ಕುಣಿಗಲ್: ತಾಲೂಕಿನ ಸಂಪೂರ್ಣ ಪಾಲಿನ ನೀರನ್ನು ನಾವು ಬಳಸಲು ಆಗುತ್ತಿಲ್ಲ ಆದ್ದರಿಂದ ಲಿಂಕ್ ಕೆನಾಲನ್ನು ತಕ್ಷಣ ಪೂರ್ಣಗೊಳಿಸಿ ಕುಣಿಗಲ್ ಗೆ ನೀರು ಹರಿಸಬೇಕೆಂದು ವಕೀಲರ ಸಂಘದ ವತಿಯಿಂದ ಕಾರ್ಯ ಕಲಾಪಗಳನ್ನು ಬಹಿಷ್ಕರಿಸಿ ಪಟ್ಟಣದ ಹುಚ್ಚ ಮಾಸ್ತಿ ಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ವಕೀಲರ ಸಂಘದ ಅಧ್ಯಕ್ಷ ಶಂಕರ್ ನೇತೃತ್ವದಲ್ಲಿ ನ್ಯಾಯಾಲಯದ ಆವರಣದಲ್ಲಿ ಸಂಘಟನೆಗೊಂಡ ಹಲವಾರು ವಕೀಲರು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಲವಾರು ಘೋಷಣೆಗಳನ್ನು ಕೂಗಿದರು, ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ದಯಾನಂದ್ ಕುಣಿಗಲ್ ತಾಲೂಕಿಗೆ ಬರಬೇಕಾದ ನೀರನ್ನು ಗುಬ್ಬಿ ತುಮಕೂರು ತುರುವೇಕೆರೆ ಸೇರಿದ ಇದರ ಭಾಗದ ಶಾಸಕರು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಕುಣಿಗಲ್ಲಿಗೆ ಬರಬೇಕಾದ ಸಂಪೂರ್ಣ ನೀರಿನ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗದ ಕಾರಣ ಸರ್ಕಾರ ಲಿಂಕ್ ಕೆನಾಲ್ ಕಾಮಗಾರಿಯನ್ನು ಪ್ರಾರಂಭ ಮಾಡಿದೆ. ಆದರೆ ಕುಣಿಗಲ್ ನೀರನ್ನು ಬಳಸಿಕೊಳ್ಳುವ ಉದ್ದೇಶದಿಂದ ತುರುವೇಕೆರೆ ಶಾಸಕ ಕೃಷ್ಣಪ್ಪ, ಮಧುಗಿರಿ ಕೆಎನ್ ರಾಜಣ್ಣ, ತುಮಕೂರು ಗ್ರಾಮಾಂತರ ಸುರೇಶ್ ಗೌಡ ಸೇರಿದಂತೆ ಹಲವಾರು ಮಂದಿ ನೀರಿನ ವ್ಯವಸ್ಥೆಯನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.ಕುಣಿಗಲ್ ಗೆ ಬರಬೇಕಾದ ನೀರಿನ ಮೂಲವನ್ನು ನಾವು ಪಡೆಯುವ ಉದ್ದೇಶದಿಂದ ಲಿಂಕ್ ಕೆನಾಲ್ ಮಾಡುತ್ತಿದ್ದೇವೆ. ಕುಣಿಗಲ್ ಗೆ ನೀರು ಬಂದರೆ ಕುಣಿಗಲ್ ತಾಲೂಕಿನ ಬಹುತೇಕ ಕರೆಗಳು ಭರ್ತಿ ಆಗಲಿವೆ ತಾಲೂಕು ಸಂಪೂರ್ಣ ನೀರಾವರಿ ಆಗುತ್ತದೆ ಮೊದಲು ನಮ್ಮ ಪಾಲಿನ ನೀರನ್ನು ನಾವು ಪಡೆಯಬೇಕಾದರೆ ಲಿಂಕ್ ಕೆನಲ್ ಅನಿವಾರ್ಯ ಇದೆ ಅದಕ್ಕಾಗಿ ತಾಲೂಕಿನ ಬಹುತೇಕ ಎಲ್ಲರೂ ಕೂಡ ನಮಗೆ ಬೆಂಬಲ ನೀಡಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಶಂಕರ್ ತಿಳಿಸಿದರು. ಫೋಟೋ ಇದೆ :4 ಕೆಜಿಎಲ್ 1 : - ಕುಣಿಗಲ್ ಪಟ್ಟಣದ ಹುಚ್ಚು ಮಾಸ್ತಿ ಗೌಡ ವೃತದಲ್ಲಿ ಮಾನವ ಸರಪಳಿ ನಿಲ್ಲಿಸಿದ ವಕೀಲರ ಸಂಘದ ಪದಾಧಿಕಾರಿಗಳು