ಕೆಆರ್‌ಎಸ್ ಪೊಲೀಸರಿಂದ ನಕಲಿ ಕೇಸು ತಿರುಚಲು ಯತ್ನ; ಡಿವೈಎಸ್ಪಿಗೆ ದೂರು

KannadaprabhaNewsNetwork |  
Published : Mar 10, 2026, 02:45 AM IST
9ಕೆಎಂಎನ್ ಡಿ21,22 | Kannada Prabha

ಸಾರಾಂಶ

ನನ್ನ ಗಂಡನ ಸಮಯ ಪ್ರಜ್ಞೆಯಿಂದ ಎಡಗೈ ಕೊಟ್ಟಿದ್ದರಿಂದ ತಲೆ ಅಥವಾ ಕುತ್ತಿಗೆ ಭಾಗಕ್ಕೆ ಬೀಳುತ್ತಿದ್ದ ಏಟು ಎಡಗೈನ ಮುಂಗೈಗೆ ಬಿದ್ದು, ಮುಂಗೈ ಮುರಿದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪಿ ಪರ ನಿಂತು ಕೆಲ ಸಾಕ್ಷಿಗಳನ್ನು ಮುಚ್ಚಿ ಹಾಕಲು ನಕಲಿ ಕೇಸು ಎಂದು ತಿರುಚಲು ಕೆಆರ್‌ಎಸ್ ಪೊಲೀಸ್ ಠಾಣೆ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಡಿವೈಎಸ್ಪಿ ಯು.ಡಿ ಕೃಷ್ಣಕುಮಾರ್ ಗೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಚಂದನ್, ಹಲ್ಲೆಗೊಳಗಾದ ಅನಿಲ್ ಪತ್ನಿ ರಕ್ಷಿತಾ ದೂರು ನೀಡಿದರು.

ಪಟ್ಟಣದ ಡಿವೈಎಸ್‌ಪಿ ಕಚೇರಿಗೆ ಆಗಮಿಸಿದ ಚಂದನ್ , ಬಿ.ಎಸ್. ಅನಿಲ್ ಪತ್ನಿ ರಕ್ಷಿತಾ ಅವರು ತಾಲೂಕಿನ ಬೆಳಗೊಳ ಗ್ರಾಮದಲ್ಲಿ ವಾಸವಾಗಿರುವ ನನ್ನ ಪತಿ ಬಿ.ಎಸ್. ಅನಿಲ್ ಅವರು ಫೆ.5 ರಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾಡುಹಗಲೇ ಆದಿಶೇಷ ಎಂಬ ವ್ಯಕ್ತಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ.

ನನ್ನ ಗಂಡನ ಸಮಯ ಪ್ರಜ್ಞೆಯಿಂದ ಎಡಗೈ ಕೊಟ್ಟಿದ್ದರಿಂದ ತಲೆ ಅಥವಾ ಕುತ್ತಿಗೆ ಭಾಗಕ್ಕೆ ಬೀಳುತ್ತಿದ್ದ ಏಟು ಎಡಗೈನ ಮುಂಗೈಗೆ ಬಿದ್ದು, ಮುಂಗೈ ಮುರಿದಿದೆ. ಆ ವೇಳೆ ಕೆಆರ್‌ಎಸ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲೇ ಇದ್ದ ಆರೋಪಿ ಆದಿಶೇಷನನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಆತನನ್ನು ಪೊಲೀಸರೇ ಬಿಟ್ಟು ಕಳುಹಿಸಿ ಕೃತ್ಯಕ್ಕೆ ಬಳಸಿದ್ದ ಮಚ್ಚಿನ ಸಹಿತ ತಲೆ ಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ, ಘಟನಾ ಸ್ಥಳದಿಂದಲೇ ಆರೋಪಿ ಆದಿಶೇಷನನ್ನು ಪೊಲೀಸರು ವಶಕ್ಕೆ ಪಡೆದು ಎಳೆದ್ಯೊಯ್ಯುತ್ತಿರುವ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆರೋಪಿಯ ಆಮೀಷಕ್ಕೆ ಒಳಗಾದ ಕೆಆರ್‌ಎಸ್ ಪೊಲೀಸರು ನ್ಯಾಯಾಲಯ ಹಾಗೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ಆರೋಪಿ ಆದಿಶೇಷ ಈಗಾಗಲೇ 6 ಸಮಾಜಘಾತುಕ ಕೃತ್ಯಗಳಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲಾಗಿವೆ. ಇಂತಹ ಆರೋಪಿಯನ್ನು ಈ ಕೃತ್ಯದಿಂದ ಪಾರು ಮಾಡಲು ಪೊಲೀಸರು ಸಹಕರಿಸುತ್ತಿದ್ದಾರೆ.

ಹಾಗಾಗಿ ಕೆಆರ್‌ಎಸ್ ಪೊಲೀಸ್ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಜೊತೆಗೆ ನಮ್ಮ ಕುಟುಂಬಕ್ಕೆ ಪ್ರಾಣ ಭಯವಿದ್ದು, ರಕ್ಷಣೆ ನೀಡುವಂತೆ ಡಿವೈಎಸ್‌ಪಿ ಯು.ಡಿ ಕೃಷ್ಣಕುಮಾರ್ ಅವರ ಬಳಿ ರಕ್ಷಿle ಮನವಿ ಮಾಡಿದರು.--------------

9ಕೆಎಂಎನ್ ಡಿ21,22

ಶ್ರೀರಂಗಪಟ್ಟಣದ ಡಿವೈಎಸ್‌ಪಿ ಕಚೇರಿಗೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ಜೊತೆಗೆ ಹಲ್ಲೆಗೊಳಗಾಗಿದ್ದ ಬಿ.ಎಸ್ ಅನಿಲ್ ಪತ್ನಿ ರಕ್ಷಿತಾ ಭೇಟಿ ನೀಡಿ ಕೆಆರ್‌ಎಸ್ ಠಾಣಾ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರು.

----------------

ಘಟನಾ ಸ್ಥಳದಿಂದಲೇ ಆರೋಪಿ ಆದಿಶೇಷನನ್ನು ಪೊಲೀಸರು ವಶಕ್ಕೆ ಪಡೆದು ಎಳೆದ್ಯೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1 ಅಪಘಾತಕ್ಕೆ 4 ಪ್ರಮಾಣ ಪತ್ರ: ಕೋರ್ಟ್‌ ದಿಗ್ಭ್ರಮೆ
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿಗೆ: ಮಂಜುನಾಥ್