ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಕಲಾ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿರವರ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಿಷ್ಠೆ, ಛಲ, ಹಠ, ಕಲೆ ಮತ್ತು ಸಾಧನೆ ಮಾಡುವ ಗುರಿ ಹೊಂದಿದ ವ್ಯಕ್ತಿಯಿಂದ ಮಾತ್ರ ಕಲ್ಲಿನಲ್ಲಿ ಕಾವ್ಯ ಕೆತ್ತಲು ಸಾಧ್ಯ. ಅದಕ್ಕೆ ಉದಾಹರಣೆ ಜಕಣಾಚಾರಿ. ಯಾವುದೇ ಕೆಲಸವಾದರೂ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುತ್ತಿದ್ದರು. ಇಂದಿನ ಯುವ ಪೀಳಿಗೆಗೆ ಜಕಣಾಚಾರಿ ಸ್ಪೂರ್ತಿ ಎಂದರು.ಇಂದಿನ ಆಧುನಿಕ ಕಾಲದಲ್ಲಿ ಎಲ್ಲ ಕಾರ್ಯಗಳು ತತ್ವರಿತವಾಗಿ ಪೂರ್ಣಗೊಳ್ಳಬೇಕು ಎಂಬ ಮನೋಭಾವನೆ ಇದೆ. ಆದರೆ ಜಕಣಾಚಾರಿ ಅವರ ಯಶಸ್ಸು ಮಂದಗತಿಯಲ್ಲಿ ಬಂದರೂ ಸಹ ಕಾರ್ಯ ಪರಿಪಕ್ವವಾಗಿ ಇರಬೇಕು ಎಂದು ನಂಬಿದ್ದರು. ಯಶಸ್ಸು ಗಳಿಸಲು ತಾಳ್ಮೆ, ಸಂಯಮ ಅಗತ್ಯ ಎಂದು ತೋರಿಸಿಕೊಟ್ಟವರು ಜಕಣಾಚಾರಿ ಎಂದು ಬಣ್ಣಿಸಿದರು.
ಜಕಣಚಾರ್ಯ ಅವರು ಕೇವಲ ವ್ಯಕ್ತಿಯಾಗಿ ಅಲ್ಲದೆ ಶ್ರಮದ ಸಂಕೇತವಾಗಿ ನಾವು ನೋಡಬಹುದು. ಯುವ ಪೀಳಿಗೆ ಅವರು ಜಗತ್ತಿಗೆ ನೀಡಿದ ಮೌಲ್ಯ ಮತ್ತು ಆದರ್ಶಗಳನ್ನು ತಿಳಿದುಕೊಳ್ಳಬೇಕು.ವ್ಯಕ್ತಿಗಳಿಗೆ ಆಪತ್ತು ಸಂಭವಿಸಬಹುದು ಆದರೆ ವ್ಯಕ್ತಿಯ ಕಲೆಗಳಿಗೆ ವಿಪತ್ತು ಸಂಭವಿಸುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಡಾ ಜಿಲ್ಲಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬೋರೇಗೌಡ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುಮಲಾಚಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ವಿಶ್ವಕರ್ಮ ಸಮಾಜದ ಮುಖಂಡರಾದ ಸುದರ್ಶನ್, ರಮೇಶ್, ಸೋಮಶೇಖರ್, ಶ್ರೀನಿವಾಸ್ ಇತರರಿದ್ದರು.
ವರ್ಣರಂಜಿತ ಬೆಳ್ಳಿ ರಥದ ಮೇಲೆ ಇರಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಪುಷ್ಪಾರ್ಚನೆ ಮಾಡಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.