- ಫೆಬ್ರವರಿಯಿಂದ ಗೈಡ್ ಸಮೇತ ಬಸ್ ಕಾರ್ಯಾರಂಭ: ಸಂಸದೆ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ದರ್ಶನಕ್ಕೆ ಕೆಎಸ್ಸಾರ್ಟಿಸಿಯಿಂದ ವಿಶೇಷ ಬಸ್ಸುಗಳ ಸೇವೆಯನ್ನು ಆರಂಭಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದ ಅವರು, ಸಂತೇಬೆನ್ನೂರು ಪುಷ್ಕರಿಣಿ, ಸೂಳೆಕೆರೆ, ಹರಿಹರ ದೇವಸ್ಥಾನ, ಕೊಂಡಜ್ಜಿ, ಕೊಂಡುಕುರಿ ಸಂರಕ್ಷಿತಾರಣ್ಯ ಇರುವ ಜಗಳೂರು ತಾ. ರಂಗಯ್ಯನದುರ್ಗ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳ ರೂಟ್ ಮ್ಯಾಪ್ ಸಿದ್ಧಪಡಿಸುವ ಕೆಲಸ ಕೆಎಸ್ಸಾರ್ಟಿಸಿ ಮಾಡುತ್ತಿದೆ ಎಂದರು.ಪ್ರವಾಸಿ ತಾಣಗಳಿಗೆ ಜಿಲ್ಲಾ ಕೇಂದ್ರದಿಂದ ನಿತ್ಯ ಜಿಲ್ಲಾ ದರ್ಶನದ ಬಸ್ ಸೇವೆಯನ್ನು ಮುಂದಿನ ದಿನಗಳು, ಮಹಿಳಾ ದಿನಾಚರಣೆಯಿಂದ ಆರಂಭಿಸುವ ಉದ್ದೇಶವಿದೆ. ಈಗಾಗಲೇ ಜಿಲ್ಲಾಧಿಕಾರಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದ್ದೇವೆ. ಬಸ್ ಜೊತೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ವಿವರಿಸುವ ಗೈಡ್ ಸಹ ಇರಲಿದ್ದಾರೆ. ಹೀಗೆ ವ್ಯವಸ್ಥಿತವಾಗಿ ಬಸ್ ಸೇವೆ ಆರಂಭಿಸಲಾಗುವುದು ಎಂದು ಹೇಳಿದರು.
- - - (ಫೋಟೋ ಇದೆ.)