ಕನ್ನಡಪ್ರಭವಾರ್ತೆ ಮಳವಳ್ಳಿ
ಭೀಮಾ ಕೋರೆಗಾಂವ್ ವಿಜಯೋತ್ಸವ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿದ ನಂತರ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕೋರೆಗಾಂವ್ ವಿಜಯೋತ್ಸವಕ್ಕೆ ಶುಭ ಕೋರಿದರು.
ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘ ಅಧ್ಯಕ್ಷ ಎಚ್.ಎಂ.ಮಹೇಶ್, ಉಪಾಧ್ಯಕ್ಷ ಸಂತೋಷ್, ಕಾರ್ಯದರ್ಶಿ ಶಂಕರ್, ಮಂಜುನಾಥ್, ಖಜಾಂಚಿ ನವೀನ್‌ಪ್ರಕಾಶ್, ಮುಖಂಡರಾದ ಮಾರ್ಕಾಲು ಸಿ. ಮಾಧು, ವೇದಮೂರ್ತಿ, ಸಿದ್ದರಾಜು, ಕಿರಣ್, ರಾಘವೇಂದ್ರ, ರಾಜು, ಅರವಿಂದ್, ಮಹದೇವಯ್ಯ, ರವೀಂದ್ರ, ಸಂದೀಪ್‌ಕುಮಾರ್ ಸೇರಿದಂತೆ ಇತರರರಿದ್ದರು.ಭೀಮಾ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ಜನಪರ ಸಂಘಟನೆಗಳ ಮುಖಂಡರು ಪಟ್ಟಣದ ತಾಲೂಕು ಕಚೇರಿಯಿಂದ ಪ್ರವಾಸಿ ಮಂದಿರದ ಮುಂಭಾಗದ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅವರಿಗೆ ತಮಟೆಯೊಂದಿಗೆ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಾಧ್ಯಕ್ಷ ಸುರೇಶ್ ಮಾತನಾಡಿ, ಮಹಾರ್ ಸೈನಿಕರಂತಹ ವೀರರು ಪ್ರತಿಯೊಂದು ಮನೆಯಲ್ಲಿ ಹುಟ್ಟಬೇಕು. ಜನಪರ ಸಂಘಟನೆಗಳೊಂದಿಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.