ಕುಶಾಲನಗರ: ಆರ್ಯವೈಶ್ಯ ಮಹಾಸಭಾ ಪ್ರಚಾರ ಕಾಲ್ನಡಿಗೆ ಜಾಥಾ

KannadaprabhaNewsNetwork |  
Published : Aug 25, 2026, 03:15 AM IST
ಜಾಥಾ ಚಾಲನೆ ಸಂದರ್ಭ | Kannada Prabha

ಸಾರಾಂಶ

ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಡಿ. 25 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಯಶಸ್ವಿಯಾಗಲೆಂದು ಸಂಕಲ್ಪ ತೊಟ್ಟು, ಕುಶಾಲನಗರದಲ್ಲಿ ಪ್ರಚಾರ ಕಾಲ್ನಡಿಗೆ ಜಾಥಾ ನಡೆಯಿತು.

ಕುಶಾಲನಗರ

ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಡಿ. 25 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಯಶಸ್ವಿಯಾಗಲೆಂದು ಸಂಕಲ್ಪ ತೊಟ್ಟು, ಕುಶಾಲನಗರದಲ್ಲಿ ಪ್ರಚಾರ ಕಾಲ್ನಡಿಗೆ ಜಾಥಾ ನಡೆಯಿತು.

ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್, ಆರ್ಯವೈಶ್ಯ ಮಂಡಳಿ ಮತ್ತು ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನದಿಂದ ಹೊರಟು ರಥ ಬೀದಿಯ ಮುಖಾಂತರ ಆಂಜನೇಯ ದೇವಸ್ಥಾನದ ತನಕ ಕಾಲ್ನಡಿಗೆ ಜಾಥಾ ನಡೆಯಿತು.ಕುಶಾಲನಗರ ಡಿವೈಎಸ್ಪಿ ಪಿ ಚಂದ್ರಶೇಖರ್ ಜಾಥಾಗೆ ಚಾಲನೆ ನೀಡಿ ಉದ್ಘಾಟಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರೂ ಹಾಗೂ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಸದೃಢ ಯುವ ಭಾರತದ ನಿರ್ಮಾಣಕ್ಕಾಗಿ ಪಣತೊಟ್ಟಿದೆ. ಇದರ ಅಂಗವಾಗಿ ಮುಂಬರುವ ವರ್ಷಗಳಲ್ಲಿ 5000 ಸ್ಟಾರ್ಟ್ ಅಪ್ ಕಂಪನಿಗಳನ್ನು ಪ್ರಾರಂಭಿಸಲು 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸುವಂತಹ ವೇದಿಕೆಯನ್ನು ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಎಂಬ ಶೀರ್ಷಿಕೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಹಿತಿ, ತರಬೇತಿ, ಸಲಹೆ ಸಹಕಾರ ನೀಡುವ ಮೂಲಕ ಅವಕಾಶವನ್ನು ಕಲ್ಪಿಸುತ್ತಿದೆ ಎಂದರು. ಆರ್ಯವೈಶ್ಯ ಮಹಾಸಭಾ ಕೊಡಗು‌ ಜಿಲ್ಲಾಧ್ಯಕ್ಷ ಬಿ. ಎಲ್. ಸತ್ಯನಾರಾಯಣ, ಮಡಿಕೇರಿಯ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ವಿ.ಎಸ್. ಚಂದ್ರಶೇಖರ್, ಕುಶಾಲನಗರದ ಕಾರ್ಯದರ್ಶಿ ಪ್ರವೀಣ್ ಕೆ, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ. ಅಮೃತ್ ರಾಜ್, ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ವಾಣಿ ಮಹೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಜೆ. ಬಾಲಾಜಿ, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಅನುಷಾ ಅರ್ಜುನ್, ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ, ವಾಸವಿ ಕ್ಲಬ್ ನ ಅಧ್ಯಕ್ಷ ವಿ.ಆರ್. ಮಂಜುನಾಥ್, ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳಾದ ಪ್ರಶಾಂತ್ ಪಿ ಎಸ್, ಬಿ.ಎಲ್. ಅಶೋಕ್, ಕೆ.ಜೆ. ಸತೀಶ್, ಬಿ.ಪಿ. ಕೃಷ್ಣಮೂರ್ತಿ, ವೈಶಾಖ್ ಮತ್ತು ಎಲ್ಲಾ ಅಂಗ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟಿ ವೃಕ್ಷ ಅಭಿಯಾನದಿಂದ ಅರಣ್ಯ ಪ್ರದೇಶ ಶೇ.2.4ಕ್ಕೆ ಏರಿಕೆ: ಪ್ರಶಾಂತ.ಪಿ.ಕೆ.ಎಂ
ಸಾಧನೆಗೆ ಆತ್ಮವಿಶ್ವಾಸವೇ ಶಿಖರ: ಮಂಗಳಾನಾಥನಂದಜೀ ಮಹಾರಾಜ್