ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕೇಂದ್ರದಲ್ಲಿ ಮರೆವು ಕಾಯಿಲೆಗೆ ಚಿಕಿತ್ಸೆ

KannadaprabhaNewsNetwork |  
Published : Sep 22, 2024, 01:53 AM IST
ಚಿತ್ರ 21ಬಿಡಿಆರ್53 | Kannada Prabha

ಸಾರಾಂಶ

ಮರುವಿನ ಕಾಯಿಲೆ ಮುಖ್ಯ ಲಕ್ಷಣಗಳು ಕಂಡುಬಂದರೆ ಯಾರೂ ಭಯಪಡದೆ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕೇಂದ್ರವನ್ನು ಆರಂಭಿಸಲಾಗಿದೆ ಅದರ ಲಾಭ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಬೀದರ್‌

ಮರುವಿನ ಕಾಯಿಲೆ ಮುಖ್ಯ ಲಕ್ಷಣಗಳು ಕಂಡುಬಂದರೆ ಯಾರೂ ಭಯಪಡದೆ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕೇಂದ್ರವನ್ನು ಆರಂಭಿಸಲಾಗಿದೆ ಅದರ ಲಾಭ ಪಡೆಯಬೇಕು. ನರರೋಗ ವೈದ್ಯರು, ಶಾರೀರಿಕ ಚಿಕಿತ್ಸಕರು, ನರ್ಸ, ಮನೋವೈದ್ಯ ಮತ್ತು ಕಾರ್ಯಕ್ರಮ ಸಂಯೋಜಕರು ಈ ಕೇಂದ್ರದಲ್ಲಿ ಲಭ್ಯವಿರುವುದರಿಂದ ಉತ್ತಮ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಅಧಿಕಾರಿ ಡಾ.ಕಿರಣ ಪಾಟೀಲ್ ಹೇಳಿದರು.

ಅವರು ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2024-25ರ ಘೋಷವಾಕ್ಯ ಮರುವಿನ ಕಾಯಿಲೆ ವಿಶ್ವ ಅಲ್ಝೈಮರ್ ರೋಗ ನಿರ್ವಹಿಸಲು ಇದು ಸಕಾಲ ಎಂಬ ಘೋಷವಾಕ್ಯಯೊಂದಿಗೆ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಬೀದರ್‌ ಹಾಗೂ ಮದರ್‌ ತೆರೇಸಾ ವೃದ್ಧಾಶ್ರಮದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಲ್ಝೈಮರ್‌ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ ತೊಂದರೆ, ಜ್ಞಾಪಕ ಶಕ್ತಿಯ ನಷ್ಟ, ದೃಷ್ಟಿ ಮತ್ತು ಸ್ಥಳದ ಮಾಹಿತಿಯ ಸಮಸ್ಯೆ, ವರ್ತನೆ ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಭಾಷಾ ಸಮಸ್ಯೆ, ಮತ್ತು ಸ್ಥಳದ ಗೊಂದಲ, ದುರ್ಬಲ ಅಥವಾ ನಿರ್ಧಾರದಲ್ಲಿ ದೃಢತೆಯಿಲ್ಲದಿರುವುದಿಲ್ಲ, ವಸ್ತುಗಳನ್ನು ತಪ್ಪಾದ ಜಾಗದಲ್ಲಿಡುವುದು ಈ ಮರುವಿನ ಕಾಯಿಲೆ ಲಕ್ಷಣಗಳಾಗಿರುತ್ತದೆ. ಕಾರಣ ಸಾರ್ವಜನಿಕರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು ದೈನಂದಿನ ವ್ಯಾಯಾಮ, ಸತತವಾಗಿ ಮಾನಸಿಕ ವ್ಯಾಯಾಮಗಳು ಸಮತೋಲಿತ ಆಹಾರ ಸೇವನೆ, ಯೋಗ ಮತ್ತು ಧ್ಯಾನ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೀದರ್‌ನ ಮದರ್‌ ತೆರೇಸಾ ವೃದ್ಧಾಶ್ರಮದ ರವಿ ಜೋಸಫ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೇಟ್ಟಿ ಚೆನ್ನಶೆಟ್ಟಿ, ಸುದರ್ಶನ, ಕೃತಿ, ಮಲ್ಲಿಕಾರ್ಜುನ ಗುಡೆ, ರಾಕೇಶ ಸೇರಿದಂತೆ ಜಿಲ್ಲಾ ಸಂಯೋಜಕರು ಉಪಸ್ಥಿತರಿದ್ದರು.

PREV

Recommended Stories

ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​