ಇಲ್ಲಿನ ಹೇರ್ ಕಟ್ಟಿಂಗ್ ಸೆಲೂನೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಪಾಕಿಸ್ತಾನ ಪರ ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪುರ: ಇಲ್ಲಿನ ಹೇರ್ ಕಟ್ಟಿಂಗ್ ಸೆಲೂನೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಪಾಕಿಸ್ತಾನ ಪರ ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 11ರ ಹರೆಯದ ಬಾಲಕ ಬಿಹಾರದಿಂದ ಬಂದ ವಲಸೆ ಕಾರ್ಮಿಕನ ಮಗನಾಗಿದ್ದು, ಹೇರ್ ಕಟಿಂಗ್ ಮಾಡಲೆಂದು ಸೆಲೂನ್‌ಗೆ ಬಂದಿದ್ದ. ಈ ಸಂದರ್ಭದಲ್ಲಿ ಬಾಲಕ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು, ಸ್ಥಳೀಯರ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ. ಈ ನಡುವೆ ಕೆಲವರು ಬಾಲಕನನ್ನು ಪ್ರಚೋದಿಸಿ ಘೋಷಣೆ ಕೂಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ.
ಬಾಲಕ ಪಾಕ್ ಪರ ಘೋಷಣೆ ಕೂಗಿದ್ದನ್ನು ಆಗ ಸೆಲೂನ್‌ನಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಹರಿದಾಡುತ್ತಿದೆ. ಆರೋಪಿ ಬಾಲಕ ಅಪ್ರಾಪ್ತ ವಯಸ್ಕನಾಗಿದ್ದು, ವಿಡಿಯೋವು ಪ್ರಚೋದನಾಕಾರಿಯಾಗಿದ್ದು, ಅದನ್ನು ಪ್ರಸಾರ ಮಾಡಬಾರದು ಅಥವಾ ಶೇರ್ ಮಾಡಬಾರದು. ಮಾಡಿದರೆ ಅಂತಹವರ ಮೇಲೆ ಪ್ರಕರಣ ದಾಖಲಿಸುವುದಾಗಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.