ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಸಿಗಂದೂರು ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆಯನ್ನು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರ ವರೆಗೆ ಕಾರ್ಯಾಚರಿಸಲು ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಸಿಗಂದೂರು ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆಯನ್ನು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರ ವರೆಗೆ ಕಾರ್ಯಾಚರಿಸಲು ನಿರ್ಧರಿಸಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸದರಿ ಬಸ್‍ಗಳಿಗೆ ಮುಂಗಡ ಸೀಟ್ ಕಾಯ್ದಿರಿಸಲು (www.ksrtc.in) ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದ್ದು, ಬಸ್‍ಗಳ ಸದುಪಯೋಗವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳಬಹುದು.
ಪ್ಯಾಕೇಜ್ ಪ್ರವಾಸದ ಮಾರ್ಗ, ವೇಳೆ ಮತ್ತು ಪ್ರಯಾಣ ದರ:
ಮಂಗಳೂರು ದಸರಾ ನವದುರ್ಗ ದರ್ಶನ ಪ್ಯಾಕೇಜ್:
ಬೆಳಗ್ಗೆ 8 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣದಿಂದ-ಮರೋಳಿ ಸೂರ್ಯ ನಾರಾಯಣ ದೇವಸ್ಥಾನ-ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ- ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ-ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) - ಶ್ರೀ ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನ- ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೂಲ್ಕಿ- ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ - ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ - ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ - ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ನವದುರ್ಗಾ ದರ್ಶನ– ಮಂಗಳೂರು ಬಸ್ಸು ನಿಲ್ದಾಣ ರಾತ್ರಿ 8.30ಕ್ಕೆ ಮಂಗಳೂರು ಬಸ್ ನಿಲ್ದಾಣ ತಲುಪಲಿದೆ. ಪ್ರಯಾಣ ದರ ವಯಸ್ಕರಿಗೆ 500 ರು., ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 400 ರು.
ಮಂಗಳೂರು-ತಲಕಾವೇರಿ-ಭಾಗಮಂಡಲ ಪ್ಯಾಕೇಜ್ ಪ್ರವಾಸ:
ಬೆಳಗ್ಗೆ 7 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣದಿಂದ ಹೊರಟು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ-ತಲಕಾವೇರಿ ದೇವಸ್ಥಾನ - ಶ್ರೀ ಭಗಂಡೇಶ್ವರ ಸ್ವಾಮಿ ದೇವಸ್ಥಾನ, ತ್ರಿವೇಣಿ ಸಂಗಮ, ಭಾಗಮಂಡಲ ಅಬ್ಬಿಪಾಲ್ಸ್-ರಾಜಾಸೀಟ್- ರಾತ್ರಿ 9.30ಕ್ಕೆ ಮಂಗಳೂರು ಬಸ್ಸು ನಿಲ್ದಾಣ ತಲುಪಲಿದೆ. ಪ್ರಯಾಣ ದರ ವಯಸ್ಕರಿಗೆ 600 ರು., ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 500 ರು.
ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸ:
ಬೆಳಗ್ಗೆ 8 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣ - ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ- ಕಾಪು ಮಾರಿಯಮ್ಮ ದೇವಸ್ಥಾನ- ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ -ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) - ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ-ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ರಾತ್ರಿ 8 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣ ತಲುಪಲಿದೆ. ಪ್ರಯಾಣ ದರ ವಯಸ್ಕರಿಗೆ 600 ರು., ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 500 ರು.
ಮಂಗಳೂರು-ಸಿಗಂದೂರು ಪ್ಯಾಕೇಜ್ ಪ್ರವಾಸ:
ಬೆಳಗ್ಗೆ 7 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣ–ಕುಂದಾಪುರ-ಸಿಗಂದೂರ ಶ್ರೀ ಚೌಡೇಶ್ವರಿದೇವಸ್ಥಾನ-ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ- ರಾತ್ರಿ 7.30 ಮಂಗಳೂರು ಬಸ್ಸು ನಿಲ್ದಾಣ. ಪ್ರಯಾಣ ದರ ವಯಸ್ಕರಿಗೆ 700 ರು., ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 600 ರು.
ಮಂಗಳೂರು-ಶೃಂಗೇರಿ ಪ್ಯಾಕೇಜ್ ಪ್ರವಾಸ:
ಬೆಳಗ್ಗೆ 8 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣ- ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ಶಾರದಾಂಬ ದೇವಸ್ಥಾನ, ಹರಿಹರಪುರ ಮಠ (ಮಧ್ಯಾಹ್ನದ ಊಟ) ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನ, ಕಿಗ್ಗ ಕ್ಷೇತ್ರ- ರಾತ್ರಿ 7.30 ಮಂಗಳೂರು ಬಸ್ಸು ನಿಲ್ದಾಣ. ಪ್ರಯಾಣ ದರ ವಯಸ್ಕರಿಗೆ 600 ರು., ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 500 ರು.
ಹೆಚ್ಚಿನ ಮಾಹಿತಿಗೆ ಮಂಗಳೂರು-1ನೇ ಘಟಕ ವ್ಯವಸ್ಥಾಪಕರ ಮೊಬೈಲ್: 7760990713, ಮಂಗಳೂರು-3ನೇ ಘಟಕ ವ್ಯವಸ್ಥಾಪಕರ ಮೊಬೈಲ್- 7760990723, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ :9663211553, ಮಂಗಳೂರು ಬಸ್ಸು ನಿಲ್ದಾಣ: 7760990720, ವಿಭಾಗೀಯ ಕಚೇರಿ: 7760990711, 9663266221 ಸಂಪರ್ಕಿಸಬಹುದು ಎಂದು ಮಂಗಳೂರು ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.