ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನ ಬಳಿಯಿಂದ ಖಂಡನಾ ಮೆರವಣಿಗೆ ಮತ್ತು ಬೆಳ್ತಂಗಡಿ ಆಡಳಿತ ಸೌಧದ ಆವರಣದಲ್ಲಿ ಭಜಕರ ಸಮಾವೇಶ ನಡೆಯಿತು.ನ್ಯಾಯವಾದಿಗಳಾದ ಸುಬ್ರಹ್ಮಣ್ಯ ಅಗರ್ತ, ಧನಂಜಯ ರಾವ್ ಬಿ.ಕೆ. ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಗಿರಿಜ ಭಟ್ ಮಾತನಾಡಿದರು. ಭಜಕರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಪಿ. ಸಾಲ್ಯಾನ್, ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್ ಭಟ್, ವಿ.ಹಿಂ.ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಇದ್ದರು.ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ನ.ಪಂ. ಅಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಭಾಸ್ಕರ್ ಧರ್ಮಸ್ಥಳ, ಸೀತಾರಾಮ ಬೆಳಾಲ್, ಕೊರಗಪ್ಪ ನಾಯ್ಕ ಜಯಂತ್ ಗೌಡ, ಮಂಜುನಾಥ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಭಜನಾ ಪರಿಷತ್ ಉಪಾಧ್ಯಕ್ಷ ಜಯಪ್ರಕಾಶ್ ಕಡಮ್ಮಾಜೆ ಸ್ವಾಗತಿಸಿದರು. ಭಜನಾ ತರಬೇತಿ ಶಿಕ್ಷಕ ಹರೀಶ್ ನೆರಿಯ ನಿರೂಪಿಸಿದರು.ಸಮಾವೇಶಕ್ಕೆ ಮೊದಲು ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ನೂರಾರು ಭಜಕರು ಪಾಲ್ಗೊಂಡರು.