ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ

KannadaprabhaNewsNetwork |  
Published : Oct 19, 2025, 01:02 AM IST
ಚಿತ್ರ : 13ಎಂಡಿಕೆ2 : ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ದಿ ಸಂಘದ ಮಹಾಸಭೆ ನಡೆಯಿತು.  | Kannada Prabha

ಸಾರಾಂಶ

ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್‌ ಮುಹೂರ್ತ ಹಬ್ಬದ ಒತ್ತರ್ಮೆ ಕೂಟವು ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮಹೂರ್ತ ಹಬ್ಬದ ಒತ್ತರ್ಮೆಕೂಟವು ಕುಶಾಲನಗರ ಕೇರಳ ಸಮಾಜದಲ್ಲಿ ಸಂಘದ ಅಧ್ಯಕ್ಷರಾದ ಚಳಿಯಂಡ ಯಶ್ವಥ್ ಅಚ್ಚಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಂಬರುವ ವರ್ಷಗಳಲ್ಲಿ ಸಮಾಜಕ್ಕೆ ನಿವೇಶನ ಖರೀದಿಸಿ ಅ ನಿವೇಶನದಲ್ಲಿ ಸುಸಜ್ಜಿತ ಸಮುಧಾಯ ಭವನವನ್ನು ನಿರ್ಮಿಸಲು ಸಲಹೆಗಳು ಕೇಳಿಬಂದವು.

ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾಂಗಬಾಂಧವನ್ನು ಗುರುತಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಪ್ರಾದೇಶಿಕ ಸಾರಿಗೆ ನಿಗಮದ ಬ್ರೇಕ್ ಇನ್ಸ್ಪೆಕ್ಟರ್ ಗಳಾದ ಪೊಕ್ಕಳಿಚಂಡ ಮೋಹನ್ ಕುಮಾರ್, ಕುಶಾಲನಗರ ಜೆ. ಸಿ. ಐ ಅಧ್ಯಕ್ಷರಾದ ತಂಬಂಡ ತೇಜ ದಿನೇಶ್, ಭಾಗವಹಿಸಿದ್ದರಲ್ಲದೆ ಸಂಘದ ಉಪಾಧ್ಯಕ್ಷರಾದ ಚಂಗಚಂಡ ಸುಬ್ರಮಣಿ, ಕಾರ್ಯದರ್ಶಿ ಪಂದಿಕಂಡ ವಿಠ್ಠಲ, ಮಂಡೇಡ ದೀಪಕ್, ಖಚಾಂಚಿಗಳಾದ ಕೊಂಗೆಪ್ಪಂಡ ನಂಜಪ್ಪ, ನಿರ್ದೆಶಕರುಗಳಾದ ಪುದಿಯತಂಡ ಬೆಳ್ಳಿಯಪ್ಪ, ಪುದಿಯತಂಡ ಗಾಂಧಿ, ಕಾಟಿಕುಟ್ಟೀರ ಮೊಣ್ಣಪ್ಪ, ಮೇಲತಂಡ ಮಂಜುಳ, ಪೊಕ್ಕಳಿಚಂಡ ಲಲಿತ ಚಂಗಚಂಡ ನಂಜಪ್ಪ, ಮಂಡೇಯಂಡ ಪಳಂಗಪ್ಪ, ಪ್ರಮುಖರಾದ ಕೊಂಗೆಪ್ಪಂಡ ಶಶಿ ಬೀಮಯ್ಯ, ಪಡಞರಂಡ ಪ್ರಭು ಕುಮಾರ್, ಕೊಪ್ಪಡ ಪಳಂಗಪ್ಪ, ಪಾನಿಕುಟ್ಟೀರ ಕುಟ್ಟಪ್ಪ, ಕೊಕ್ಕೇರ ಜನನಾಥ್, ತಂಬಂಡ ಮಂಜುನಾಥ್, ಕೊಂಗೆಪ್ಪಂಡ ರವಿ, ಚಳಿಯಂಡ ಕಮಲ, ಪಂದಿಕಂಡ ಈಶ್ವರ್ ಚಳಿಯಂಡ ಅಚ್ಚಯ್ಯ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ