ಲೋಕ್‌ ಅದಾಲತ್‌: 37679 ಪ್ರಕರಣಗಳಿಂದ 15.32 ಕೋಟಿ ಇತ್ಯರ್ಥ

KannadaprabhaNewsNetwork |  
Published : Mar 20, 2024, 01:20 AM IST
ಚಿತ್ರ 19ಬಿಡಿಆರ್60 | Kannada Prabha

ಸಾರಾಂಶ

ಬೀದರ್‌ ಜಿಲ್ಲೆಯಾದ್ಯಾಂತ ಒಟ್ಟು 21,041 ವ್ಯಾಜ್ಯಪೂರ್ವ ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು ₹4.58 ಕೋಟಿಗೂ ಹೆಚ್ಚು ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೀದರ್

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಇವರು ರಾಷ್ಟ್ರೀಯ ಅದಾಲತ್ ನಡೆಸಲು ನಿರ್ದೇಶದನ್ವಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಬೀದರ ಜಿಲ್ಲೆಯಲ್ಲಿ ಮಾ.16ರಂದು ರಾಷ್ಟ್ರೀಯ ಲೋಕ್‌ ಅದಾಲತ್ ಹಮ್ಮಿಕೊಂಡು ಅದರಲ್ಲಿ ಸುಮಾರು 37,679 ಪ್ರಕರಣಗಳಿಂದ ಒಟ್ಟು ಮೊತ್ತ ₹15.32 ಕೋಟಿ ಇತ್ಯರ್ಥಗೊಳಿಸಲಾಗಿದೆ ಎಂದು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಇದರಲ್ಲಿ ಉಳಿಕೆ 16,638 (ಪೆಂಡಿಂಗನಲ್ಲಿನ) ಪ್ರಕರಣ ಇತ್ಯರ್ಥಗೊಳಿಸಲಾಗಿ ₹10.74,68,581 ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಾಂತ ಒಟ್ಟು 21,041 ವ್ಯಾಜ್ಯಪೂರ್ವ ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು ₹4.58 ಕೋಟಿಗೂ ಹೆಚ್ಚು ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ.

ಬ್ಯಾಂಕ್ ವಸೂಲಾತಿ ಪ್ರಕರಣಗಳಿಗೆ ಸಂಬಂದಿಸಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕಗಳಿಂದ 7,997 ಪ್ರಕರಣ ಗುರುತಿಸಿದ್ದು ಇವುಗಳಲ್ಲಿ 136 ಪ್ರಕರಣ ಇತ್ಯರ್ಥಗೊಳಿಸಿ ₹1.33 ಕೋಟಿಗೂ ಹೆಚ್ಚು ಬಾಕಿ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಗರಸಭೆ, ಪುರಸಭೆ ಗ್ರಾಮ ಪಂಚಾಯತಿಗಳ ನೀರಿನ ತೆರಿಗೆ ಮತ್ತು ಬಿ.ಎಸ್.ಎನ್.ಎಲ್, ಜೆಸ್ಕಾಂ ಬಾಕಿ ಬಿಲ್ ಮತ್ತು ಟ್ರಾಫಿಕ ವಸೂಲಾತಿಯಲ್ಲಿ 20,905 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 3,24,75,896 ರುಪಾಯಿಗಳನ್ನು ವಸೂಲಿ ಮಾಡಲಾಗಿದೆ.

ಒಟ್ಟಾರೆ ಜಿಲ್ಲೆಯಾದ್ಯಂತ ಸದರಿ ಲೋಕ ಆದಲಾತನಲ್ಲಿ 37,679 ಪ್ರಕರಣ ಇತ್ಯರ್ಥಗೊಳಿಸಿ, 15,32,91,627 ರುಪಾಯಿಗಳ ಪರಿಹಾರ, ವಸೂಲಾತಿ ಮೂಲಕ ಇತ್ಯರ್ಥ ಮಾಡಲಾಗಿದೆ ಎಂದರು. ಇದೇ ಲೋಕ ಅದಾಲತನಲ್ಲಿ ಜಿಲ್ಲೆಯಾದ್ಯಂತ ಒಟ್ಟು 5 ಜೋಡಿಗಳು ರಾಜಿ ಸಂಧಾನದ ಮೂಲಕ ಒಂದಾಗಿರುತ್ತಾರೆ ಎಂದು ಹೇಳಿದರು.

ಲೋಕ ಆದಾಲತ್ ನಲ್ಲಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಹಕರಿಸಿದ ಎಲ್ಲಾ ಇಲಾಖೆಯವರಿಗೂ ಪ್ರಾಧಿಕಾರದಿಂದ ಅಭಿನಂದನೆಗಳನ್ನು ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ವರ, ಆಕಾಶ ಸಜ್ಜನ ಹಾಗೂ ರಾಹುಲ, ನಾಗರಾಜ, ಪ್ರೀತಿ, ಈರಮ್ಮ, ಜೀವನ, ಯೋಹನ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ