ಕೋಟ: ನಿವೃತ್ತ ಶಿಕ್ಷಕರ ಸಾಹಿತ್ಯಿಕ ಸಮಾವೇಶ, ಗುರುವಂದನೆ

KannadaprabhaNewsNetwork |  
Published : Sep 23, 2025, 01:05 AM IST
22ಕೋಟಾ | Kannada Prabha

ಸಾರಾಂಶ

ಶಿವರಾಮ ಕಾರಂತ ಮಕ್ಕಳ ವೇದಿಕೆ, ಸಾಲಿಗ್ರಾಮ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಗೀತಾನಂದ ಫೌಂಡೇಶನ್ ಕೋಟ, ಕೋಟ ವಿದ್ಯಾ ಸಂಘ ಕೋಟ ಸಹಯೋಗದಲ್ಲಿ ನಿವೃತ್ತ ಶಿಕ್ಷಕರ ಸಾಹಿತ್ಯಿಕ ಸಮಾವೇಶ ಮತ್ತು ಗುರುವಂದನೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಶಿಕ್ಷಕರ ಬದುಕು ಹಾಗೂ ಅವರ ಅನುಭವ ಶ್ರೇಷ್ಠವಾದದ್ದು. ಅವರನ್ನು ನಿವೃತ್ತಿಯ ನಂತರವೂ ಗುರುತಿಸುವುದು ಅವರ ಬದುಕಿನ ಸಾರ್ಥಕತೆಗೆ ಸಾಕ್ಷಿಯಾಗಿರುತ್ತದೆ ಎಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು.ಅವರು ಭಾನುವಾರ ಡಾ. ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆ, ಸಾಲಿಗ್ರಾಮ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಗೀತಾನಂದ ಫೌಂಡೇಶನ್ ಕೋಟ, ಕೋಟ ವಿದ್ಯಾ ಸಂಘ ಕೋಟ ಸಹಯೋಗದಲ್ಲಿ ನಿವೃತ್ತ ಶಿಕ್ಷಕರ ಸಾಹಿತ್ಯಿಕ ಸಮಾವೇಶ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳ‍ನ್ನಾಡಿದರು.

ಈ ಸಂದರ್ಭ ಈ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರಾದ ಮಂಜುನಾಥ್ ಉಪಾಧ್ಯಾಯ, ಜಗದೀಶ್ ಹೊಳ್ಳ, ರಮೇಶ್ ನಕ್ಷತ್ರಿ, ಪ್ರಭಾಕರ ಕಾಮತ್ ಅವರನ್ನು ಸನ್ಮಾನಿಸಲಾಯಿತು.ಹಿರಿಯ ನಿವೃತ್ತ ಹಿರಿಯ ಶಿಕ್ಷಕ ರಾಮಕೃಷ್ಣ ಉಪಾಧ್ಯಾಯ, ಆನಂದರಾಮ ವಾಕುಡ, ರಾಮದೇವ ಹಂದೆ, ಮಹಾಬಲೇಶ್ವರ ಉರಾಳ, ರಂಗಯ್ಯ ಅಡಿಗ, ರಂಗಪ್ಪಯ್ಯ ಹೊಳ್ಳ, ಸೂರ್ಯನಾರಾಯಣ ಹೇರ್ಳೆ, ರಾಘವೇಂದ್ರ ಭಟ್ ಅವರನ್ನು ಗೌರವಿಸಲಾಯಿತು.

ಸಭೆಯಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ.ನಾಗೇಶ್ ಆರೋಗ್ಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಡಾ. ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆಯ ಅಧ್ಯಕ್ಷ ಸಿ.ಉಪೇಂದ್ರ ಸೋಮಯಾಜಿ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಪಿ. ನರಸಿಂಹ ಐತಾಳ್ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೇ ವಂದಿಸಿದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ನಾಗೇಶ್ ಮಯ್ಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ