ಉತ್ತಮ ಗುಣಮಟ್ಟದ ಒಂದು ಕೆ.ಜಿ. ತಂಬಾಕು ಕೆ.ಜಿಗೆ 320 ರು. ನೀಡದೆ ಕೆಲವೇ ಬೇಲ್‌ಗಗ್ಗಳಿಗೆ ನೀಡಲಾಗುತ್ತಿದ್ದು ಗುರುವಾರ 310 ರೂಗೆ ಇಳಿಕೆ ಮಾಡಲಾಗಿತ್ತು ಮತ್ತೆ ಶುಕ್ರವಾರ 315. ರು. ಆಗಿದೆ ಎಂದು ರೈತರು ತಿಳಿಸಿದರು. ಬಜೆಟ್ ಮುನ್ನಾ ಕೇಂದ್ರ ಸರ್ಕಾರ ತಂಬಾಕು ಮೇಲಿನ ಅಬಕಾರಿ ಸುಂಕ ಮತ್ತು ಜಿಎಸ್ಟಿ ದರ ಏರಿಕೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ತಂಬಾಕು ಖರೀದಿಸುವ ಕಂಪನಿಗಳು ತಂಬಾಕು ಹರಾಜು ಪ್ರಕ್ರಿಯೆಯನ್ನು ಕಳೆದ ಜನವರಿ 23ರಿಂದ ಸ್ಥಗಿತಗೊಳಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಮುಂದಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ತಂಬಾಕು ಹರಾಜು ಮಾರುಕಟ್ಟೆ ಪ್ರಕ್ರಿಯೆ ಪುನರಾರಂಭಗೊಂಡಿದ್ದು ಬೆಲೆ ಕುಸಿತದಿಂದ ರೊಚ್ಚಿಗೆದ್ದ ರೈತರು ವರ್ತಕರೊಂದಿಗೆ ಮಾತಿನ ಚಕಮಕಿ ನಡೆಸಿ ಗುರುವಾರ ಮತ್ತೆ ಕೆಲಕಾಲ ಪ್ರತಿಭಟನೆ ನಡೆಸಿದ ನಂತರ ಮತ್ತೆ ತಂಬಾಕು ಹರಾಜು ಮಾರುಕಟ್ಟೆ ಪ್ರಾರಂಭವಾಯಿತು. ಉತ್ತಮ ಗುಣಮಟ್ಟದ ಒಂದು ಕೆ.ಜಿ. ತಂಬಾಕು ಕೆ.ಜಿಗೆ 320 ರು. ನೀಡದೆ ಕೆಲವೇ ಬೇಲ್‌ಗಗ್ಗಳಿಗೆ ನೀಡಲಾಗುತ್ತಿದ್ದು ಗುರುವಾರ 310 ರೂಗೆ ಇಳಿಕೆ ಮಾಡಲಾಗಿತ್ತು ಮತ್ತೆ ಶುಕ್ರವಾರ 315. ರು. ಆಗಿದೆ ಎಂದು ರೈತರು ತಿಳಿಸಿದರು. ಬಜೆಟ್ ಮುನ್ನಾ ಕೇಂದ್ರ ಸರ್ಕಾರ ತಂಬಾಕು ಮೇಲಿನ ಅಬಕಾರಿ ಸುಂಕ ಮತ್ತು ಜಿಎಸ್ಟಿ ದರ ಏರಿಕೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ತಂಬಾಕು ಖರೀದಿಸುವ ಕಂಪನಿಗಳು ತಂಬಾಕು ಹರಾಜು ಪ್ರಕ್ರಿಯೆಯನ್ನು ಕಳೆದ ಜನವರಿ 23ರಿಂದ ಸ್ಥಗಿತಗೊಳಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಮುಂದಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆಗಾರರ ಸಂಕಷ್ಟವನ್ನು ಈ ಭಾಗದ ಶಾಸಕ ಮಂಜು ಅವರು ತಂಬಾಕು ಮಂಡಳಿ, ಐಟಿಸಿ ಕಂಪನಿ ಅಧಿಕಾರಿಗಳು ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಕೇಂದ್ರ ಸರಕಾರದ ಅಬಕಾರಿ ಸುಂಕವನ್ನು ಹಿಂಪಡೆದಿದೆ. ಈ ಸಲುವಾಗಿ ಗುರುವಾರದಿಂದ ತಂಬಾಕು ಖರೀದಿ ಪ್ರಕ್ರಿಯೆಯನ್ನು ವರ್ತಕರು ಮುಂದುವರಿಸಿದ್ದಾರೆ.ಶುಕ್ರವಾರ ಮಾರುಕಟ್ಟೆಯಲ್ಲಿ 11 ಕಂಪನಿಗಳು ತಂಬಾಕು ಖರೀದಿಯಲ್ಲಿ ತೊಡಗಿದ್ದು, ಗುಣಮಟ್ಟದ ತಂಬಾಕು ಕೆ.ಜಿ ಗೆ 315 ರುಪಾಯಿ ದೊರೆತಿದೆ. ಈ ಹಿಂದೆ ರು. 321 ತನಕ ಬೆಲೆ ದೊರೆತಿದೆ. ಎರಡು ವಾರ ತಡವಾಗಿ ಪುನರಾರಂಭಗೊಂಡಿರುವ ಮಾರುಕಟ್ಟೆಯಲ್ಲಿ ಕೇಜಿ ತಂಬಾಕಿಗೆ 322ರಿಂದ 330ರೂ ತನಕ ಬೆಲೆ ದೊರೆಯಬಹುದೆಂಬ ಭರವಸೆಯಲ್ಲಿದ್ದ ಬೆಳೆಗಾರರಿಗೆ ದಿಢೀರ್ 10 ರು. ಎಂದಿನ ದರ ಇಳಿಕೆ ಕಂಡಿದ್ದನ್ನು ಕಂಡು ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಬೆಳೆಗಾರರ ಸಂಘದ ಮುಖಂಡರು ಭಾಗಿಯಾಗಿ ಬೆಲೆ ಇಳಿಕೆಯನ್ನು ತೀವ್ರವಾಗಿ ಖಂಡಿಸಿದರು.ಮಾರುಕಟ್ಟೆ ಈಗಾಗಲೇ ಸ್ಥಗಿತಗೊಂಡು ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಈಗ ಪುನಃ ಹೋರಾಟ ಮಾಡಿ ಮತ್ತೆ ಬಂದ್ ಮಾಡುವ ಬದಲು ಸ್ಥಿರವಾದ ಬೆಲೆ ನಿಗದಿಮಾಡಿ ಬೇಲ್‌ಗಳನ್ನು ಖರೀಸುವಂತೆ ಕೆಲವು ಬೆಳೆಗಾರರು ಮನವಿ ಮಾಡಿದ ಮೇರೆಗೆ ಹೋರಾಟವನ್ನು ತಾತ್ಕಲಿಕವಾಗಿ ಕೈಬಿಡಲಾಯಿತು. ಆದರೂ ಕೂಡ ಬೆಲೆ ಸ್ಥಿರತೆಯನ್ನು ಕಾಣದೇ ರೈತರು, ವರ್ತಕರು ಮತ್ತು ಮಂಡಳಿಯವರ ನಡುವಿನ ಹಗ್ಗಾ ಜಗ್ಗಾಟ ನಡುವೆಯೂ ಗುಣಮಟ್ಟದ ಕೆ.ಜಿ.ತಂಬಾಕು 310ರಿಂದ 311 ರು, ಕನಿಷ್ಠ ದರ ರು. 210 ರು. ಮತ್ತು ಸರಾಸರಿ 272.58 ರು. ದರ ದೊರೆಯಿತು. ಈ ಹಿಂದೆ ಸರಾಸರಿ ದರ 284.98 ರುಪಾಯಿ ದೊರೆತಿತ್ತು.ಕಡಿಮೆ ಕಂಪನಿ ಭಾಗಿ :ಹಲವು ದಿನಗಳ ನಂತರ ಮಾರುಕಟ್ಟೆ ಆರಂಭಗೊಂಡಿದ್ದು, ಎಂದಿನಂತೆ 25 ಕಂಪನಿಗಳು ತಂಬಾಕು ಖರೀದಿಯಲ್ಲಿ ಭಾಗಿಯಾಗಬೇಕಿತ್ತು. ಇಂದು 11 ಕಂಪನಿಗಳು ಮಾತ್ರ ಭಾಗಿಯಾಗಿವೆ.ಹರಾಜು ಮಾರುಕಟ್ಟೆ-7ರಲ್ಲಿ ಒಟ್ಟು 521ಬೇಲ್‌ಗಳು ಬಂದಿದ್ದವು.ಅವುಗಳಲ್ಲಿ 411 ಸೋಲ್ಡ್ ಆಗಿವೆ. ಉತ್ತಮ ಗುಣಮಟ್ಟದ ಕೆ.ಜಿ.ತಂಬಾಕಿಗೆ 311 ರು,ಕನಿಷ್ಠ 210 ರು ಮತ್ತು ಸರಾಸರಿ 272.58 ರು. ಬೆಲೆ ದೊರೆತಿದೆ. ಮುಂದಿನ ಮಾರುಕಟ್ಟೆಯಲ್ಲಿ ಉಳಿದ ಎಲ್ಲಾ ಕಂಪನಿಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹರಾಜು ಅಧೀಕ್ಷಕಿ ಸವಿತಾ ಅವರು ತಿಳಿಸಿದರು.ರೈತರಿಗೆ ಬೆಲೆ ಸ್ಥಿರತೆ ಸಿಕ್ಕಿಲ್ಲ :
ಇಂದಿನ ಮಾರುಕಟ್ಟೆಯಲ್ಲಿನ ಬೆಲೆಯನ್ನು ಕಂಡರೇ ಭಯವಾಗುತ್ತಿದೆ.ಇಲ್ಲಿ ಮಂಡಳಿ,ಕೇಂದ್ರ ಸರ್ಕಾರ ನೆರವಿಗೆ ಬಂದಂತೆ ಕಾಣುತ್ತಿಲ್ಲ. ಅಬಕಾರಿ ಸುಂಕ, ಜಿಎಸ್ಪಿಗಳನ್ನು ಹಿಂದಕ್ಕೆ ಪಡೆದಿರುವ ಹೇಳಿಕೆಗಳು ಜಾರಿಗೆ ಬಂದಂತೆ ಕಾಣುತ್ತಿಲ್ಲ. 45 ಸಾವಿರ ಕೋಟಿ ರು. ರಪ್ತು ಸುಂಕವನ್ನು ತಂದುಕೊಡುವ ತಂಬಾಕು ಬೆಳೆಗಾರರಿಗೆ ಬೆಲೆ ಸಿಗುತ್ತಿಲ್ಲ. ಮುಕ್ತ ವ್ಯಾಪಾರ ಮಾಡಿದರೇ ಬೆಳೆಗಾರರಿಗೆ ಬರೆ ಎಂದಿಗೂ ಇರಲ್ಲ. ವರ್ತಕರನ್ನು ಉದ್ಧಾರ ಮಾಡಿ ರೈತರನ್ನು ಶೋಷಣೆಗೆ ತಳ್ಳುವ ಕೆಲಸ ಪ್ರತಿ ವರ್ಷವೂ ನಡೆಯುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಅವರು ಆರೋಪಿಸಿದರು.