ಎಸ್.ಆರ್.ಟಿ.ಸಿ.ಗೆ ಭರಿಸಿದೆ. ಯುವನಿಧಿ ಯೋಜನೆಯಡಿ ಇಲ್ಲಿವರೆಗೆ ತಾಲೂಕಿನಲ್ಲಿ ಒಟ್ಟು ೩೬೭ ಜನ ನೋಂದಣಿ ಮಾಡಿದ್ದು ೨೦೨೪ ಜನವರಿ ಇಂದ ೨೦೨೫ ರವರೆಗೆ ಒಟ್ಟು ₹೯೧,೬೩, ೫೦೦ ಗಳನ್ನು ಸರ್ಕಾರ ಭರಿಸಿದೆ. ತಾಲೂಕಿನಲ್ಲಿ ಇನ್ನೂ ೬೫೦ ಜನ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆಗಿದ್ದು ಈ ಸೌಲಭ್ಯದಿಂದ ವಂಚಿತರಾದವರಿಗೆ ಜನವರಿ ಅಂತ್ಯದ ಒಳಗೆ ಸೌಲಭ್ಯ ಒದಗಿಸಿ ಕೊಡಲಾಗುವುದು ಎಂದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ, ಕಾರ್ಯ ನಿರ್ವಹಣಾ ಅಧಿಕಾರಿಯಾದ ನವೀನ್, ಸಮಿತಿ ಎಲ್ಲಾ ಸದಸ್ಯರು, ೫ ಗ್ಯಾರಂಟಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.