-ಸ್ಮಾಲ್‌ ಕಿಕ್ಕರ್‌

ಸಚಿವಸ್ಥಾನ ಅಭಾಗ್ಯ

--

-ಇದು ತಮ್ಮ ಕೊನೆಯ ಚುನಾವಣೆ ಎನ್ನುತಲೆ ಹೈಕಮಾಂಡ್‌ಗೆ ಬೇಡಿಕೆ ಇಟ್ಟಿದ್ದ ಬಿಆರ್‌ ಪಾಟೀಲರು

----


ಕನ್ನಡಪ್ರಭ ವಾರ್ತೆ ಕಲಬುರಗಿಸಚಿವಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜಿಲ್ಲೆಯ ಆಳಂದ ಮತಕ್ಷೇತ್ರದ ಶಾಸಕರಾದ ಬಿಆರ್‌ ಪಾಟೀಲ್‌, ಕಲಬುರಗಿ ಉತ್ತರ ಶಾಸಕಿ ಖನೀಜ್‌ ಫಾತೀಮಾ ಅವರಿಗೆ ಸಚಿವ ಸ್ಥಾನ ದೊರಕದೆ ನಿರಾಶೆಯಾಗಿದೆ.

ಆಳಂದದ ಬಿಆರ್‌ ಪಾಟೀಲರು ತಮ್ಮಕೊನೆಯ ಚುನಾವಣೆ ಎಂದು ಹೇಳುತ್ತ ಹೈಕಮಾಂಡ್‌ನಲ್ಲಿ ಸಚಿವ ಗಿರಿಗೆ ಬೇಡಿಕೆ ಮಂಡಿಸಿದ್ದರು.

ಸಿದ್ದರಾಮಯ್ಯನವರ ಆಪ್ತರಾಗಿದ್ದರಿಂದ ಆ ಕಡೆಯಿಂಲೂ ಸಚಿವಸ್ಥಾನಕ್ಕೆ ಶಿಫಾರಸು ಕೂಡಾ ಬಂದಿತ್ತಾದರೂ ಜಾತಿ, ಸಮುದಾಯದ ಲೆಕ್ಕಾಚಾರದಲ್ಲಿ ಬಿಆರ್‌ ಪಾಟೀರಿಗೆ ಸಚಿವಗಿರಿ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಜಿಲ್ಲೆಯಲ್ಲಿ ಲಿಂಗಾಯಿತ ಸಮಾಜದ ಪರವಾಗಿ ಡಾ. ಶರಣಪ್ರಕಾಶ ಪಾಟೀಲರಿಗೆ ಮಂತ್ರಿ ಸ್ಥಾನ ನೀಡಲಾಗಿದೆ, ಮತ್ತೆ ಅದೇ ಸಮುದಾಯಕ್ಕೆ ಹೇಗೆ ಮಣೆ ಹಾಕೋದು ಎಂಬ ಪರ್ಯಾಯ ವ್ಯವಸ್ಥೆಯಿಂದ ಬಿಆರ್‌ ಅವರಿಗೆ, ಸಚಿವಗಿರಿ ಕೈಗೆಟುಕಿಲ್ಲ ಎನ್ನಲಾಗುತ್ತಿದೆ.

ಇನ್ನು ವಿಧಾನಸಭ ಸ್ಪೀಕರ್‌ ಹುದ್ದೆಯಾದರೂ ತಮಗೆ ದೊರಕುವ ನಿರೀಕ್ಷೆ ಬಿಆರ್‌ ಪಾಟೀಲರಿಗೆ ಕೈತಪ್ಪಿದ್ದು ರೋಣ ಶಾಸಕ ಜಿಎಸ್‌ ಪಾಟೀಲರ ಪಾಲಾಗಿದೆ.

ಮುಸ್ಲಿಂ ಸಮುದಾಯಕ್ಕೆ, ಅದರಲ್ಲೂ ಮಹಿಳೆಗೆ ಮಂತ್ರಿಗಿರಿ ನೀಡಬೇಕೆಂಬ ಚರ್ಚೆಯಲ್ಲಿ ಕಲಬುರಗಿ ಉತ್ತರ ಶಾಸಕಿ ಖನೀಜ್‌ ಫಾತೀಮಾ ಅವರ ಹೆಸರು ಚರ್ಚೆಯಲ್ಲಿತ್ತಾದರೂ ಅವರಿಗೂ ಸಚಿವಗಿರಿ ಕೈತಪ್ಪಿದೆ.

ಕಳೆದ ಲೋಸಕಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಗೆಲುವಿಗೆ 50 ಸಾವಿರಕ್ಕೂ ಅಧಿಕ ಮತಗಳ ಬಹುಮತ ಉತ್ತರದಲ್ಲೇ ನೀಡಲಾಗಿತ್ತು. ಖನೀಜ್‌ ಫಾತೀಮಾ ಅವರ ಶ್ರಮ ಇದರಲ್ಲಡಗಿದ್ದು, ಗುಟ್ಟೇನಲ್ಲ. ಹೀಗಾಗಿ ಅವರಿಗೆ ಸಚಿವಸ್ಥಾನ ನೀಡುವ ಮಾತುಗಳು ಕೇಳಿಬಂದಿದ್ದವಾದರೂ ಅಂತಿಮವಾಗಿ ಖನೀಜ್‌ ಫಾತೀಮಾ ಅವರಿಗೆ ಮಂತ್ರಿಸ್ಥಾನ ಕೈಗೆಟುಕದೆ ಹೋಗಿದೆ.

.........ಬಾಕ್ಸ್‌.......

ಕಲಬುರಗಿಗೆ ಮೂವರು ಸಚಿವರು: ಅಭಿವೃದ್ಧಿಗೆ ಸಕಾಲ

ಡಾ. ಅಜಯ್‌ ಸಿಂಗ್‌ ಚೊಚ್ಚಿಲ ಸಚಿವರಾಗುವ ಮೂಲಕ ಜಿಲ್ಲೆಗೆ ಒಟ್ಟು ಮೂರು ಸಚಿವ ಸ್ಥಾನ ದೊರಕಿದಂತಾಗಿದೆ. ಈಗಾಗಲೇ ಡಿಕೆಶಿ ಅವರೊಂದಿಗೇ ಪ್ರಿಯಾಂಕ್‌ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್‌ ಸಚಿವರಾಗಿದ್ದರು. ಇದೀಗ ವಿಸ್ತರಣೆಯಲ್ಲಿ ಡಾ. ಅಜಯ್‌ ಸಿಂಗ್‌ ಅವರಿಗೆ ಸಚಿವಸ್ಥಾನ ನೀಡಲಾಗಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಗೆ ಮತ್ತೆ ಮೂರು ಸಚಿವಸ್ಥಾನ ದೊರಕಿದ್ದು ಗಮನ ಸೆಳೆಯಲಿದೆ. ನಗರ, ಜಿಲ್ಲೆಗೆ ಮೂಲ ಸವಲತ್ತು ಲಭಿಸಲಿವೆಯೇ ಎಂದು ಜನರು ಎದುರು ನೋಡುತ್ತಿದ್ದಾರೆ. ಮೂವರು ಸಚಿವರ ಮೇಲೆ ಗುರುತರ ಹೊಣೆಗಾರಿಕೆ, ಸವಾಲು ಸಚಿವರ ಮುಂದಿದೆ.

ಕಲಬುರಗಿ ಸರ್ವತೋಮುಖ ಪ್ರಗತಿಗೆ ಕೆಲಸ ಮಾಡಲು ಯುವ ಸಚಿವರಿಗೆ ಇದು ಸಕಾಲ ಎಂದು ಜನರ ಮಾತಾಗಿದೆ.

-----------

ಸಚಿವಸ್ಥಾನ ಸಿಗದೆ ನಿರಾಶೆ:

ಫೋಟೋ- ಬಿಆರ್‌ ಪಾಟೀಲ್‌

ಫೋಟೋ- ಖನೀಜ್‌ ಫಾತೀಮಾ

-------------------------------

ಕಲಬುರಗಿಗೆ ಮೂವರು ಸಚಿವರು:

ಶರಣಪ್ರಕಾಶ ಪಾಟೀಲ್‌

ಪ್ರಿಯಾಂಕ್‌ ಖರ್ಗೆ

ಡಾ. ಅಜಯ್‌ ಸಿಂಗ್‌