೨೩ಕ್ಕೆ ವಿಜಯನಗರ ಬಡಾವಣೆಯಲ್ಲಿ ಕುರುಕ್ಷೇತ್ರ ನಾಟಕ

KannadaprabhaNewsNetwork | Published : Mar 20, 2024 1:21 AM

ಸಾರಾಂಶ

ಶ್ರೀ ಮಾರುತಿ ಕಲಾಸಂಘ, ಎಂ.ಸಿ. ಶ್ರೀನಿವಾಸ್ ಮತ್ತು ಟಿ.ವಿ. ನಾಗರಾಜುರವರ ನೇತೃತ್ವದಲ್ಲಿ ಮತ್ತು ಕೆ. ರಮೇಶ್ ಕೋಡಿರಂಗಸ್ವಾಮಿ, ಎಚ್.ವಿ. ಕೃಷ್ಣ , ಇತರೆ ಕಲಾವಿದರ ಸಾರಥ್ಯದಲ್ಲಿ ಹಾಗೂ ಬಡಾವಣೆಯ ನಿವಾಸಿಗಳ ಸಹಕಾರದೊಂದಿಗೆ ಮಾಚ್ ೨೩ರ ರಂದು ಸಂಜೆ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಮೀಪ ವಿಜಯನಗರ ಬಡಾವಣೆಯ ಆದಾಯ ತೆರಿಗೆ ಕಚೇರಿಯ ಪಕ್ಕದ ಆವರಣದಲ್ಲಿ ಮಾರ್ಚ್ ೨೩ ರಂದು ಶನಿವಾರ ಸಂಜೆ ೬ ಗಂಟೆಗೆ ಕುರುಕ್ಷೇತ್ರ ಇಲ್ಲವೇ, ಧರ್ಮರಾಜ್ಯ ಸ್ಥಾಪನೆ ಹೆಸರಿನಲ್ಲಿ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಟಿ.ವಿ. ನಾಗರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬೇಲೂರು ರಸ್ತೆ, ವಿಜಯ ನಗರ ಬಡಾವಣೆಯಲ್ಲಿರುವ ಶ್ರೀ ಮಾರುತಿ ಕಲಾಸಂಘ, ಎಂ.ಸಿ. ಶ್ರೀನಿವಾಸ್ ಮತ್ತು ಟಿ.ವಿ. ನಾಗರಾಜುರವರ ನೇತೃತ್ವದಲ್ಲಿ ಮತ್ತು ಕೆ. ರಮೇಶ್ ಕೋಡಿರಂಗಸ್ವಾಮಿ, ಎಚ್.ವಿ. ಕೃಷ್ಣ , ಇತರೆ ಕಲಾವಿದರ ಸಾರಥ್ಯದಲ್ಲಿ ಹಾಗೂ ಬಡಾವಣೆಯ ನಿವಾಸಿಗಳ ಸಹಕಾರದೊಂದಿಗೆ ಮಾಚ್ ೨೩ರ ರಂದು ಸಂಜೆ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ. ಹನೀಫ್ ರವರು ನೂತನವಾಗಿ ನಿರ್ಮಿಸಿರುವ ಶ್ರೀ ಸೂರ್ಯೋದಯ ಡ್ರಾಮಾ ಸೀನರಿ, ಬೆಳ್ಳೂರು ಕ್ರಾಸ್ ಇವರ ಭವ್ಯ ರಂಗಸಜ್ಜಿಕೆಯಲ್ಲಿ, ಪಾಲಾಕ್ಷಾಚಾರ್, ಸೀಗೆನಾಡು ಇವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಅಂದು ಹೋಳಿ ಹಬ್ಬದ ಪ್ರಯುಕ್ತ ವಿಜಯ ನಗರ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಎಲ್ಲಾ ಭಕ್ತಾಧಿಗಳಿಗೆ ಸಂಜೆ ೬ ರಿಂದ ೮ರವರೆಗೂ ಪೂಜೆ ಮತ್ತು ಪ್ರಸಾದ ವಿನಿಯೋಗವಿರುತ್ತದೆ ಎಂದರು.

ನಾಟಕ ಪ್ರದರ್ಶನದ ಸಂದರ್ಭದಲ್ಲಿ ೧೦೬ ವರ್ಷದ ಶತಾಯುಷಿ ತ್ಯಾಗಟೂರು ನಂಜಮ್ಮರವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ವಿಜಯನಗರದ ಕೃಷ್ಣಕುಮಾರ್ ವಹಿಸಲಿದ್ದಾರೆ. ಎಂ.ಸಿ. ರಾಜು, ಡಿ.ಎಂ. ಹಳ್ಳಿ ಇವರು ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಲಾಕ್ಷಚಾರ್, ನಿವಾಸಿಗಳಾದ ನಾರಾಯಣಗೌಡ, ಗಿಡ್ಡೇಗೌಡ, ತಿಮ್ಮೇಗೌಡ, ಚಂದ್ರೇಗೌಡ ಇತರರು ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅರ್ಚಕ ರವಿಕಾಂತ್, ನಿವೃತ್ತ ಪೊಲೀಸ್ ಅಧಿಕಾರಿ ಕೆ. ರಮೇಶ್, ಗ್ರಾಪಂ ಮಾಜಿ ಸದಸ್ಯ ಎಂ.ಸಿ. ಶ್ರೀನಿವಾಸ್, ರವಿಕುಮಾರ್ ಇತರರು ಉಪಸ್ಥಿತರಿದ್ದರು.

------------------ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ. ಟಿ.ವಿ. ನಾಗರಾಜು ಮಾತನಾಡಿದರು.

Share this article