ಕುಮಾರವ್ಯಾಸ ಭಾರತ ಶ್ರೇಷ್ಠ ಮಹಾಭಾರತ- ಡಾ.ಅರ್ಕಸಾಲಿ ವೃಷಭೇಂದ್ರಚಾರ್

KannadaprabhaNewsNetwork | Published : Feb 10, 2025 1:45 AM

ಸಾರಾಂಶ

ಕುಮಾರವ್ಯಾಸ ರಚಿಸಿರುವ ಕುಮಾರವ್ಯಾಸ ಭಾರತ ಎಂಬುದು ಅತ್ಯಂತ ಶ್ರೇಷ್ಠ ಕಾವ್ಯವಾಗಿದೆ.

ಕೂಡ್ಲಿಗಿ: ಕುಮಾರವ್ಯಾಸ ರಚಿಸಿರುವ ಕುಮಾರವ್ಯಾಸ ಭಾರತ ಎಂಬುದು ಅತ್ಯಂತ ಶ್ರೇಷ್ಠ ಕಾವ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ.ಅರ್ಕಸಾಲಿ ವೃಷಭೇಂದ್ರಾಚಾರ್ ತಿಳಿಸಿದರು.

ಅವರು ತಾಲೂಕಿನ ಕಾನಹೊಸಹಳ್ಳಿ ವೈಭವ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆದಿಕವಿಗಳು ಕೂಡ ಕುಮಾರವ್ಯಾಸ ಭಾರತ ಅತ್ಯಂತ ಶ್ರೇಷ್ಠ ಕಾವ್ಯ ಎಂದು ಒಪ್ಪಿಕೊಂಡಿದ್ದಾರೆ. ಕುಮಾರವ್ಯಾಸ ಭಾರತ ಕಾವ್ಯವು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅಂಥ ಕಾವ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಸಾಹಿತ್ಯಾಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಸಾಪ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರಲ್ಲದೆ, ನಮ್ಮ ಕನ್ನಡದ ಕವಿಗಳೆಲ್ಲರೂ ಮತ್ತೊಬ್ಬ ಕವಿಯನ್ನು ಗೌರವಿಸುವಂಥ ವಿನೀತ ಭಾವನೆ ಉಳ್ಳವರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ನಾಟಕ ರಚನೆಕಾರ ಎಂ.ಬಿ.ಅಯ್ಯನಹಳ್ಳಿ ಎನ್.ಎಂ.ರವಿಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕೇವಲ ದತ್ತಿ ಉಪನ್ಯಾಸಗಳಿಗೆ ಸೀಮಿತವಾಗದೇ ಗ್ರಾಮೀಣ ಭಾಗದಲ್ಲಿ ತಿಂಗಳಿಗೊಮ್ಮೆ ಕನ್ನಡ ಸಾಹಿತ್ಯವನ್ನು ಪರಿಚರಿಸುವ ಹಾಗೂ ಸಾಹಿತ್ಯಾಸಕ್ತರನ್ನು ಒಂದುಗೂಡಿಸಿ ಜನರಲ್ಲಿ ಜಾಗೃತಿ ಮೂಡಿಸುವಂಥ ಕಾರ್ಯಕ್ರಮಗಳನ್ನು ಮಾಡಬೇಕಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿದರು. ವೆಂಕಮ್ಮ ಎಚ್.ಕೆ. ರಾಮರಾವ್ ದತ್ತಿ ವಿಷಯ ಕುಮಾರವ್ಯಾಸ ಕುರಿತು ಶಿಕ್ಷಕ ಎಚ್.ಎಂ.ಬಿ. ಗುರುಮೂರ್ತಿ ಮಾತನಾಡಿದರು.

ಕಾಮಶೆಟ್ಟಿ ಸಿದ್ಧರಾಮಪ್ಪ ಬಸಮ್ಮ ದತ್ತಿ ವಿಷಯ ಸಿದ್ಧರಾಮೇಶ್ವರ ಜೀವನ ಚರಿತ್ರೆ ಕುರಿತು ಶಿಕ್ಷಕ ಸಿದ್ಧರಾಮೇಶ್ವರ ಮಾತನಾಡಿದರು.

ಈ ಸಂದರ್ಭದಲ್ಲಿ ದತ್ತಿ ದಾನಿಗಳು ಹಾಗೂ ಕಸಾಪ ಪೋಷಕರಾದ ಎಚ್.ಕೆ. ವೆಂಕಟೇಶ್ವರ ರಾವ್, ಹಿರಿಯ ಕವಿ ಯು.ಜಗನ್ನಾಥ್, ನಿವೃತ್ತ ಉಪನ್ಯಾಸಕ ಹುಲಿಕೆರೆ ವಸಂತ ಸಜ್ಜನ್, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಶ್ಯಾಮಸುಂದರ್ ಸಫಾರೆ, ಸಹ ಕಾರ್ಯದರ್ಶಿ ಕೆ.ಸುಭಾಷ್‌ಚಂದ್ರ, ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಒ.ಮಂಜುನಾಥ, ಗೌರವ ಕೋಶಾಧ್ಯಕ್ಷ ಎಸ್.ರಾಮಕೃಷ್ಣ, ಗೌರವ ಕಾರ್ಯದರ್ಶಿ ಎಚ್.ಜಿ. ಪ್ರಕಾಶ್‌ಗೌಡ, ಶರಣ ಶರಣನಗೌಡ, ವೈಭವ ಪ್ರೌಢಶಾಲೆ ಶಿಕ್ಷಕ ಕಂಪಳೇಶ್, ಕಾಳಿದಾಸ ಶಾಲೆ ಮುಖ್ಯಶಿಕ್ಷಕ ಎಚ್.ಮಲ್ಲೇಶ್, ಚೌಡಾಪುರ ತಿಪ್ಪೇಸ್ವಾಮಿ ಸೇರಿ ಇತರರಿದ್ದರು. ಕೆಯುಡಬ್ಲುೂಜೆ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹುಡೇಂ ಕೃಷ್ಣಮೂರ್ತಿ ಹಾಗೂ ದತ್ತಿ ಉಪನ್ಯಾಸ ನೀಡಿದ ಶಿಕ್ಷಕರನ್ನು ಕಸಾಪ ಹೋಬಳಿ ಘಟಕದಿಂದ ಸನ್ಮಾನಿಸಲಾಯಿತು.

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ವೈಭವ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

Share this article