ಉತ್ತಮ ಸಮಾಜ ನಿರ್ಮಾಣಕ್ಕೆ ಕೃಷ್ಣ ಪ್ರೇರಣೆ: ಶುಭಾ ರಘು

KannadaprabhaNewsNetwork |  
Published : Aug 20, 2025, 01:30 AM IST
ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶಿಶುವನ್ನು ತೊಟ್ಟಿಲಲ್ಲಿ ತೂಗುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.  | Kannada Prabha

ಸಾರಾಂಶ

ಸಮಾಜದಲ್ಲಿನ ಅನೀತಿ, ಅಧರ್ಮವನ್ನು ಮೆಟ್ಟಿ ಧರ್ಮ ಸ್ಥಾಪನೆಗೆ ಶ್ರೀಕೃಷ್ಣ ಪರಮಾತ್ಮ ಅವತರಿಸಿದ್ದು, ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರದಂತಹ ಅಧರ್ಮವನ್ನು ಮೆಟ್ಟಿ ನಿಂತು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರಿಗೂ ಶ್ರೀಕೃಷ್ಣ ಪ್ರೇರಣೆಯಾಗಲಿ ಎಂದು ತಾ.ಬಿಜೆಪಿ ಖಜಾಂಚಿ ಶುಭಾ ರಘು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜದಲ್ಲಿನ ಅನೀತಿ, ಅಧರ್ಮವನ್ನು ಮೆಟ್ಟಿ ಧರ್ಮ ಸ್ಥಾಪನೆಗೆ ಶ್ರೀಕೃಷ್ಣ ಪರಮಾತ್ಮ ಅವತರಿಸಿದ್ದು, ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರದಂತಹ ಅಧರ್ಮವನ್ನು ಮೆಟ್ಟಿ ನಿಂತು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರಿಗೂ ಶ್ರೀಕೃಷ್ಣ ಪ್ರೇರಣೆಯಾಗಲಿ ಎಂದು ತಾ.ಬಿಜೆಪಿ ಖಜಾಂಚಿ ಶುಭಾ ರಘು ತಿಳಿಸಿದರು.

ಪಟ್ಟಣದ ಭವಾನಿರಾವ್‌ ಕೇರಿಯಲ್ಲಿನ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ನೈತಿಕತೆ, ಸಾಮಾಜಿಕ ಕಾಳಜಿ, ಸರ್ವರ ಏಳಿಗೆಯ ಚಿಂತನೆಯೇ ಧರ್ಮ ಕಾರ್ಯವಾಗಿದ್ದು,ಅನಾಚಾರವನ್ನು ಶ್ರೀಕೃಷ್ಣನಂತೆ ಮರ್ದನ ಮಾಡಿ ಸದಾಚಾರ,ಸನ್ನಡತೆಯಿಂದ ಸಮಾಜವನ್ನು ಮುನ್ನಡೆಸಲು ಮುಂದಾಗ ಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಾತೃ ಮಂಡಳಿ ಅಧ್ಯಕ್ಷೆ ಅಪರ್ಣಾ ಗುರುಮೂರ್ತಿ ಮಾತನಾಡಿ, ಭಗವಂತನ ಅವತಾರವೆಂದೇ ಭಾವಿಸಲಾದ ಶ್ರೀಕೃಷ್ಣ ಮಾನವ ಕುಲಕ್ಕೆ ಪಶು,ಪ್ರಾಣಿ,ಪರಿಸರ ಸಹಿತ ಪ್ರತಿಯೊಬ್ಬರಿಗೂ ಒಳಿತನ್ನು ಬಯಸಿದವನು. ಅನೀತಿ,ಅಧರ್ಮವನ್ನು ಮೆಟ್ಟಿ ಧರ್ಮವನ್ನು ಮರು ಸ್ಥಾಪಿಸಿದ ಎಂದು ತಿಳಿಸಿ ಆಧುನಿಕ ಕಾಲದಲ್ಲಿಯೂ ಅವನ ತತ್ವಾದರ್ಶಗಳು ಮಾದರಿಯಾಗಿವೆ ಎಂದು ಶ್ರೀ ಕೃಷ್ಣನ ಅಂತಿಮ ದಿನದ ಜೀವನವನ್ನು ಕಥೆಯ ಮೂಲಕ ಅರ್ಥಗರ್ಭಿತವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ವಿಶ್ವನಾಥ ಪಿ. ಮಾತನಾಡಿ, ಧರ್ಮದ ಪುನರ್ ಸ್ಥಾಪನೆಗಾಗಿ ಅರ್ಜುನನ ರಥಕ್ಕೆ ಶ್ರೀಕೃಷ್ಣ ಸಾರಥ್ಯ ವಹಿಸಿದಂತೆ ಸಮಾಜದ ಏಳಿಗೆಯ ಅಭಿವೃದ್ಧಿ ರಥವನ್ನು ಎಳೆಯಲು ನಮ್ಮೊಂದಿಗೆ ಸಮಾಜದ ಜನರು ಮುಂದಾಗಬೇಕು ಎಂದು ತಿಳಿಸಿದರು.

ಸ್ನೇಹಾ ಸುಮಂತ್ ದಂಪತಿ ಪುತ್ರ ಕು.ಸಾದ್ವಿಕ್‌ನನ್ನು ಶ್ರೀ ಕೃಷ್ಣನ ವೇಷದಲ್ಲಿ ತೊಟ್ಟಿಲಿಗೆ ಹಾಕುವುದರ ಮೂಲಕ ಮೈತ್ರಿ ಮಾತೃಮಂಡಲದ ಮಾತೆಯರು ತೊಟ್ಟಿಲು ಕಾರ್ಯಕ್ರಮವನ್ನು ನೆರೆವೇರಿಸಿದರು.

ಅರುಣ ಮತ್ತು ಉದಯ ವರ್ಗದ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಕಂಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಪ್ರಾಚಾರ್ಯ ಸಿದ್ದೇಶ್ವರ. ಎಚ್.ಜಿ,ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ, ಮಾತೃ ಮಂಡಳಿಯ ಮಾತೆಯರು, ಶಾಲಾ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಚಂದ್ರಕಲಾ ಸ್ವಾಗತಿಸಿ, ರಂಜಿತಾ ನಿರೂಪಿಸಿ, ನಾಗಮ್ಮ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌