ಕೋರೆಗಾಂವ್‌ ದಲಿತರ ಸ್ವಾಭಿಮಾನದ ಸಂಘರ್ಷ: ಸುರೇಶ್‌ ಕಂಠಿ

KannadaprabhaNewsNetwork |  
Published : Jan 02, 2026, 02:30 AM IST
1ಕೆಎಂಎನ್‌ಡಿ-11ಕೆ.ಎಂ.ದೊಡ್ಡಿಯ  ಸರ್.ಎಂ ವಿಶ್ವೇಶ್ವರಯ್ಯ ವೃತ್ತದಲ್ಲಿ ಶೋಷಿತ ಸಮುದಾಯಗಳ ವೇದಿಕೆ ಮದ್ದೂರು ತಾಾಲೂಕು ಘಟಕದ ವತಿಯಿಂದ 208 ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ಜರುಗಿತು. | Kannada Prabha

ಸಾರಾಂಶ

ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಇಪ್ಪತ್ತೆಂಟು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು-ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದಂತಹ ಯುದ್ಧಗಳು ಸಾಕಷ್ಟಿವೆ. ಆದರೆ, ಸ್ವಾಭಿಮಾನಕ್ಕಾಗಿ, ಶೋಷಿತರ ಹಿತಕ್ಕಾಗಿ ಮೊಟ್ಟ ಮೊದಲಿಗೆ ಹಾಗೂ ಕೊನೆಯದಾಗಿ ನಡೆದ ಯುದ್ಧವೆಂದರೆ ಅದೇ ಈ ಭೀಮಾ ಕೋರೆಗಾಂವ್‌ ಯುದ್ಧ. ದಲಿತರ ಚಾರಿತ್ರಿಕ ಇತಿಹಾಸದಲ್ಲಿ ಎಂದಿಗೂ ಮಾಸದ ಸ್ವಾಭಿಮಾನಿ ಸಂಘರ್ಷವಾಗಿದೆ ಎಂದು ರಾಜ್ಯ ಶೋಷಿತ ಸಮುದಾಯಗಳ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.

ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಮದ್ದೂರು ತಾಲೂಕು ಘಟಕದಿಂದ ಭೀಮಾ ಕೋರೆಗಾಂವ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಇಪ್ಪತ್ತೆಂಟು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು-ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು-ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ನಡೆಸಿ ಗೆಲುವು ಕಂಡಿದ್ದು. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೆಗಾಂವ್‌ ಯುದ್ಧ’ವಾಗಿದೆ ಎಂದರು.

ಭಾರತಿನಗರ ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಅಮಿನ್ ಶಿವಲಿಂಗಯ್ಯ, ಮಾಜಿ ಅಧ್ಯಕ್ಷ ಕೆ.ಕಬ್ಬಾಳಯ್ಯ, ತಾಲೂಕು ಘಟಕದ ಅಧ್ಯಕ್ಷ ಕರಡಕೆರೆ ಯೋಗೇಶ್, ಟಿಬಿಹಳ್ಳಿ ಸಂತೋಷ್, ವಕೀಲರಾದ ಶ್ರೀನಿವಾಸ್, ಮುಡಿನಹಳ್ಳಿ ತಿಮ್ಮಯ್ಯ, ಗ್ರಾಪಂ ಸದಸ್ಯ ಈ ರುದ್ರಯ್ಯ, ಡಿ.ಎ ಕೆರೆ ಸಣ್ಣಪ್ಪ, ಶಿವಣ್ಣ, ಶಿವಲಿಂಗಯ್ಯ, ಚಂದ್ರಶೇಖರ್, ಚಿಕ್ಕಮೊಗ,ಜಗ್ಗಿ ,ನಿಂಗಣ್ಣ, ಪುಟ್ಟಸ್ವಾಮಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು