ಇಲ್ಲಿನ ಕುಂಜಾರುಗಿರಿ ಶ್ರೀಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರ ಪ್ರಯುಕ್ತ ಅದಮಾರು ಮಠದ ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸೇವಾಪತ್ರವನ್ನು ಶ್ರೀ ದುರ್ಗೆಯ ಸನ್ನಿಧಾನದಲ್ಲಿ ಅನಾವರಣ ಮಾಡಿದರು.
ಕಾಪು: ಇಲ್ಲಿನ ಕುಂಜಾರುಗಿರಿ ಶ್ರೀಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರ ಪ್ರಯುಕ್ತ ಅದಮಾರು ಮಠದ ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸೇವಾಪತ್ರವನ್ನು ಶ್ರೀ ದುರ್ಗೆಯ ಸನ್ನಿಧಾನದಲ್ಲಿ ಅನಾವರಣ ಮಾಡಿದರು.
ನಂತರ ಜೀರ್ಣೋದ್ಧಾರ ಪ್ರಕ್ರಿಯೆ ನಿಮಿತ್ತ ಪ್ರತಿ ಭಾನುವಾರ ನಡೆಯಲಿರುವ ಸುತ್ತಮುತ್ತಲಿನ ಪರಿಸರ ಸ್ವಚ್ಛತಾ ಕಾರ್ಯಕ್ರಮಕ್ಕೆ ಶ್ರೀಪಾದರು ಚಾಲನೆ ನೀಡಿ, ಮನೋನಿಯಮಕರಾದ ರುದ್ರ ದೇವರ ಸೇವೆ ಮಾಡುವುದರೊಂದಿಗೆ ಪರಿಸರ ಶುಚಿತ್ವದೊಂದಿಗೆ ಪರಿಸರ ರಕ್ಷಣೆ ಮಾಡಬೇಕು. ನಾವಿರುವ ಪರಿಸರ ಶುದ್ಧಿಯಾಗಿದ್ದರೆ ಮಾತ್ರ ನಮ್ಮ ಮನಸ್ಸು ಶುದ್ಧಿಯಿಂದ ಇರುತ್ತದೆ. ಇದರಿಂದ ದೇವ ಸೇವೆ-ದೇಶ ಸೇವೆ ಮಾಡಿದಂತಾಗುತ್ತದೆ ಎಂದು ಸಂದೇಶ ನೀಡಿದರು. ಈ ಸಂದರ್ಭ ಅದಮಾರು ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್, ಶ್ರೀಮಠದ ಅಧಿಕಾರಿಗಳಾದ ನಾಗರಾಜ್ ರಾವ್ ಮತ್ತು ನಾಗರಾಜ ತಂತ್ರಿ, ಅರ್ಚಕರಾದ ಗೋಪಾಲಕೃಷ್ಣ ಭಟ್, ಇಂಜಿನಿಯರ್ ಲಕ್ಷ್ಮೀನಾರಾಯಣ ಉಪಾಧ್ಯಾಯ, ಕುರ್ಕಾಲು ಪಟ್ಟಾಚಾವಡಿ ದಿನೇಶ್ ಶೆಟ್ಟಿ, ಪರಶುರಾಮ ಭಜನಾ ಮಂಡಳಿ ಅಧ್ಯಕ್ಷ ಕುಳೇದು ಪ್ರಶಾಂತ ಶೆಟ್ಟಿ, ಪಾಜೈ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಆಚಾರ್ಯ, ವಿಹಿಂಪ ಮುಖಂಡರಾದ ರಾಕೇಶ್ ಆಚಾರ್ಯ, ಗ್ರಾಪಂ ಮಾಜಿ ಸದಸ್ಯ ಸುದರ್ಶನ್ ರಾವ್, ಸ್ಥಳೀಯ ಪ್ರಮುಖರಾದ ಸುಮಾ ಶೆಟ್ಟಿ, ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.