ಶಿವಾನಂದ ಪಿ.ಮಹಾಬಲಶೆಟ್ಟಿ, ರಬಕವಿ-ಬನಹಟ್ಟಿ
ನದಿ ಪಾತ್ರದಲ್ಲಿ ಇನ್ನೂ ಒಳಹರಿವು ಇರುವುದರಿಂದ ಗೇಟ್‌ನ ತೇಪೆ ಕಾಮಗಾರಿಯಿಂದ ನಿತ್ಯ ೭೫ ಕ್ಯುಸೆಕ್ ನೀರಿನ ಹೊರಹರಿವು ಇದ್ದರೂ ಕೊಂಚ ನೀರು ಉಳಿಯುವಂತಾಗಿದೆ. ಕೆನಾಲ್ ನೀರಿನ ಒಳಹರಿವು ನಿಂತ ಬಳಿಕ ಕೃಷ್ಣೆಯ ಒಡಲು ಖಾಲಿಯಾಗುವುದು ಖಚಿತವಾದಂತಿದೆ.
ಸದ್ಯ ₹೧.೪ ಕೋಟಿ ಮೊತ್ತದ ಗೇಟ್ ಅಳವಡಿಕೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಜ.೨೯ರವರೆಗೆ ಕಾಲಾವಕಾಶವಿದೆ. ಬಳಿಕ ಗುತ್ತಿಗೆದಾರನಿಗೆ ಕಾಮಗಾರಿ ಆರಂಭಿಸುವ ಆದೇಶಪತ್ರ ನೀಡಿದ ಬಳಿಕ ಫೆಬ್ರುವರಿ 2ನೇ ವಾರದಲ್ಲಿ ಗೇಟ್ ನಂ.22ರ ಅಳವಡಿಕೆ ಆರಂಭವಾಗಲಿದೆ. ಅಷ್ಟರಲ್ಲಿ ಡ್ಯಾಂನ ನೀರು ಕೃಷ್ಣಾರ್ಪಣಮಸ್ತುವಾಗೋದು ಗ್ಯಾರಂಟಿ ಎನ್ನುವುದು ತಜ್ಞರ ಅಂಬೋಣ. ಕನಿಷ್ಠ 2 ಟಿಎಂಸಿ ನೀರು ಹರಿಸಿ:ಕಳೆದ ರೈತರ ಸಾಂಕೇತಿಕ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ಮೇಲೆ ಕೃಷ್ಣಾ ಪ್ರದೇಶದ ಶಾಸಕರು ಒತ್ತಡ ತಂದು ಮಹಾ ಸರ್ಕಾರದಿಂದ ಕನಿಷ್ಠ 2 ಟಿಎಂಸಿ ನೀರು ಹರಿಸಬೇಕು. ೨೨ ಗೇಟ್‌ಗಳನ್ನು ಹೊಸದಾಗಿ ಅಳವಡಿಸಿ ನೀರು ಸಂಗ್ರಹಿಸಬೇಕೆಂದು ರೈತರ ಆಗ್ರಹಿಸಿದಾಗ ಸಭೆಯಲ್ಲಿದ್ದ ಶಾಸಕದ್ವಯರಾದ ಸಿದ್ದು ಸವದಿ, ಡಾ.ಜಗದೀಶ ಗುಡಗುಂಟಿ, ಕೆಎಂಎಫ್ ನಿರ್ದೇಶಕ ಲಕ್ಕಪ್ಪ ಪಾಟೀಲ ಸೇರಿದಂತೆ ಹಿರಿಯ ರೈತರು ಇದೇ ಅಭಿಪ್ರಾಯ ವ್ಯಕ್ತಪಡಿಸಿರುವುದು ರೈತ ಬೇಡಿಕೆಗೆ ಬೆಂಬಲ ಸಿಕ್ಕಂತಾಗಿದೆ. ಮುಂದೆ ಬೇಡಿಕೆ ಈಡೇರುವುದೇ ಕಾದು ನೋಡಬೇಕಾಗಿದೆ.೨೨ ಗೇಟ್ ಹೊಸದಾಗಿ ಅಳವಡಿಸಿ ನೀರು ಸಂಗ್ರಹಿಸುವರೆ?
ಕಳೆದ ೨೫ ವರ್ಷಗಳಿಂದ ಅಳವಡಿಕೆಯಾದ ಗೇಟ್‌ಗಳು ತಮ್ಮ ಮೊದಲಿನ ೧೦ ಎಂಎಂ ಗಾತ್ರ ಕಳೆದುಕೊಂಡು ಸದ್ಯ ನೀರಿನ ಒತ್ತಡದಿಂದ ೨ ಎಂಎಂನಷ್ಟು ತೆಳುವಾಗಿದ್ದು, ಉಳಿದ ೨೧ ಗೇಟುಗಳು ಯಾವುದೇ ಕ್ಷಣದಲ್ಲೂ ಹಾಳಾಗುವಂತಿವೆ. ಹಿಪ್ಪರಗಿ ಜಲಾಶಯದ ಇಂದಿನ ದುಸ್ಥಿತಿ ಗಮನಿಸಿದರೇ ಸಕಾಲಿಕ ದುರಸ್ತಿ, ನಿರ್ವಹಣೆ ಕೊರತೆಯ ಕಾರಣಕ್ಕೆ ಗೇಟ್ ಮುರಿದಿರುವ ಸಂಗತಿ ಸ್ಪಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣೆಯ ಒಡಲು ಸದಾ ತುಂಬಿರಲು ಎಲ್ಲ 22 ಗೇಟ್‌ಗಳನ್ನು ಹೊಸದಾಗಿ ಅಳವಡಿಸಿ, ಕ್ರೇನ್ ದುರಸ್ತಿಗೊಳಿಸಿ ಸಶಕ್ತವಾಗಿಸಿದ ಬಳಿಕ ಮಹಾ ನೀರು ತರುವುದು ಸೂಕ್ತ.ಮಹಾ ನೀರು ಸಂಗ್ರಹಣೆಗೆ ಅಗತ್ಯ ಸಾಮರ್ಥ್ಯ ಸದ್ಯ ಗೇಟ್‌ಗಳು ಹೊಂದಿಲ್ಲವಾದ್ದರಿಂದ ಸರ್ಕಾರ ಸಮರೋಪಾದಿಯಲ್ಲಿ ಎಲ್ಲ ೨೨ ಗೇಟ್‌ಗಳನ್ನು ಹೊಸದಾಗಿ ಅಳವಡಿಸಿ ನೀರು ಬಿಡಿಸಿ, ಜಲಾಶಯದಲ್ಲಿ ನೀರು ಸಂಗ್ರಹಿಸಲು ಮುಂದಾಗಬೇಕು.-ಡಾ.ಧನಪಾಲ ಯಲ್ಲಟ್ಟಿ,
ರೈತ ಧುರೀಣ.