ಕುಂದಾಪುರ: ಹಕ್ಲಾಡಿಯಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ.

KannadaprabhaNewsNetwork |  
Published : Dec 28, 2024, 01:03 AM IST
27ಹಕ್ಲಾಡಿ | Kannada Prabha

ಸಾರಾಂಶ

ಹಕ್ಲಾಡಿ ಶ್ರೀ ಕೆ.ಎಸ್.ಎಸ್. ಸರ್ಕಾರಿ ಪ್ರೌಢ ಶಾಲಾ ವಠಾರದಲ್ಲಿ ಡಿಸೆಂಬರ್ 26 ಮತ್ತು 27 ರಂದು ನಾಲ್ಕು ಪ್ರೌಢಶಾಲೆಗಳ ಕಿಶೋರ ಯಕ್ಷಗಾನ ಸಂಭ್ರಮವನ್ನು ಡಿ.26 ರಂದು ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಹಕ್ಲಾಡಿ ಶ್ರೀ ಕೆ.ಎಸ್.ಎಸ್. ಸರ್ಕಾರಿ ಪ್ರೌಢ ಶಾಲಾ ವಠಾರದಲ್ಲಿ ಡಿಸೆಂಬರ್ 26 ಮತ್ತು 27 ರಂದು ನಾಲ್ಕು ಪ್ರೌಢಶಾಲೆಗಳ ಕಿಶೋರ ಯಕ್ಷಗಾನ ಸಂಭ್ರಮವನ್ನು ಡಿ.26 ರಂದು ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಉದ್ಘಾಟಿಸಿದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಕ್ಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಹೊಳ್ಮಗೆ, ಹಕ್ಲಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಗೀತ ಸಂತೋಷ ಮೊಗವೀರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಬಗ್ವಾಡಿ ನಿವೃತ್ತ ಶ್ರೇಣಿ ಮುಖ್ಯೋಪಾಧ್ಯಾಯ ರಾಜೀವ ಶೆಟ್ಟಿ, ತಲ್ಲೂರು ಸರಕಾರಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಬೈಂದೂರು ಯಕ್ಷ ಗುರುಕುಲ ಸಂಚಾಲಕ ಸುನೀಲ್ ಹೊಲಾಡು, ಹಕ್ಲಾಡಿ ಚನ್ನಕೇಶವ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಕಿಶೋರಕುಮಾರ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ಎಸ್. ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ, ಗಣೇಶ್ ಬ್ರಹ್ಮಾವರ ಇದ್ದರು.

ಸಭೆಯ ಬಳಿಕ ತಲ್ಲೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ, ಪ್ರಭಾಕರ್ ಆಚಾರ್ ನಿರ್ದೇಶನದಲ್ಲಿ ‘ಭೀಷ್ಮ ವಿಜಯ’ ಮತ್ತು ಹಕ್ಲಾಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪ್ರದೀಪ ಶೆಟ್ಟಿ ನಾರ್ಕಳಿ ನಿರ್ದೇಶನದಲ್ಲಿ ‘ಹಿರಣ್ಯಾಕ್ಷವಧೆ - ಭಕ್ತಪ್ರಹ್ಲಾದ’ ಯಕ್ಷಗಾನ ಪ್ರದರ್ಶನಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಶಿಷ್ಯ ಸಂಬಂಧ ಕೃಷ್ಣಾರ್ಜುನರಂತಿರಲಿ: ಡಾ.ಶ್ರೀಧರ ಪೈ
ಆರೋಗ್ಯ ಇಲಾಖೆಗೆ ಕೆಬಿಎಲ್‌ 3 ವಾಹನ ಹಸ್ತಾಂತರ