ಶಾಲೆ ಅಂದ ಹೆಚ್ಚಿಸಿದ ಗೋಡೆಬರಹ

KannadaprabhaNewsNetwork |  
Published : Oct 10, 2023, 01:01 AM IST
9ಕೆಕೆಆರ್2:ಕುಕನೂರು ತಾಲೂಕಿನ ರಾಜೂರು ಗ್ರಾಮದ  ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವಿಶ್ವಬಂಧು ಸೇವಾ ಗುರುಬಳಗದಿಂದ  ಗೋಡೆ ಬರಹ ಮೂಡಿರುವುದು.  | Kannada Prabha

ಸಾರಾಂಶ

ವಿಶ್ವಬಂಧು ಸೇವಾ ಗುರುಬಳಗದಿಂದ ಶಾಲೆ ಗೋಡೆಗಳಿಗೆ ಗೋಡೆ ಬರಹ ಚಿತ್ರಿಸಿರುವುದು ಶಾಲೆಯ ಅಂದ ಹೆಚ್ಚಿಸಿದೆ ಎಂದು ಯುವ ಮುಖಂಡ ಪ್ರಕಾಶ ಹಿರೇಮನಿ ಹೇಳಿದರು.

ಕುಕನೂರು: ವಿಶ್ವಬಂಧು ಸೇವಾ ಗುರುಬಳಗದಿಂದ ಶಾಲೆ ಗೋಡೆಗಳಿಗೆ ಗೋಡೆ ಬರಹ ಚಿತ್ರಿಸಿರುವುದು ಶಾಲೆಯ ಅಂದ ಹೆಚ್ಚಿಸಿದೆ ಎಂದು ಯುವ ಮುಖಂಡ ಪ್ರಕಾಶ ಹಿರೇಮನಿ ಹೇಳಿದರು.ತಾಲೂಕಿನ ರಾಜೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ವಿಶ್ವಬಂಧು ಸೇವಾ ಗುರುಬಳಗದಿಂದ ಜರುಗಿದ ಗೋಡೆ ಬರಹ ಸೇವಾ ಕಾರ್ಯದ ನಿಮಿತ್ತ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಯನ್ನು ಆಕರ್ಷಕವಾಗಿಸುವ ವಿವಿಧ ಕಾರ್ಟೂನ್ ಚಿತ್ರಗಳು, ಕಲಿಕಾಂಶಗಳು ಹಾಗೂ ಸ್ಫೂರ್ತಿದಾಯಕ ನುಡಿಗಳನ್ನು ಸುಮಾರು 20 ಜನ ಶಿಕ್ಷಕರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸೇವೆ ಸಲ್ಲಿಸಿದ್ದಾರೆ. ರಜಾ ದಿನಗಳಲ್ಲಿ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗುರುಬಳಗದ ಸೇವಾ ಕಾರ್ಯ ಶ್ಲಾಘನೀಯ ಎಂದರು.ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮೆಣಸಿನಕಾಯಿ ಮಾತನಾಡಿ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಮಾದರಿ ಎಂದರು.ಸೇವಾ ಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಸಮರ್ಪಣಾ ಮನೋಭಾವದ ತಂಡ ಇರುವುದರಿಂದ ಹಲವಾರು ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗಿದೆ. ಅಧಿಕಾರಿಗಳು, ಸಂಘಟನೆಯ ಹಿರಿಯರು ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.ಬಳಗದ ಸದಸ್ಯರ ಪರವಾಗಿ ಸಂತೋಷ ಕೋರಿ, ಖಾಜಾಸಾಬ ಹೊಸಳ್ಳಿ, ವಿರೇಶ ಮ್ಯಾಗಳೇಶಿ, ವೀರಭದ್ರಪ್ಪ ಕಮ್ಮಾರ, ಶರಣು ವಾಳದ ಅವರನ್ನು ಸನ್ಮಾನಿಸಲಾಯಿತು.ತಾಲೂಕು ನೌಕರರ ಸಂಘದ ಖಜಾಂಚಿ ಅಶೋಕ ಮಾದಿನೂರು, ಪ್ರಭು ಶಿವನಗೌಡ್ರು, ಮಲ್ಲಿಕಾರ್ಜುನ ಕುಂಬಾರ, ಮಹಾವೀರ ಕಲ್ಭಾವಿ, ಪ್ರಭಯ್ಯ ಬಳಗೇರಿಮಠ, ಶಂಭುಲಿಂಗಪ್ಪ ಅರಿಶಿಣದ, ರಮೇಶ ಹೊಂಬಳ, ಶಿವಕುಮಾರ ಮುತ್ತಾಳ, ಶಿವಕುಮಾರ ಹೊಂಬಳ, ಪರಮೇಶ ಚಿಂತಾಮಣಿ, ಬಸವರಾಜ ಉಪ್ಪೀನ, ಮಂಜುನಾಥ ಮನ್ನಾಪುರ,ಕಳಕನಗೌಡ ಪಾಟೀಲ್, ಗವಿಸಿದ್ದಪ್ಪ, ರವೀಂದ್ರ ರಾಜೂರ, ಇಮಾಮ್ ಸಂಕನೂರ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ