)
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಗ್ರಹಾರ ಲೇಔಟ್ ನಿವಾಸಿ ಆಯೇಷಾ ಸಿದ್ಧಿಕಿ (39) ಕೊಲೆಯಾದ ದುರ್ದೈವಿ. ಈ ಹತ್ಯೆ ಮಾಡಿದ ಬಳಿಕ ಶರಣಾದ ಮೃತಳ ಪತಿ ಸೈಯದ್ ಜಬಿಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿ ನಡವಳಿಕೆ ಶಂಕಿಸಿ ಶುಕ್ರವಾರ ರಾತ್ರಿ ಜಬಿ ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಪತ್ನಿಯನ್ನು ಕೊಂದಿದ್ದಾನೆ ಎಂದು ತಿಳಿದು ಬಂದಿದೆ.
ಮನೆ ಸಮೀಪ ಬ್ಯೂಟಿ ಪಾರ್ಲರ್‌ನಲ್ಲಿ ಆಯೇಷಾ ಸಿದ್ಧಿಕಿ ಕೆಲಸ ಮಾಡುತ್ತಿದ್ದಳು. ಈ ಹಿಂದೆ ಎರಡು ಮದುವೆಯಾಗಿದ್ದ ಆಕೆ, ಕೆಲ ತಿಂಗಳ ಹಿಂದೆ ಜಬಿ ಜತೆ ಮೂರನೇ ವಿವಾಹವಾಗಿದ್ದಳು. ತನ್ನ ಮೊದಲ ಪತ್ನಿಯಿಂದ ಪ್ರತ್ಯೇಕಗೊಂಡು ಆಯೇಷಾ ಜತೆ ಜಬಿ ಎರಡನೇ ವಿವಾಹ ಮಾಡಿಕೊಂಡಿದ್ದ. ಆದರೆ ಮದುವೆ ಬಳಿಕ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಪತ್ನಿ ಚಾರಿತ್ರ್ಯದ ಮೇಲೆ ಆತನಿಗೆ ಅನುಮಾನವಿತ್ತು. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದವು. ಶುಕ್ರವಾರ ರಾತ್ರಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮೂಲಗಳು ಹೇಳಿವೆ.