ಮೂಲ್ಕಿ: ಇಲ್ಲಿಗೆ ಸಮೀಪದ ಪಡುಪಣಂಬೂರು ಮೂಡುತೋಟ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ಕೋರ್ದಬ್ಬು ಮತ್ತು ತನ್ನಿಮಾನಿಗ ದ್ಯೆವಗಳ ನೇಮೋತ್ಸವ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ಚಪ್ಪರ ಮುಹೂರ್ತ, ಸಂಜೆ ಚಪ್ಪರ ಏರಿ, ರಾತ್ರಿ ಪುನೋಡಿ ಭಂಡಾರ ಮನೆಯಿಂದ ಪಡುಪಣಂಬೂರು ಅರಮನೆಗೆ ದೈವಗಳ ಭಂಡಾರ ಹೊರಟು ದೈವಸ್ಥಾನಕ್ಕೆ ರಾತ್ರಿ ಆಗಮಸಿತು. ರಾತ್ರಿ ಅನ್ನಸಂತರ್ಪಣೆ, ಕೋರ್ದಬ್ಬು-ತನ್ನಿ ಮಾನಿಗ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭ ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು, ಅರ್ಚಕ ಉಮೇಶ್, ಚಂದ್ರಹಾಸ್ ಹೆಗ್ಡೆ ಬಾಳಿಕೆ ಮನೆ, ರಮೇಶ್ ಶೆಟ್ಟಿ ಮಾಗಂದಡಿ, ದೈವಸ್ಥಾನದ ಅಧ್ಯಕ್ಷ ಅನಿಲ್ ಶ್ಯಾಮ ಶೆಟ್ಟಿ ಮೂಡು ತೋಟ, ಉಪಾಧ್ಯಕ್ಷರಾದ ಪ್ರಕಾಶ್ ಭಟ್, ಶಿವರಾಮ ಶೆಟ್ಟಿ, ಮಾಧವ ಎಂ. ಶೆಟ್ಟಿ, ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ನವೀನ್ ಕುಮಾರ್ ಬಾಂಧಕೆರೆ, ಪ್ರಧಾನ ಕಾರ್ಯದರ್ಶಿ, ವಿನೇಶ್ ಶೆಟ್ಟಿ ಬಾಳಿಕೆಮನೆ, ಗೌರವ ಸಲಹೆಗಾರ ಗೌತಮ್ ಜೈನ್ ಮುಲ್ಕಿ ಅರಮನೆ, ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಶಂಕರ್ ಶೆಟ್ಟಿಗಾರ್ ಬೆಳ್ಳಾಯರು ಉಪಸ್ಥಿತರಿದ್ದರು.