ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದಿಂದ ಮಾ.10ರಂದು ಬೆಳಗ್ಗೆ 9 ಗಂಟೆಗೆ ಎನ್‌ಇಎಸ್ ಮೈದಾನದಲ್ಲಿ 7ನೇ ಬಾರಿಗೆ ರಾಜ್ಯಮಟ್ಟದ ಟಗರು ಕಾಳಗವನ್ನು ಏರ್ಪಡಿಸಲಾಗಿದೆ. ಟಗರುಗಳ ಹಲ್ಲುಗಳನ್ನು ಆಧರಿಸಿ, ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಯಲಿದೆ.ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟಗರು ಕಾಳಗಕ್ಕೆ ಚಾಲನೆ ನೀಡುವರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅತಿಥಿಗಳಾಗಿ ಭಾಗವಹಿಸುವರು.
8 ಹಲ್ಲಿನ ಟಗರುಗೆ ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹50 ಸಾವಿರ, 3ನೇ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇದೆ. ಈ ವಿಭಾಗದಕ್ಕೆ ಪ್ರವೇಶ ದರ ₹2,500 ನಿದಿಪಡಿಸಲಾಗಿದೆ.6 ಹಲ್ಲಿನ ಟಗರಿಗೆ ಪ್ರಥಮ ಬಹುಮಾನ ₹50 ಸಾವಿರ, ದ್ವಿತೀಯ ಬಹುಮಾನ ₹25 ಸಾವಿರ, ತೃತೀಯ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇದೆ. ₹2 ಸಾವಿರ ಪ್ರವೇಶ ದರ ನಿಗದಿಪಡಿಸಲಾಗಿದೆ.
4 ಹಲ್ಲಿನ ಟಗರಿಗೆ ಪ್ರಥಮ ಬಹುಮಾನ ₹40 ಸಾವಿರ, ದ್ವಿತೀಯ ₹20 ಸಾವಿರ, ತೃತೀಯ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿಯಿದ್ದು, ಈ ವಿಬಾಗದಲ್ಲಿ ₹1,500 ಪ್ರವೇಶ ದರ ನಿಗದಿಪಡಿಸಲಾಗಿದೆ.2 ಹಲ್ಲಿನ ಕುರಿಗೆ ಪ್ರಥಮ ಬಹುಮಾನ ₹30 ಸಾವಿರ, ದ್ವಿತೀಯ ಬಹುಮಾನ ₹15 ಸಾವಿರ, 3ನೇ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇರಿಸಿದ್ದು, ₹1000 ಪ್ರವೇಶ ದರ ನಿಗದಿಪಡಿಸಲಾಗಿದೆ.
ಮರಿಟಗರಿಗೆ ಪ್ರಥಮ ಬಹುಮಾನ ₹15 ಸಾವಿರ, ದ್ವಿತೀಯ ಬಹುಮಾನ ₹7,500, ತೃತೀಯ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನವಾಗಿ ಟ್ರೋಫಿ ನೀಡಲಿದ್ದು, ಈ ವಿಭಾಗದಲ್ಲಿ ₹800 ಪ್ರವೇಶ ದರ ಇರಲಿದೆ. ಸ್ಪರ್ಧೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ. 98458 61242, 97407 59858 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.- - -
-ಟಗರು.ಜೆಪಿಜಿ:(-ಸಾಂದರ್ಭಿಕ ಚಿತ್ರ)