ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಈ ಸಂದರ್ಭದಲ್ಲಿ ಎರಡನೇ ವರ್ಷದ ದಾನ ಕಾರ್ಯಕ್ರಮವನ್ನು ಆಶ್ರಮದಲ್ಲಿ ಸಿಯೊನ್ ಆಶ್ರಮ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಯು. ಸಿ.ಪೌಲೋಸ್ ಹಾಗೂ ಮೇರಿ ಪೌಲೋಸ್ ದಂಪತಿ ಗೌರವ ಉಪಸ್ಥಿತಿಯಲ್ಲಿ ಆಚರಿಸಲಾಯಿತು.
ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಯು.ಸಿ.ಪೌಲೋಸ್, ನಿರ್ಗತಿಕರು, ಅನಾಥರು ಹಾಗೂ ನೊಂದವರ ಸೇವೆಯನ್ನು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡಿದಾಗ ಅದು ದೇವರಿಗೆ ಸಲ್ಲಿಸುವ ದೊಡ್ಡ ಕಾಣಿಕೆಯಾಗಿದ್ದು ಇದರಿಂದ ದೇವರು ಸಂತೃಪ್ತರಾಗಿ ನಮ್ಮನ್ನು ರಕ್ಷಿಸುತ್ತಾರೆ ಎಂದರು.ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಮಾತನಾಡಿ, ಸಿಯೊನ್ ಆಶ್ರಮದವರ ಸೇವೆ ನೋಡುವಾಗ ಕಣ್ಣಲ್ಲಿ ನೀರು ಬರುತ್ತಿದ್ದು ಇಲ್ಲಿನ ಆಶ್ರಮವಾಸಿಗಳ ಸೇವೆ ಮಾಡುತ್ತಿರುವ ಸಿಬ್ಬಂದಿ ಅರ್ಪಣಾಭಾವದ ಮನಸ್ಸು ದೇವರಿಗೆ ಪ್ರಿಯವಾಗಿದೆ ಎಂದರು.
ಅಕ್ಷತಾ ಮತ್ತು ಇತರ ಸಿಬ್ಬಂದಿ ಎಲ್ಲಾ ವಾರ್ಡ್ ಗಳಿಗೆ ಮಂಡಳಿಯ ಸದಸ್ಯರನ್ನು ಕರೆದುಕೊಂಡು ಹೋಗಿ ಅಶ್ರಮವಾಸಿಗಳ ಪರಿಚಯ ಮತ್ತು ಅವರ ನೈಜ ಪರಿಸ್ಥಿತಿಗಳನ್ನು ವಿವರಿಸಿದರು. ಸಿಯೊನ್ ಅಶ್ರಮದಲ್ಲಿರುವ 400ಕ್ಕೂ ಹೆಚ್ಚು ಆಶ್ರಮವಾಸಿಗಳನ್ನು ಹಾಗೂ ಅಲ್ಲಿನ ಅಡಳಿತ ಮಂಡಳಿಯ ಸೇವೆಯನ್ನು ಗುರುತಿಸಿ ಅಶ್ರಮಕ್ಕೆ 10 ಸಾವಿರ ರು. ಮೌಲ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಮಂಡಳಿಯ ಸದಸ್ಯರಿಂದ ಒಂದು ಗಂಟೆಯ ಕುಣಿತ ಭಜನೆ, ಮಿಮಿಕ್ರಿ, ಯಕ್ಷಗಾನದ ಹಾಡು, ನೃತ್ಯ ವೈಭವ ವನ್ನು ಸಹ ಆಶ್ರಮವಾಸಿಗಳ ಮುಂದೆ ನಡೆಸಿ ಅವರ ಮನಸ್ಸನ್ನು ಖುಷಿ ಪಡಿಸಲಾಯಿತು.
ಮಂಡಳಿಯ ಅಧ್ಯಕ್ಷ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ತರಬೇತುದಾರರಾದ ಮಾನ್ಯ, ಮಂಡಳಿಯ ಪೋಷಕರು ಉಪಸ್ಥಿತರಿದ್ದರು.