- ನ್ಯಾಮತಿ ಪಟ್ಟಣ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಮಾಸಾಶನಗಳನ್ನು ತಡೆಹಿಡಿದಿರುವ ಸರ್ಕಾರ ಕೂಡಲೇ ನೀಡಬೇಕು. ಆಗಸ್ಟ್ 15ರೊಳಗೆ ತಾಲೂಕಿನ ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ಪಟ್ಟಣದ ಶ್ರೀ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪಟ್ಟಣದ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ₹519 ಕೋಟಿ ವೆಚ್ಚದಲ್ಲಿ ತುಂಗಾಭದ್ರಾ ನದಿಯಿಂದ ಕೆರೆ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸಲು ಯೋಜನೆ ರೂಪಿಸಿ ಪೈಪ್‌ಲೈನ್ ಮಾಡಿಸಿ, ಪ್ರತಿ ಹಳ್ಳಿಗಳ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು ಯೋಜನೆಯ ಕಾಮಗಾರಿ ಮುಗಿಸಿದ್ದೇವು. ಆದರೆ, ಈಗಿನ ಶಾಸಕರು ನಾವೇ ಅನುದಾನ ತಂದು ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈಗಿನ ಸರ್ಕಾರ ಪಿಂಚಣಿಗಳನ್ನೇ ಕೊಡುತ್ತಿಲ್ಲ. ಈಗಿನ ಸರ್ಕಾರದಿಂದಾಗಲಿ, ಶಾಸಕರಿಂದಾಗಲಿ ಒಂದು ಬಿಡಿಗಾಸು ಅನುದಾನವಿಲ್ಲ ಎಂದ ಅವರು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲು ಸಿದ್ಧತೆ ಮಾಡಿಕೊಳ್ಳೋಣ ಎಂದರು.
ಒಬಿಸಿ ಜಿಲ್ಲಾ ಅಧ್ಯಕ್ಷ ಬೇಲಿಮಲ್ಲೂರು ಬೀರಪ್ಪ, ಪಟ್ಟಣ ಬಿಜೆಪಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಿ.ಪಿ.ಮೋಹನ್‌ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ನಿಕಟಪೂರ್ವ ಅಧ್ಯಕ್ಷ ಹುರುಕಡ್ಲಿ ವಿರೂಪಾಕ್ಷಪ್ಪ, ಹವಳದ ಲಿಂಗರಾಜು ಮಾತನಾಡಿದರು.
ಬಿಜೆಪಿ ಒಬಿಸಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ಕುಬೇರಪ್ಪ, ಒಬಿಸಿ ಅಧ್ಯಕ್ಷ ಕತ್ತಿಗೆ ರಘು, ಹೊನ್ನಾಳಿ ನಗರ ಅಧ್ಯಕ್ಷ ನವೀನ್ ಇಂಚರ, ತರಗನಹಳ್ಳಿ ರೈತ ಮೋರ್ಚಾ ಅಧ್ಯಕ್ಷ ರಮೇಶ ಗೌಡ, ಮಾರುತಿ ನಾಯ್ಕ, ನೆಲಹೊನ್ನೆ ಮಂಜುನಾಥ, ಎಸ್‌ಟಿ ಮೋರ್ಚಾ ಅಧ್ಯಕ್ಷ ರುದ್ರೇಶ್, ನ್ಯಾಮತಿ ತಾ.ಪಂ. ಮಾಜಿ ಸದಸ್ಯ ಕೋಡಿಕೊಪ್ಪ ಎಸ್.ಪಿ.ರವಿಕುಮಾರ್, ಬಿ.ಸೋಮಶೇಖರ್ ವಾಲ್ಮೀಕಿ ಮತ್ತಿತರರಿದ್ದರು.
ನ್ಯಾಮತಿ ಪಟ್ಟಣ ಬಿಜೆಪಿ ಪದಾಧಿಕಾರಿಗಳು:ಅಧ್ಯಕ್ಷರಾಗಿ ಜಿ.ಪಿ.ಮೋಹನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ರಾಯ್ಕರ್, ಈಶಣ್ಣ ಬಂಡಿ, ಉಪಾಧ್ಯಕ್ಷ ಸೋಗಿ ರಾಜಣ್ಣ, ಕುಂಬಾರ ತೀರ್ಥಪ್ಪ, ಸಣ್ಣ ಮಂಜಪ್ಪ ರೆಡ್ಡಿ, ಎ.ಕೆ.ಸುರೇಶ್, ಬಾಲರಾಜ್, ಪ್ರಕಾಶ್ ಎಚ್., ಖಜಾಂಚಿ ಕಾಶೀನಾಥ್ ಆಚಾರ್, ಕಾರ್ಯದರ್ಶಿ ಎಂ.ಪಿ.ಪ್ರಭು, ಸುಂದರೇಶ್ ರಬ್ಬಳಗಿ, ಹಲಗೇರಿ ವಿಜಯಕುಮಾರ್, ಜ್ಯಾನೋಬರಾವ್, ಗಿರೀಶ್ ದೊಡ್ಡಮನೆ, ಎ.ಕೆ.ಹರೀಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನೂತನ ಅಧ್ಯಕ್ಷ ಜಿ.ಪಿ.ಮೋಹನ್‌ಕುಮಾರ್ ತಿಳಿಸಿದರು.
- - --ಚಿತ್ರ:
ನ್ಯಾಮತಿ ಪಟ್ಟಣ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಎಂ.ಪಿ.ರೇಣುಕಾಚಾರ್ಯ ನೂತನ ಪದಾಧಿಕಾರಿಗಳಿಗೆ ಪಕ್ಷದ ಧ್ವಜವನ್ನು ನೀಡಿದರು.