ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ!

KannadaprabhaNewsNetwork |  
Published : Jul 30, 2025, 01:30 AM IST
ಕೃಷ್ಟಾ ನದಿಗೆ ಪ್ರವಾಹ ಬಂದಿದ್ದು ಉಗಾರ-ಕುಡಚಿ ಮಾರ್ಗದ ಸೇತುವೆ ನೀರಿನಿಂದ ಜಲಾವೃತಗೊಂಡಿರುವುದು. | Kannada Prabha

ಸಾರಾಂಶ

ಕೃಷ್ಣೆ ಈ ಬಾರಿ ಮೊದಲ ಬಾರಿಗೆ ಮುನಿಸಿಕೊಂಡಿದ್ದಾಳೆ, ತನ್ನ ಒಡಲನ್ನು ತುಂಬಿಕೊಂಡು ಉಕ್ಕಿ ಹರಿಯುತ್ತಿದ್ದಾಳೆ. ಇದರಿಂದ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರುವ ಏಕೈಕ ಮಾರ್ಗವಾದ ಉಗಾರ-ಕುಡಚಿ ಮಾರ್ಗದ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಬಂದಿರುವುದರಿಂದ ಸೋಮವಾರ ತಡ ರಾತ್ರಿಂದಲೇ ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ಕೃಷ್ಣೆ ಈ ಬಾರಿ ಮೊದಲ ಬಾರಿಗೆ ಮುನಿಸಿಕೊಂಡಿದ್ದಾಳೆ, ತನ್ನ ಒಡಲನ್ನು ತುಂಬಿಕೊಂಡು ಉಕ್ಕಿ ಹರಿಯುತ್ತಿದ್ದಾಳೆ. ಇದರಿಂದ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರುವ ಏಕೈಕ ಮಾರ್ಗವಾದ ಉಗಾರ-ಕುಡಚಿ ಮಾರ್ಗದ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಬಂದಿರುವುದರಿಂದ ಸೋಮವಾರ ತಡ ರಾತ್ರಿಂದಲೇ ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.

ಮಹಾರಾಷ್ಟ್ರದ ಮಹಾಬಳೇಶ್ವರ, ಕೊಂಕಣ ಹಾಗೂ ಸಹ್ಯಾದ್ರಿ ಶ್ರೇಣಿಯ ಘಟ್ಟ ಪ್ರದೇಶದಲ್ಲಿ ಕಳೆದ 4-5 ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಕೊಯ್ನಾ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ ಉಳಿದಿರುವುದರಿಂದ ಕೃಷ್ಣಾ ನದಿಗೆ ಪ್ರವಾಹ ಬಂದು ಉಗಾರ-ಕುಡಚಿ ಮಾರ್ಗದ ಸೇತುವೆ ಮೇಲೆ ನೀರು ಬಂದು ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಈ ಭಾಗದಲ್ಲಿ ಮೇ ತಿಂಗಳಲ್ಲಿ ಅವಧಿಗೆ ಮುನ್ನ ಮಳೆ ಸುರಿದಿರುವರದಿಂದ ರೈತಾಪಿ ವರ್ಗದಲ್ಲಿ ಖುಷಿ ಮುಗಿಲ ಮುಟ್ಟಿತ್ತು. ಆದರೆ, ಈಗ ಕಳೆದ ಒಂದು ತಿಂಗಳಿನಿಂದ ಕೇವಲ ತುಂತುರು ಮಳೆ ಬರುತ್ತಿದೆಯಾದರೂ ಕೂಡ ಮಹಾರಾಷ್ಟ್ರದಲ್ಲಿ ಕಳೆದು ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ಈ ಭಾಗದಲ್ಲಿ ಕೃತಕ ಪ್ರವಾಹ ಬಂದು ನದಿತೀರದ ತಗ್ಗು ಪ್ರದೆಶ ಜಲಾವೃತಗೊಂಡು ಬೆಳೆಗಳಲ್ಲಿ ನೀರು ಹೊಕ್ಕಿವೆ.ಗುಡ್ಡ ಸುತ್ತಿ ಮೈಲಾರಕ್ಕೆ ಹೋದಂತೆ:

ಬಾಗಲಕೋಟೆ, ಜಮಖಂಡಿ, ಮುಧೋಳ, ಮಹಾಲಿಂಗಪೂರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳಿಂದ ವ್ಯಾಪಾರ ವಹಿವಾಟುಗಳಿಗೆ ಈ ರಸ್ತೆ ಬಹಳ ಅನುಕೂಲವಾಗಿದ್ದು, ಈ ಮಾರ್ಗ ಕಡಿತಗೊಂಡಿರುವುದರಿಂದ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ ಮಾರ್ಗವಾಗಿ 50 ಕಿಮೀ ಹೆಚ್ಚಿಗೆ ಕ್ರಮಿಸಿ ತೆರಳುವ ಪರಿಸ್ಥಿತಿ ಬಂದೋದಗಿದ್ದು, ಗುಡ್ಡ ಸುತ್ತಿ ಮೈಲಾರಕ್ಕೆ ಹೋದ ಅನುಭವವಾಗುತ್ತಿದೆ.1.19.200 ಕ್ಯುಸೆಕ್ ನೀರು:

ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕರ್ನಾಟಕಕ್ಕೆ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಅಣೆಕಟ್ಟೆ ಮಂಗಳವಾರದ ನೀರಿನ ಮಟ್ಟ 1.19.200 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದ ಸಾಮರ್ಥ್ಯ 123 ಟಿಎಂಸಿ ಸಾಮರ್ಥ್ಯವಿದೆ. ಒಳ ಹರಿವು 1,26,970, ಹೊರ ಹರಿವು 1,20,000, 95.89 ಟಿಎಂಸಿ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಸಾಮರ್ಥ್ಯ 105 ಟಿಎಂಸಿ ಇದ್ದು, ಈಗ 85.81 ಟಿಎಂಸಿ ನೀರು ಸಂಗ್ರಹವಾಗಿದೆ. 95.89 ಟಿಎಂಸಿ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸಾಂಗಲಿಯಲ್ಲಿ ಎರಡು ಅಡಿಗಳಷ್ಟು ನೀರು ಇಳಿಕೆ ಕಂಡಿದೆಯಾದರೂ ಕೂಡ ಈ ಭಾಗದಲ್ಲಿ ಗುರುವಾರದವರೆಗೆ ಉಗಾರ-ಕುಡಚಿ ಸೇತುವೆ ತೆರವಾಗುವ ಸಾಧ್ಯತೆ ಇದೆ.

ಮಳೆಯ ಪ್ರಮಾಣ

ಕೊಯ್ನಾ 45 ಮಿಮೀ

ಮಹಾಬಳೇಶ್ವರ 69 ಮಿಮೀ

ನವಜಾ 53 ಮಿಮೀ

ವಾರಣಾ 45ಮಿಮೀ

ರಾಧಾನಗರಿ 66 ಮಿಮೀ

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈಗಾಗಲೇ ನೀರಿಮಟ್ಟ ಇಳಿದಿದ್ದು, ನಾಳೆ ನಮ್ಮಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಆಲಮಟ್ಟಿಯಲ್ಲಿ ಒಳ ಹರಿವುಗಿಂತ ಹೊರಹರಿವಿನ ಪ್ರಮಾಣ ಹೆಚ್ಚಿಗೆ ಇದೆ. ಆಲಮಟ್ಟಿ ಅಣೆಕಟ್ಟೆಯಿಂದ ನೀರನ್ನು ಹೆಚ್ಚೆಚ್ಚು ಹೊರ ಬಿಡುತ್ತಿರುವುದರಿಂದ ಪ್ರವಾಹ ನಿಯಂತ್ರಣದಲ್ಲಿದೆ. ರೈತರಿಗೆ ಹಾಗೂ ನದಿ ತಟದ ಜನರಿಗೆ ಯಾವುದೇ ಕಾರಣಕ್ಕೂ ಭಯ ಬೇಡ.

-ಅರುಣ ಯಲಗುದ್ರಿ, ನಿವೃತ್ತ ಇಂಜನೀಯರ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ