ನಷ್ಟ ಕಳೆದು ಲಾಭದತ್ತ ಹೆಜ್ಜೆ ಹಾಕಿದ ಕೊಪ್ಪ ಪಿಕಾರ್ಡ್ ಬ್ಯಾಂಕ್

KannadaprabhaNewsNetwork |  
Published : Sep 22, 2024, 01:53 AM IST
ಸುದ್ಧಿಗೋಷ್ಠಿ | Kannada Prabha

ಸಾರಾಂಶ

ಕೊಪ್ಪ, ೯ ಕೋಟಿ ನಷ್ಟದಲ್ಲಿದ್ದ ಕೊಪ್ಪ ಪಿಕಾರ್ಡ್ ಬ್ಯಾಂಕ್ ಕಳೆದ ೫ ವರ್ಷಗಳಿಂದ ನಷ್ಟವನ್ನು ಭರಿಸಿ ಪ್ರಸಕ್ತ ವರ್ಷದಲ್ಲಿ ಬ್ಯಾಂಕಿನ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ೧.೪ ಕೋಟಿ ಲಾಭ ಗಳಿಸಿದೆ ಎಂದು ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್. ಇನೇಶ್ ಹೇಳಿದರು.

ನಾಳೆ ನೂತನ ಕಟ್ಟಡದ ಶುಭಾರಂಭ

ಕನ್ನಡಪ್ರಭ ವಾರ್ತೆ, ಕೊಪ್ಪ

೯ ಕೋಟಿ ನಷ್ಟದಲ್ಲಿದ್ದ ಕೊಪ್ಪ ಪಿಕಾರ್ಡ್ ಬ್ಯಾಂಕ್ ಕಳೆದ ೫ ವರ್ಷಗಳಿಂದ ನಷ್ಟವನ್ನು ಭರಿಸಿ ಪ್ರಸಕ್ತ ವರ್ಷದಲ್ಲಿ ಬ್ಯಾಂಕಿನ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ೧.೪ ಕೋಟಿ ಲಾಭ ಗಳಿಸಿದೆ ಎಂದು ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್. ಇನೇಶ್ ಹೇಳಿದರು.ಸೆ.೨೨ರ ಭಾನುವಾರ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ೯೪ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಸಭೆ ಪೂರ್ವಭಾವಿಯಾಗಿ ಪಟ್ಟಣದ ಬ್ಯಾಂಕಿನ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಈ ಭಾರಿ ಉತ್ತಮ ಪಿಕಾರ್ಡ್ ಬ್ಯಾಂಕ್ ಎಂದು ನಮ್ಮ ಬ್ಯಾಂಕಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಲಭಿಸಿದೆ. ಬ್ಯಾಂಕ್ ಉತ್ತಮ ಸಾಧನೆ ಮಾಡಲು ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ಶ್ರಮ ಅವಿಸ್ಮರಣೀಯ ಎಂದರು.ಕೊಪ್ಪ ಪಿಕಾರ್ಡ್ ಬ್ಯಾಂಕ್‌ನ ವ್ಯವಸ್ಥಾಪಕ ಅನಂತ ನಾಯ್ಕ್ ಕಾರ್ಯಕ್ರಮದ ವಿವರ ನೀಡಿ, ೨೨ರಂದು ಬೆಳಿಗ್ಗೆ ೧೦ ಗಂಟೆಗೆ ಬ್ಯಾಂಕಿನ ಆವರಣದಲ್ಲಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಪಟ್ಟಣದ ಪುರಭವನದಲ್ಲಿ ವಾರ್ಷಿಕ ಸಭೆ ಮತ್ತು ಸಮಾರಂಭ ನಡೆಯಲಿದೆ. ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮತ್ತು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಎಚ್.ಎಸ್. ಇನೇಶ್‌ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿರಲಿದ್ದು ಬ್ಯಾಂಕಿನ ಮಾಜಿ ಅಧ್ಯಕ್ಷರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿದೆ. ಬ್ಯಾಂಕಿನ ಎಲ್ಲಾ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ. ಉಪಾಧ್ಯಕ್ಷ ಹರೀಶ್ ವಿ., ನಿರ್ದೇಶಕರಾದ ಸಾಯಿನಾಥ್ ಕೆ., ಶ್ರೀನಿವಾಸ್ ಕೆ.ಆರ್., ಬಡಿಯಣ್ಣ ಎಚ್.ಎಂ., ರುಕ್ಮಿಣಿ ಎಚ್.ಆರ್., ಎನ್.ಎಲ್. ನಾಗೇಶ್, ನಾರಾಯಣ ಪೂಜಾರಿ, ವಿಷಯ ಪರಿಣಿತ ನಿರ್ದೇಶಕ ಜೆ.ಎಂ. ಶ್ರೀಹರ್ಷ ಮುಂತಾದವರು ಸುದ್ಧಿಗೋಷ್ಠಿಯಲ್ಲಿದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ