ಕನ್ನಡಪ್ರಭ ವಾರ್ತೆ ಭೇರ್ಯ
ಪೋಷಕರ ಮಾತಿಗೆ ಹೆಚ್ಚು ಬೆಲೆ ಇದೆ, ಪೋಷಕರು ಮತ್ತು ಮಕ್ಕಳನ್ನು ಶಾಲೆಗಳು ಮುಕ್ತ ಸ್ವಾತಂತ್ರ್ಯ ನೀಡಿ ಗೌರವಯುತವಾಗಿ ನಡೆಸಿ ಕೊಳ್ಳುಲಾಗುವುದು, ಪೋಷಕರೇ ಶಾಲಾಭಿವೃದ್ದಿಯ ಅಧ್ಯಕ್ಷರಾಗಿ, ಸದಸ್ಯರಾಗಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ಅವಕಾಶವಿದೆ ಎಂದು ತಮಟೆ ಬಾರಿಸಿ ಕೊಂಡು ಗ್ರಾಮದಲ್ಲಿ ಜಾಥಾ ಮೂಲಕ ಕೂಗುತ್ತಾ ಸಾರಿದರು.
ಪ್ರತಿ ತಿಂಗಳು ಶುಲ್ಕ ಕೊಟ್ಟಿಲ್ಲ ಎಂದು ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸುವ ಪರಿಪಾಠ ಇಲ್ಲ,ಡೊನೇಷನ್ ನೀಡುವ ಅಗತ್ಯವಿಲ್ಲ ಅದರ ಬದಲು ಮನೆಯಲ್ಲಿಯೇ ಆ ಹಣದಿಂದ ಉತ್ತಮ ಪುಸ್ತಕಗಳನ್ನು ಖರೀದಿಸಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿ ಇದರ ಪ್ರಯೋಜನ ಪಡೆಯಬಹುದು.ಕ್ರೀಡೆಗೆ ಉತ್ತಮ ಅವಕಾಶವಿದೆ, ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆವಿಗೂ ಸರ್ಕಾರಿ ಶಾಲೆ ಮಕ್ಕಳು ಚಾಂಪಿಯನ್ ಶಿಪ್ ಪಡೆದಿದ್ದಾರೆ ಹಾಗಾಗಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿ ಜಾಥ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು.
ಬಿಸಿಯೂಟದ ವ್ಯವಸ್ಥೆ ಇದ್ದು, ತಾಯಂದಿರು ಬೇಗನೆ ಎದ್ದು, ಡಬ್ಬಿ ತಯಾರು ಮಾಡಿ ಕಳುಹಿಸುವ ಅಗತ್ಯವಿಲ್ಲ, ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ, ಮಕ್ಕಳನ್ನು ಶಾಲೆಗೆ ಸೇರಿಸಲು ದೊಡ್ಡ ಕ್ಯೂಗಳಲ್ಲಿ ಗಂಟೆ ಗಟ್ಟಲೆ ನಿಲ್ಲುವ ಗೋಜಿಲ್ಲ, ಶುಲ್ಕ ಪಾವತಿ ವಿಷಯದಲ್ಲಿ ಪೋಷಕರು ಆತಂಕ ಪಡುವ ಅಗತ್ಯವಿರುವುದಿಲ್ಲ, ನಿಮ್ಮದೇ ಅಧಿಕಾರದ ವಾತಾವರಣ ಕಾಣಬೇಕಿದ್ದರೆ ಸರ್ಕಾರಿ ಶಾಲೆಗೆ ಸೇರಿಸಿಎಂದು ಗ್ರಾಮದ ಪ್ರಮುಖ ಬೀದಿಯಲ್ಲಿ ಮಕ್ಕಳೊಂದಿಗೆ ತಮಟೆ ಬಾರಿಸಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆಗೆ ಕಳುಹಿಸಿ ಎಂಬ ಘೋಷಣೆ ಮೂಲಕ ಪೋಷಕರಿಗೆ ಮನವರಿಕೆ ಮಾಡಿಕೊಡಲಾಯಿತು.