ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಸಮಾಜ ಹಾಗೂ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ತ್ರಿದಾಸೋಹಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ 6ನೇ ಪುಣ್ಯ ಸ್ಮರಣೆ ಆಚರಿಸಲಾಯಿತು.ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ನಂದೀಶ್ ಮಾತನಾಡಿ, ಸಾರ್ಥಕ ಜೀವನ ನಡೆಸಿದ ಡಾ ಶಿವಕುಮಾರ ಸ್ವಾಮೀಜಿ ಈ ಜಗತ್ತು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರು. ಸಮಾಜಕ್ಕೆ ನೀಡಿದ ಶೈಕ್ಷಣಿಕ, ಧಾರ್ಮಿಕ ಹಾಗೂ ದಾಸೋಹಕ್ಕೆ ನೀಡಿದ ಕೊಡುಗೆಗಳು ಮಾದರಿಯಾಗಿದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ನೇತ್ರಾವತಿ, ನಿರ್ದೇಶಕ ಎಚ್.ಎಂ.ಮಧುಸೂದನ್ ಮಾತನಾಡಿದರು.ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಎಸ್.ಆರ್.ಶಿವಲಿಂಗ, ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ದೀಪು ಕರುಣಾಕರ್, ಅಕ್ಕನ ಬಳಗದ ಉಪಾಧ್ಯಕ್ಷೆ ಲತಾ,
ಕಾರ್ಯದರ್ಶಿ ಎಚ್.ಪಿ.ಭಾಗೀರಥಿ, ನಿವೃತ್ತ ಶಿಕ್ಷಕ ಮಹಾದೇವಪ್ಪ, ಎಂ.ಎಸ್.ಗಣೇಶ್, , ಶಿಕ್ಷಕರಾದ ಹುಲುಸೆ ಬಸವರಾಜ್, ಬಿ.ಬಿ.ಹೇಮಲತಾ, ಟಿ.ವಿ.ಶೈಲಾ, ಪ್ರಮುಖರಾದ ನಾಗರಾಜ್, ವಿಜಯ ಪಾಲಾಕ್ಷ, ಮನು, ಮಣಿ ಶಿವಣ್ಣ, ಸರೋಜ ಆರಾಧ್ಯ, ಲೇಖನ ಧರ್ಮಪ್ಪ, ವೀಣಾ ಇತರರು ಇದ್ದರು.ಗುಡ್ಡೆಹೊಸೂರು: ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
ಗುಡ್ಡೆಹೊಸೂರು ವೀರಶೈವ ಸಮಾಜ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿನ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಅವರ ಭಾವಚಿತ್ರ ಇರಿಸಿ ಪೂಜೆ ನೆರವೇರಿಸಲಾಯಿತು. ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಪೂಜಾ ಕಾರ್ಯದಲ್ಲಿ ವೀರ ಶೈವ ಸಮಾಜದ ಪ್ರಮುಖರಾದ ಬಿ.ಸಿ.ಮಲ್ಲಿಕಾರ್ಜುನ. ಬಿ.ಎನ್.ಕಾಶಿ, ಶುಭಶೇಖರ್, ಬಿ.ಸಿ. ನವೀನ್, ಬಿ.ಟಿ.ಮಹೇಶ್, ಪ್ರಸನ್ನ, ಸಾಗರ್ ಪಾಪಣ್ಣ ಮತ್ತಿತರರು ಹಾಜರಿದ್ದರು.ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಪ್ರಭಾರಿ ಅಧ್ಯಕ್ಷ ಪ್ರವೀಣ್, ಸದಸ್ಯರಾದ ಬಿ.ಸಿ. ಪ್ರದೀಪ್, ಲಕ್ಷಮ್ಮಣ, ಪಿಡಿಒ ಸುಮೇಶ್, ಬಿ.ಎಂ.ಸಂತೋಷ್ ಮತ್ತಿತರರು ಹಾಜರಿದ್ದರು. ನೂರಾರು ಮಂದಿ ಅನ್ನಸಂತರ್ಪಣೆಯಲ್ಲಿ ಭಾಗಿಗಳಾಗಿದ್ದರು. ಪರ್ತಕರ್ತ ಕೆ.ಎಸ್. ಮೂರ್ತಿ ಹಾಜರಿದ್ದರು.