ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಇದೇ ಮೊದಲ ಬಾರಿಗೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಯಲ್ಲಿ ಪಡೆದ ರ‍್ಯಾಂಕ್‌ಗೆ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎಷ್ಟು ಪರ್ಸೆಂಟ್‌ಗೆ ಎಲ್ಲಿ ಸರ್ಕಾರದ ಕೋಟಾದಡಿ ಸೀಟು ಸಿಗುತ್ತದೆ ಎಂಬುದರ ಬಗ್ಗೆ ವಿಶೇಷವಾದ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು. ಪಟ್ಟಣದ ತೀನಂಶ್ರೀ ಭವನದಲ್ಲಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ ಜ್ಞಾನಕಲ್ಪ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ರ‍್ಯಾಂಕ್ ಟು ರೈಟ್ ಚಾಯ್ಸ್ – ತಮ್ಮ ರ‍್ಯಾಂಕ್‌ಗೆ ಸರಿಯಾದ ಆಯ್ಕೆಯ ಮಾಹಿತಿ ಪ್ರಸರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಉಚಿತ ತರಬೇತಿಯಲ್ಲಿ ತರಬೇತಿ ಪಡೆದು ರ‍್ಯಾಂಕ್‌ಗಳಿಸಿರುವಂತಹ ವಿದ್ಯಾರ್ಥಿಗಳಿಗೆ ಗೊಂದಲವಿದ್ದು ನಮಗೆ ಯಾವ ಕೋರ್ಸ್ ಯಾವ ಕಾಲೇಜಿನಲ್ಲಿ ಯಾವ ರೀತಿ ಆಯ್ಕೆ ಮಾಡಬೇಕು ನಾವು ತೆಗೆದುಕೊಂಡಿರುವ ರ‍್ಯಾಂಕ್‌ಗೆ ಅವಕಾಶಗಳು ಎಷ್ಟಿವೆ ಎಂಬುದರ ಬಗ್ಗೆ ಕಾಲೇಜಿನಲ್ಲಿ ಕಟ್ಟುವಂತಹ ಶುಲ್ಕವೆಷ್ಟು ಈ ಎಲ್ಲಾ ಮಾಹಿತಿಯನ್ನೊಳಗೊಂಡಂತೆ ರ‍್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಇದರ ಬಗ್ಗೆ ಅನುಭವ ಇರುವಂತಹ ಕೆಇಎಯ ಪ್ರಾಧ್ಯಾಪಕರೊಂದಿಗೆ ಚರ್ಚೆ ಮಾಡಿ ಸರಿಯಾದ ಆಯ್ಕೆ ಸರಿಯಾಗಿ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಹೆಚ್ಚುಜನರಿಗೆ ಸರ್ಕಾರಿ ಕೋಟಾದಡಿ ಸೀಟು ಲಭ್ಯವಾಗಲಿದೆ ಎಂದು ಈ ತರಬೇತಿ ಆಯೋಜಿಸಲಾಗಿದೆ. ಈ ಬಾರಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಕೋರ್ಸ್‌ಳಿಗೆ ಹೋಗುತ್ತಾರೆ ಎಂಬ ಭರವಸೆ ಇದೆ ಆದ್ದರಿಂದ ಇದನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು. ಕೆಇಎ ನ ಸಂಪನ್ಮೂಲ ಪ್ರಾಧ್ಯಾಪಕಿ ದಿವ್ಯಮೂರ್ತಿ ಮಾತನಾಡಿ, ಪ್ರತಿಬಾರಿ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಸರಿಯಾದ ಆಯ್ಕೆ ಮಾಡದೇ ಸರ್ಕಾರಿ ಸೀಟುಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ಈ ರೀತಿಯ ಸಮಸ್ಯೆಗೆ ಶಾಸಕರಾದ ಸಿ.ಬಿ.ಸುರೇಶ್‌ಬಾಬು ಈ ರೀತಿಯಲ್ಲಿ ನಮ್ಮ ಮಕ್ಕಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಾಗಾರದ ಮೂಲಕ ಯಾವ ರ‍್ಯಾಂಕ್‌ಗೆ ಯಾವ ರೀತಿಯ ಶುಲ್ಕ, ಎಷ್ಟು ರ‍್ಯಾಂಕ್‌ಗೆ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್‌ಗೆ ಸೀಟು ಸಿಗಬಹುದು ಹಾಗೂ ಕಳೆದ ಬಾರಿ ಎಷ್ಟನೇ ರ‍್ಯಾಂಕ್‌ಗೆ ಸಿಟುಗಳು ಸಿಕ್ಕಿದ್ದವು ಎಂಬುದರ ಬಗ್ಗೆ ಮಾಹಿತಿ ತಿಳಿಸುವುದು ಇದರ ಉದ್ದೇಶವಾಗಿದೆ ಎಂದರು. ಬಿಇಒ ಕಾಂತರಾಜು ಸಿ.ಎಸ್ ಮಾತನಾಡಿ, ಇದೇ ಪ್ರಥಮ ಬಾರಿಗೆ ಈ ರೀತಿಯ ಕಾರ್ಯಗಾರವನ್ನು ಆಯೋಜಿಸಿದ್ದು ಹೆಮ್ಮೆಪಡುವ ವಿಷಯವಾಗಿದೆ ಬಹಳಷ್ಟು ನಮ್ಮ ವಿದ್ಯಾರ್ಥಿಗಳಿಗೆ ಕಾಲೇಜಿನ ಆಯ್ಕೆಯಲ್ಲಿ ತೊಂದರೆಯಾಗಿ ಅನೇಕರು ಸರಿಯಾದ ಕಾಲೇಜಿಗೆ ಸೇರುವುದೇ ಕಷ್ಟವಾಗುತ್ತದೆ ಹಾಗೂ ಕೋರ್ಸ್‌ಗಳ ಮತ್ತು ಯಾವ ಕೋರ್ಸ್ ನಮ್ಮ ಹಂತದಲ್ಲಿ ನಮ್ಮ ಆರ್ಥಿಕ ಮಟ್ಟದಲ್ಲಿ ಓದಬಹುದು ಎಂಬುದರ ಬಗ್ಗೆಯು ಮಾಹಿತಿ ಇರುವುದಿಲ್ಲ ಈ ಬಗ್ಗೆ ಕಾಲೇಜುಗಳ ಮಾಹಿತಿಯನ್ನು ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್‌ಕುಮಾರ್ , ಯೋಗಿಶ್, ಸಾಕ್ಯಗೌತಂ ಮಾತನಾಡಿದರು. ಈ ಸಂದರ್ಭದಲ್ಲಿ ಸಿಇಟಿ ಸಮಿತಿ ಅಧ್ಯಕ್ಸ ಹಾಗೂ ನಿವೃತ್ತ ಬಿಇಒ ಸಾ.ಚಿ.ನಾಗೇಶ್, ಸಿಇಟಿ ಸಮಿತಿಯ ಸದಸ್ಯರುಗಳಾದ ಉಮೇಶ್, ಓಂ ಪ್ರಕಾಶ್, ಎಂ.ಎಸ್.ರವಿಕುಮಾರ್ ಸೇರಿದಂತೆ ಇತರರು ಇದ್ದರು.ಸರಿಯಾಗಿ ಕಾಲೇಜು ಆಯ್ಕೆ ಮಾಡಿದರೆ ಉತ್ತಮ ಭವಿಷ್ಯ
ಇದೇ ಮೊದಲ ಬಾರಿಗೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಯಲ್ಲಿ ಪಡೆದ ರ‍್ಯಾಂಕ್‌ಗೆ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎಷ್ಟು ಪರ್ಸೆಂಟ್‌ಗೆ ಎಲ್ಲಿ ಸರ್ಕಾರದ ಕೋಟಾದಡಿ ಸೀಟು ಸಿಗುತ್ತದೆ ಎಂಬುದರ ಬಗ್ಗೆ ವಿಶೇಷವಾದ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.