ಧಾರವಾಡ-ಬೆಂಗಳೂರು ವಂದೇ ಭಾರತ್‌ 100% ಮುಂಗಡ ಬುಕ್ಕಿಂಗ್‌

Published : Aug 16, 2025, 09:57 AM IST
Vande bharat Train

ಸಾರಾಂಶ

ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್‌ ರೈಲಿನ ಜನಪ್ರಿಯತೆ ಹೆಚ್ಚುತ್ತಿದೆ. ಆದಾಯ ಸಂಗ್ರಹದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ವಂದೇ ಭಾರತ್‌ ಶೇಕಡ 100ಕ್ಕಿಂತ ಅಧಿಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಕಾಯ್ದುಕೊಂಡಿದೆ.

 ಹುಬ್ಬಳ್ಳಿ: ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್‌ ರೈಲಿನ ಜನಪ್ರಿಯತೆ ಹೆಚ್ಚುತ್ತಿದೆ. ಆದಾಯ ಸಂಗ್ರಹದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ವಂದೇ ಭಾರತ್‌ ಶೇಕಡ 100ಕ್ಕಿಂತ ಅಧಿಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಕಾಯ್ದುಕೊಂಡಿದೆ. 

ಉತ್ತಮ ವಾತಾವರಣ, ಸ್ವಚ್ಛತೆ, ಶುಚಿಯಾದ ಊಟ ಮತ್ತು ತ್ವರಿತವಾಗಿ ಗಮ್ಯಸ್ಥಾನ ತಲುಪಿಸಲು ಸಹಕಾರಿಯಾಗಿರುವ ರೈಲು ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಪ್ರಯಾಣ ದರ ಹೆಚ್ಚಿದ್ದರೂ ಸೌಲಭ್ಯ ಮತ್ತು ಮೇಕ್ ಇನ್ ಇಂಡಿಯಾದಡಿ ಆರಂಭವಾಗಿರುವ ರೈಲಿನಲ್ಲಿ ಸಂಚರಿಸುವುದೇ ಹೆಮ್ಮೆ ಎನ್ನುತ್ತಾರೆ ಪ್ರಯಾಣಿಕರು. 

ಪ್ರತಿ ತಿಂಗಳು ಅಂದಾಜು 12000ಕ್ಕಿಂತ ಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಶೇ.101ರಷ್ಟು ಬುಕ್ಕಿಂಗ್‌ನೊಂದಿಗೆ ₹1.30 ಕೋಟಿಗಿಂತಲೂ ಹೆಚ್ಚು ಆದಾಯ ಗಳಿಸುತ್ತಿದೆ.

PREV
Read more Articles on

Recommended Stories

ತುಂಗಭದ್ರಾ ಜಲಾಶಯದ 7 ಗೇಟ್‌ಗಳು ಸಂಪೂರ್ಣ ಜಾಂ!
ಭ್ರಷ್ಟಾಚಾರ, ಭಯೋತ್ಪಾದನೆ ಪಿಡುಗು ತೊಲಗಿಸಿ