ಕುಮಾರಸ್ವಾಮಿ ಬಡಾವಣೆಗೆ ವೆಂಕಟರಮಣ್ಣಪ್ಪ ಹೆಸರು ಬೇಡ

KannadaprabhaNewsNetwork |  
Published : Aug 14, 2025, 01:00 AM IST
ಫೋಟೋ 13ಪಿವಿಡಿ2.13ಪಿವಿಜಿ2ಪಾವಗಡ,ಕುಮಾರಸ್ವಾಮಿ ಬಡಾವಣೆ ಮರುನಾಮಕರಣಕ್ಕೆ ವಿರೋಧ ಹಾಗೂ ಇತರೆ ಬೇಡಿಕೆ ಈಡೇರಿಕೆ ಆಗ್ರಹಿಸಿ ತಾಲೂಕು ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರಿದಿದೆ.  | Kannada Prabha

ಸಾರಾಂಶ

ಕುಮಾರಸ್ವಾಮಿ ಬಡಾವಣೆ ಹೆಸರು ಮರುನಾಮಕರಣ ಕೈಬಿಡುವಂತೆ ಒತ್ತಾಯಿಸಿ ತಾಲೂಕು ಜೆಡಿಎಸ್‌ ವತಿಯಿಂದ ಪುರಸಭೆ ಅವರಣದಲ್ಲಿ ಹಮ್ನಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿರಿಸಿದೆ.

ಕನ್ನಡಪ್ರಭವಾರ್ತೆ ಪಾವಗಡ

ಕುಮಾರಸ್ವಾಮಿ ಬಡಾವಣೆ ಹೆಸರು ಮರುನಾಮಕರಣ ಕೈಬಿಡುವಂತೆ ಒತ್ತಾಯಿಸಿ ತಾಲೂಕು ಜೆಡಿಎಸ್‌ ವತಿಯಿಂದ ಪುರಸಭೆ ಅವರಣದಲ್ಲಿ ಹಮ್ನಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿರಿಸಿದೆ.

ಬುಧವಾರ ಪ್ರತಿಭನಾಕಾರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ ಮಾತನಾಡಿ, ಪಟ್ಟಣದ ಕುಮಾರಸ್ವಾಮಿ ಬಡಾವಣೆಗೆ ಮರುನಾಮಕರಣ ಹೆಸರಿಡಲು ನಾವು ಅವಕಾಶ ನೀಡುವುದಿಲ್ಲ. ಜೆಡಿಎಸ್‌ನ ಕುಮಾರಸ್ವಾಮಿ ಸಿಎಂ ಹಾಗೂ ಇಲ್ಲಿನ ಕೆ.ಎಂ.ತಿಮ್ಮರಾಯಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಬಡಾವಣೆ ಎಂದು ನಾಮಕರಣಗೊಳಿಸಲಾಗಿದೆ. ನೀವು ರಾಜಕೀಯ ನಡೆಸಿ ಕುಮಾರಸ್ವಾಮಿ ಬಡಾವಣೆಗೆ ವೆಂಕಟರಮಣಪ್ಪ ಹೆಸರಿಡಲು ಹೊರಟಿರುವುದು ನಿಮ್ಮ ಸ್ಥಾರ್ಥ ರಾಜಕಾರಣದ ಭಾಗವಾಗಿದೆ ಎಂದು ಕಿಡಿಕಾರಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಕುಮಾರಸ್ವಾಮಿ ಸಿಎಂ ಅಗಿದ್ದ ವೇಳೆ ತಾವು ಶಾಸಕರಾಗಿದ್ದೇವು. ಬಡವರಿಗೆ ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ಪಟ್ಟಣದ ಹೊರವಲಯದಲ್ಲಿ 390ನೂತನ ಮನೆಗಳ ನಿರ್ಮಾಣ ಕಾರ್ಯ ಕೈಗೊಂಡು ಬಡಾವಣೆಯ ಮೂಲಭೂತ ಸಮಸ್ಯೆ ನಿವಾರಣೆಗೆ ಅದ್ಯತೆ ನೀಡಿ ಪ್ರಗತಿ ಕೈಗೊಳ್ಳಲಾಗಿತ್ತು. ಈಗ ಮರುನಾಮಕರಣಕ್ಕೆ ಮುಂದಾಗಿದ್ದೀರಿ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ತಾಲೂಕು ಜೆಡಿಎಸ್‌ ಮುಖಂಡರಾದ ಕೆ.ಆರ್‌.ನಾಗೇಶ್‌ , ಮಾಜಿ ತಾಪಂ ಅಧ್ಯಕ್ಷ ಹಾಗೂ ತಾ,ಜೆಡಿಎಸ್‌ ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್, ಮಾಜಿ ಪುರಸಭೆ ಸದಸ್ಯರಾದ ಗುಟ್ಟಹಳ್ಳಿ ಮಣಿ, ಮನುಮಹೇಶ್‌,ತಾಲೂಕು ಜೆಡಿಎಸ್‌ ರೈತ ಘಟಕದ ಅಧ್ಯಕ್ಷ,ಗಂಗಾಧರ್‌ ನಾಯ್ಡ್‌,ತಾಲೂಕು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನೆರಳೇಕುಂಟೆ ಭರತ್‌ ಕುಮಾರ್,ಕಾವಲಗೆರೆ ರಾಮಾಂಜಿನಪ್ಪ,ಅಪ್‌ಬಂಡೆ ಗೋಪಾಲ್‌ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ