ಅಂಪಾರು ಸಹಕಾರಿ ವ್ಯವಸಾಯಿಕ ಸಂಘಕ್ಕೆ 75. 35 ಲಕ್ಷ ನಿವ್ವಳ ಲಾಭ

KannadaprabhaNewsNetwork |  
Published : Sep 24, 2026, 02:45 AM IST
ಎಂದು  | Kannada Prabha

ಸಾರಾಂಶ

ಕುಂದಾಪುರ: ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ವರದಿ ಸಾಲಿನಲ್ಲಿ 56.97 ಕೋಟಿ ರು. ಠೇವಣಿ ಸಂಗ್ರಹಿಸಿ, 55.99 ಕೋಟಿ ರು. ಸಾಲ ವಿತರಿಸಿದೆ. ವರ್ಷಾಂತ್ಯಕ್ಕೆ 287.64 ಕೋಟಿ ರು. ವ್ಯವಹಾರ ನಡೆಸಿ 75,35,719.59 ರು. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು ಹೇಳಿದರು.

ಕುಂದಾಪುರ: ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ವರದಿ ಸಾಲಿನಲ್ಲಿ 56.97 ಕೋಟಿ ರು. ಠೇವಣಿ ಸಂಗ್ರಹಿಸಿ, 55.99 ಕೋಟಿ ರು. ಸಾಲ ವಿತರಿಸಿದೆ. ವರ್ಷಾಂತ್ಯಕ್ಕೆ 287.64 ಕೋಟಿ ರು. ವ್ಯವಹಾರ ನಡೆಸಿ 75,35,719.59 ರು. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು ಹೇಳಿದರು.ಸೆ.20ರಂದು ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ 2025-26ನೇ ಸಾಲಿನ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಸದಸ್ಯರಿಗೆ ಶೇ.16ರಷ್ಟು ಡಿವಿಡೆಂಡ್ ಘೋಷಿಸಿದರು.ಗ್ರಾಹಕರ ಬಹುವರ್ಷಗಳ ಬೇಡಿಕೆಯಾಗಿದ್ದ ವ್ಯವಹಾರಗಳ ಸಂದೇಶ ಮೊಬೈಲ್‌ಗೆ ಕಳುಹಿಸುವ ವ್ಯವಸ್ಥೆ, ನೂತನ ಸಾಫ್ಟ್‌ವೇರ್ ಅಳವಡಿಕೆ ಹಾಗೂ ಬ್ಯಾಂಕ್ ಸಾಲದ ದಾಖಲಾತಿಗಳ ನಿರ್ವಹಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಂಘದ 13 ನಿರ್ದೇಶಕರು ಪಕ್ಷಭೇದ ಮರೆತು ಸಹಕಾರಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.ವರದಿ ಸಾಲಿನಲ್ಲಿ ಸಂಘದ ನೂತನ ಕಟ್ಟಡ ‘ರೈತ ಸೌಧ’ ಉದ್ಘಾಟನೆಗೊಂಡಿದೆ. ಹವಾನಿಯಂತ್ರಿತ ಹಾಗೂ ಸುಸಜ್ಜಿತ ಬ್ಯಾಂಕಿಂಗ್ ವಿಭಾಗ, ಗೋದಾಮು, ಲಿಫ್ಟ್ ವ್ಯವಸ್ಥೆ ಮತ್ತು ಸುಮಾರು 200 ಮಂದಿ ಸಭೆ ನಡೆಸಬಹುದಾದ ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದರು.ಸಂಘ ಒಟ್ಟು 4,210 ಸದಸ್ಯರನ್ನು ಹೊಂದಿದ್ದು, 202.45 ಲಕ್ಷ ರು. ಪಾಲು ಬಂಡವಾಳ ಹಾಗೂ 706.89 ಲಕ್ಷ ರು. ನಿಧಿ ಹೊಂದಿದೆ ಎಂದು ತಿಳಿಸಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ ಕುಮಾರ್ ಶೆಟ್ಟಿ ವರದಿ ಮಂಡಿಸಿದರು. ಉಪಾಧ್ಯಕ್ಷ ನವೀನ ಕುಮಾರ್ ಶೆಟ್ಟಿ ಶಾನ್ಕಟ್ಟು, ನಿರ್ದೇಶಕರಾದ ಮೋಹನ ವೈದ್ಯ, ಕಿರಣ್ ಹೆಗ್ಡೆ, ಅರುಣ್ ಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಮ ಶೆಟ್ಟಿ, ಉಮೇಶ ಕೊಠಾರಿ, ಅಜಿತ್ ಕುಮಾರ್, ಸುನಿಲ್, ಮಂಜುನಾಥ ನಾಯ್ಕ್, ಜ್ಯೋತಿ ಉದಯ ಕುಮಾರ್ ಶೆಟ್ಟಿ, ಭಾರತಿ ಬಾಲಕೃಷ್ಣ ಶೆಟ್ ಹಾಗೂ ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ ಇದ್ದರು.ಸನ್ಮಾನ, ವಿದ್ಯಾರ್ಥಿವೇತನ:

ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರಥಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಸಂಘದ ವ್ಯಾಪ್ತಿಯ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಸಂಘದ ವ್ಯಾಪ್ತಿಯ ಶಾಲೆಗಳ 7ನೇ ಮತ್ತು 10ನೇ ತರಗತಿ, ದ್ವಿತೀಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆ ಮಾಡಿ ಆಕರ್ಷಕ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವೇಶತೀರ್ಥರ ಸೇವಾ ಪ್ರಕಲ್ಪ ಪುನಶ್ಚೇತನ: ಶ್ರೀವಿಶ್ವಪ್ರಸನ್ನತೀರ್ಥರು
ಸ್ವಾವಲಂಬಿ ಬದುಕಿಗೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ಅಶೋಕ್ ರೈ