ಕುಶಾಲನಗರ, ವಿರಾಜಪೇಟೆ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡಣೆ

KannadaprabhaNewsNetwork |  
Published : Sep 11, 2025, 12:04 AM IST
ಪುನರ್  | Kannada Prabha

ಸಾರಾಂಶ

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪೂರ್ಣ ಕಂದಾಯ ಗ್ರಾಮ ಹಾಗೂ ಮಾದಾಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಂಡು ಕುಶಾಲನಗರ ಪುರಸಭೆಯನ್ನಾಗಿ ಮೇಲ್ದಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪೂರ್ಣ ಕಂದಾಯ ಗ್ರಾಮ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಮಾದಾಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಂಡು ಕುಶಾಲನಗರ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿದೆ.ಈ ಸಂಬಂಧ ಸರ್ಕಾರದ ಆದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿ ಅನುಸರಿಸಿ ಯೋಜನಾ ನಿರ್ದೇಶಕರು. ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಜಿಲ್ಲೆ ಮಡಿಕೇರಿ, ಕುಶಾಲನಗರ ಪುರಸಭೆಯ ವಾರ್ಡ್ ಗಳನ್ನು 2011 ರ ಜನಗಣತಿ ಆಧಾರದ ಮೇರೆಗೆ ಪುನರ್ ವಿಂಗಡಣೆ ಮಾಡಲು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.ಆದ್ದರಿಂದ ಕರ್ನಾಟಕ ಪೌರಸಭೆಗೆ ಅಧಿನಿಯಮ -1964 ರ ಪ್ರಕರಣ 13 ರ ಮೇರೆಗೆ ಕುಶಾಲಗರ ಪುರಸಭೆಯ ವಾರ್ಡ್‌ಗಳನ್ನು 2011 ರ ಜನಗಣತಿಯನ್ನು ಆಧರಿಸಿ ಪುನರ್ ವಿಂಗಡಣೆ ಮಾಡಿ ವಾರ್ಡಿನ ಹೆಸರು ಹಾಗೂ ವಾರ್ಡಿನ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವರ ಮತ್ತು ಚೆಕ್ಕುಬಂದಿಗಳನ್ನು ವಿವರವಾಗಿ ನಮೂದಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಯನ್ನು/ ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತವಾಗಿ ಕಾರಣ ಸಹಿತವಾಗಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಜಿಲ್ಲಾಧಿಕಾರಿ. ಕೊಡಗು ಜಿಲ್ಲೆ ಮಡಿಕೇರಿಗೆ ಸಲ್ಲಿಸಬೇಕು ಎಂದು ಹಾಗೂ ಆಕ್ಷೇಪಣೆಯನ್ನು/ ಸಲಹೆಗಳನ್ನು ಅವಧಿಯ ತರುವಾರು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ವಾರ್ಡ್ಗಳ ವಿವರ:

ನಗರ ಸ್ಥಳೀಯ ಸಂಸ್ಥೆಯ ಹೆಸರು- ಪುರಸಭೆ, ಕುಶಾಲನಗರ, ವಾರ್ಡ್ ಹೆಸರು ಮತ್ತು ಸಂಖ್ಯೆ:

ವಾರ್ಡ್ ಸಂಖ್ಯೆ 1 : ರಸೂಲ್ ಬಡಾವಣೆ, ವಿವೇಕಾನಂದ ಬಡಾವಣೆ, ತ್ಯಾಗರಾಜ ರಸ್ತೆ ಬಲಬದಿ, ಕೆಂಪಮ್ಮ ಬಡಾವಣೆ, ಆದಿಶಂಕರಾಚಾರ್ಯ ಬಡಾವಣೆ ಭಾಗಶಃ, ವಾರ್ಡ್ ಸಂಖ್ಯೆ 2 :ಕಾಳಮ್ಮ ಕಾಲೋನಿ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ, ನೇತಾಜಿ ಬಡಾವಣೆ ಭಾಗಶಃ, ವಾರ್ಡ್ ಸಂಖ್ಯೆ : 3-ಸಿಂಗಾರಮ್ಮ ಬಡಾವಣೆ, ಬದ್ರುನ್ನಿಸಾ ಬಡಾವಣೆ, ಶೇಲಜಾ ಬಡಾವಣೆ, ಬಿ.ಎಂ.ರಸ್ತೆ, ನಾಗಪ್ಪಶೆಟ್ಟಿ ಬಡಾವಣೆ, ಬ್ರೆಡ್ಲಿ ಬಡಾವಣೆ, ನೇತಾಜಿ ಬಡಾವಣೆ ಭಾಗಶಃ, ಕೆ.ಪಿ.ಟಿ.ಸಿ.ಎಲ್ ವಸತಿ ಗೃಹ, ಚಿಕ್ಕಣ್ಣ ಬಡಾವಣೆ, ಯೋಗೇಶ್ ಬಡಾವಣೆ, ಆದರ್ಶ ದ್ರಾವಿಡ ಕಾಲೋನಿ ಬಾಗಶಃ,

ವಾರ್ಡ್ ಸಂಖ್ಯೆ 4: ದಂಡಿನಪೇಟೆ, ಹವಾಬಿ ಬಡಾವಣೆ, ಶಾಂತಿ ಮಾರ್ಗ, ಬಿ.ಎಂ ರಸ್ತೆ ಎಡಬದಿ, ವಾರ್ಡ್ ಸಂಖ್ಯೆ 5 ಬಾಪೂಜಿ ಬಡಾವಣೆ, ಟೌನ್ ಕಾಲೋನಿ, ರಥಬೀದಿ ಬಲ ಪಾರ್ಶ್ವ, ಬಿ.ಎಂ ರಸ್ತೆ, ವಾರ್ಡ್ ಸಂಖ್ಯೆ : 6 ಫಾತೀಮಾ ಕಾನ್ವೆಂಟ್ ಹಿಂಭಾಗ, ದಂಡಿನಪೇಟೆ ಬಾಗಶಃ, ಆಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವಿ.ಪಿ. ಪುಟ್ಟುಶೆಟ್ಟಿ ಬಡಾವಣೆ, ರಫೀಕ್ ಬಡಾವಣೆ, ಬಿ.ಎಂ ರಸ್ತೆಯ ಎಡಭಾಗ, ಕಬ್ರಸ್ಥಾನ ರಸ್ತೆ ಎಡಭಾಗ. ವಾರ್ಡ್ ಸಂಖ್ಯೆ 7 ಬಿ.ಎಂ ರಸ್ತೆ ಎಡಭಾಗ. ಇಂದಿರಾ ಬಡಾವಣೆ, ಕಬ್ರಸ್ಥಾನ ರಸ್ತೆ ಬಲಭಾಗ, ಬಿದ್ದಪ್ಪ ಬಡಾವಣೆ, ಫರ್ನಾಂಡೀಸ್, ಬಡಾವಣೆ, ವಾರ್ಡ್ ಸಂಖ್ಯೆ 8 ಅಂಬೇಡ್ಕರ್ ಬಡಾವಣೆ, ನಿಜಾಮುದ್ದೀನ್ ಬಡಾವಣೆ, ನಿಂಗೇಗೌಡ ಬಡಾವಣೆ, ಪಂಪ್ ಹೌಸ್ ರಸ್ತೆ, ಬಿ ಎಂ ರಸ್ತೆ ಎಡಭಾಗ, ಭವಾನಿ ಬಡಾವಣೆ, ಯೋಗನಂದ ಬಡಾವಣೆ, ಎಸ್ ಎಲ್ ಸನ್ ಪ್ರಾಪರ್ಟಿ, ನಂಜಪ್ಪ ಬಡಾವಣೆ, ಕರ್ನಾಟಕ ಅರಣ್ಯ ತರಬೇತಿ ಕೇಂದ್ರ. ವಾರ್ಡ್ ಸಂಖ್ಯೆ 9 ಬಿ.ಎಂ ರಸ್ತೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಅದರ ಮುಂಭಾಗದ ಪ್ರದೇಶ, ಅಥಿತಿ ರೆಸ್ಟೋರೆಂಟ್ ಹೋಟಲ್‌ನ ಸುತ್ತಮುತ್ತಲಿನ ಪ್ರದೇಶ, ಗ್ರೀನ್ ಹೋಟೆಲ್, ಎಸ್.ಎಲ್.ಎನ್.ಪ್ರೋಪರ್ಟಿಸ್ ಮಾದಾಪಟ್ಟಣ, ಬಾಗಶಃ, ಸ್ವಂದ ಫಾರ್ಮ್. ವಾರ್ಡ್ ಸಂಖ್ಯೆ 10 ಗುಂಡೂರಾವ್ ಬಡಾವಣೆ, ಆರ್. ಕೆ. ಬಡಾವಣೆ ಭಾಗಶಃ. ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆಟ್ರಕ್ ಬಾಲಕರ ವಿದ್ಯಾರ್ಥಿ ನಿಲಯ, ಗಂಧದ ಕೋಟೆ, ವಿ.ಎಲ್.ಗೌರೀಶ್ ರವರ ತೋಟ, ಪರಿಪಾಳ ಜವರಪ್ಪ ಮಲ್ಲೇಶ. ವೆಂಕಟೇಶ ಬಡಾವಣೆ, ತಾವರ ಕೆರೆ, ಪೂನಂ ಲೇಜೌಟ್, ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜು, ಕಾಶಿವಿಶ್ವನಾಥ ದೇವಾಲಯ, ಮಾದಾಪಟ್ಟದಿಂದ ಗೊಂದಿಬಸವನಹಳ್ಳಿಗೆ ಹೋಗುವ ಬಲಭಾಗದ ಪ್ರದೇಶ, ವಾರ್ಡ್ ಸಂಖ್ಯೆ 11 ಬೈಚನಹಳ್ಳಿ, ಎಂ.ಪಿ.ಎಂ.ಸಿ, ಕಾವೇರಿ ಬಡಾವಣೆ, ಐ.ಬಿ.ರಸ್ತೆ ಎಡಭಾಗ, ಬಿ.ಎಂ..ರಸ್ತೆ ಬಲಭಾಗ, ಅರಣ್ಯ ಇಲಾಖೆ, ಪುರಸಭೆ ಕಾರ್ಯಾಲಯ, ಶ್ರೀಮಹಾಗಣಪತಿ ದೇವಸ್ಥಾನ.ವಾರ್ಡ್ ಸಂಖ್ಯೆ 12 ರಲ್ಲಿ ಐ.ಬಿ.ರಸ್ತೆ, ಬೈಪಾಸ್ ರಸ್ತೆ ಎಡ ಮತ್ತು ಬಲ, ರಾಧಕೃಷ್ಣ ಬಡಾವಣೆ, ಸಾರ್ವಜನಿಕ ಆಸ್ಪತ್ರೆ, ತಹಸೀಲ್ದಾರ್ ಅವರ ಕಚೇರಿ ಮತ್ತು ಸೋಮೇಶ್ವರ ದೇವಸ್ಥಾನ ರಸ್ತೆಯ ಬಲಭಾಗ.ವಾರ್ಡ್ ಸಂಖ್ಯೆ 13 ರಲ್ಲಿ ಅವದಾನಿ ಬಡಾವಣೆ, ಬಸಪ್ಪ ಬಡಾವಣೆ, ಶ್ರೀ ಸಾಯಿ ಬಡಾವಣೆ, ಸೋಮವಾರಪೇಟೆ ರಸ್ತೆ ಬಲ ಬದಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವಸತಿ ಗೃಹ, ಸೋಮೇಶ್ವರ ಬಡಾವಣೆ ಮತ್ತು ಆದಿಶಂಕರಾಚಾರ್ಯ ಬಡಾವಣೆ ಭಾಗಶಃ.ವಾರ್ಡ್ ಸಂಖ್ಯೆ 14 ರಲ್ಲಿ ವೆಂಕಟೇಶ್ವರ ಬಡಾವಣೆ, ಮಾರುತಿ ಬಡಾವಣೆ, ಓಂಕಾರ ಬಡಾವಣೆ, ಕೈಗಾರಿಕ ಬಡಾವಣೆ, ಸೋಮೇಶ್ವರ ಕೆರೆ, ನಿರ್ಮಿತಿ ಕೇಂದ್ರ, ಉಪ ನೋಂದಣಾಧಿಕರಿ ಕಚೇರಿ ಹಿಂಭಾಗ ಪ್ರದೇಶ, ಗೌಡ ಸಮಾಜ, ಅಂಗನವಾಡಿ, ಅಂಬೇಡ್ಕರ್ ಬಡಾವಣೆ ಮತ್ತು ಜನತಾ ಕಾಲೋನಿ ರಸ್ತೆಯ ಬಲಭಾಗ. ವಾರ್ಡ್ ಸಂಖ್ಯೆ 15 ರಲ್ಲಿ ಕುವೆಂಪು ಬಡಾವಣೆ, ಶ್ರೀನಿಧಿ ಬಡಾವಣೆ, ತಪೋವನ, ತಾಲೂಕು ಪಂಚಾಯಿತಿ ಹಿಂಭಾಗ, ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯ ಹಿಂಭಾಗ, ನಂದಿ ಬಡಾವಣೆ, ಕಾವೇರಿ ಬಡಾವಣೆ ಮತ್ತು ಕೆ.ಪಿ.ಚಂದ್ರಕಲಾ ಬಡಾವಣೆ. ವಾರ್ಡ್ ಸಂಖ್ಯೆ 16 ರಲ್ಲಿ ಬಸಪ್ಪ ಬಡಾವಣೆ ಮತ್ತು ಶಕ್ತಿ ಬಡಾವಣೆ. ವಾರ್ಡ್, 17 ರಲ್ಲಿ ಜನತಾ ಕಾಲೋನಿ 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್, 6ನೇ ಕ್ರಾಸ್, 7ನೇ ಕ್ರಾಸ್ ಮತ್ತು ಮಾರುತಿ ಬಡಾವಣೆ. ವಾರ್ಡ್ ಸಂಖ್ಯೆ 18 ರಲ್ಲಿ ಚಾಮುಂಡೇಶ್ವರಿ ಬಡಾವಣೆ, ಚೆನ್ನಕೇಶವ ಪ್ರೆಸ್ ಹಿಂಭಾಗದ ಮನೆಗಳು, ಆಫಿಸರ್ಸ್ ಕಾಲೋನಿ, ಮಾಲಿನ್ಯ ನೀರಿನ ಶುದ್ದೀಕರಣ ಘಟಕ, ಅಂಬೇಡಕರ್ ಭವನ, ವಾಲ್ಮೀಕಿ ಭವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ವಸತಿಗಳು, ಶಿವಾನಂದ ರವರ ಮನೆಯ ಸುತ್ತಮುತ್ತ ಪ್ರದೇಶ. ವಾರ್ಡ್ ಸಂಖ್ಯೆ 19 ರಲ್ಲಿ ಐ.ಬಿ, ಹಳೆ ಹೌಸಿಂಗ್ ಬೋರ್ಡ್, ಸಿ.ಪಿ.ಸುಕನ್ಯ ಲೇಔಟ್/ ಚೂಡೇಗೌಡ ಬಡಾವಣೆ, ಡಾ.ಶಿವರಾಮ ಕಾರಂತ ಬಡಾವಣೆ, ಥೋಮಸ್ ಬಡಾವಣೆ, ಸಿದ್ದಯ್ಯ ಪುರಾಣಿಕ ಬಡಾವಣೆ, ಕೋಣಮಾರಮ್ಮ ದೇವಸ್ಥಾನ ಹಿಂಭಾಗ. ವಾರ್ಡ್ ಸಂಖ್ಯೆ 20 ರಲ್ಲಿ ನೆಹರೂ ಬಡಾವಣೆ, ಎಚ್.ಆರ್.ಪಿ.ಕಾಲೋನಿ, ಕರಿಯಪ್ಪ ಬಡಾವಣೆ ಮತ್ತು ವಿನಾಯಕ ಬಡಾವಣೆ. ವಾರ್ಡ್ ಸಂಖ್ಯೆ 21 ರಲ್ಲಿ ಕರ್ನಾಟಕ ಗೃಹ ಮಂಡಳಿ, ಮಂಜುನಾಥ ಬಡಾವಣೆ, ಚೈತ್ರ ಬಡಾವಣೆ, ಆರ್‌ಆರ್‌ಆರ್ ಬಡಾವಣೆ, ಆರ್ ಸಿ ಬಡಾವಣೆ ಭಾಗಶಃ, ಮಂಜೇಗೌಡ ಬಡಾವಣೆ, ನಂಜುಂಡೇಶ್ವರ ಬಡಾವಣೆ, ಸ್ವಾಮಿ ಬಡಾವಣೆ, ಕಾರು ಚಾಲಕ ಬಡಾವಣೆ, ಗೊಂದಿ ಬಸವನಹಳ್ಳಿ ಭಾಗಶಃ, ಸಿದ್ದಯ್ಯ ಬಡಾವಣೆ, ಪಿ.ಪಿ.ಸತ್ಯನಾರಾಯಣ ಬಡಾವಣೆ.ವಾರ್ಡ್ ಸಂಖ್ಯೆ 22 ರಲ್ಲಿ ನಾಗೇಗೌಡ ಬಡಾವಣೆ, ಕಾಲಬೈರವೇಶ್ವರ ಬಡಾವಣೆ, ಅಣ್ಣೇಗೌಡ ಬಡಾವಣೆ, ಕರ್ನಾಟಕ ರಾಜ್ಯ ಅಗ್ನಿಶಾಮಕದಳ ಹಿಂಭಾಗ ಬರುವ ಮನೆಗಳು, ಮುಕಾಂಬಿಕಾ ವಿದ್ಯಾಸಂಸ್ಥೆ, ಎಸ್‌ಎಲ್‌ಎನ್ ಪ್ರಾಪರ್ಟಿಸ್, ಶ್ರೀ ಬಲಮುರಿ ಗಣಪತಿ ದೇವಸ್ಥಾನ ಸುತ್ತಮುತ್ತಲು ಪ್ರದೇಶ ಮತ್ತು ಬಸವೇಶ್ವರ ಬಡಾವಣೆ. ವಾರ್ಡ್ ಸಂಖ್ಯೆ 23 ರಲ್ಲಿ ಗೊಂದಿಬಸವನಹಳ್ಳಿ ಭಾಗಶಃ.ಮೇಲ್ದರ್ಜೆಗೇರಿಸಿ ಅಧಿಸೂಚನೆ:

ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ಕುಕ್ಲೂರು ಗ್ರಾಮ ಭಾಗಶಃ ಮತ್ತು ಮಗ್ಗುಲ ಗ್ರಾಮ ಭಾಗಶಃ, ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಅಂಬಟ್ಟಿ ಗ್ರಾಮ ಭಾಗಶಃ, ಆರ್ಜಿ ಗ್ರಾಮ ಪಂಚಾಯಿತಿಯ ಆರ್ಜಿ ಗ್ರಾಮ ಭಾಗಶಃ, ಬೇಟೋಳಿ ಗ್ರಾ.ಪಂ. ಬೇಟೋಳಿ ಗ್ರಾಮ ಭಾಗಶಃ, ಕೆದಮುಳ್ಳೂರು ಗ್ರಾ.ಪಂ.ಯ ಕೊಟ್ಟೋಳಿ ಗ್ರಾಮ ಭಾಗಶಃ ಮತ್ತು ಕದನೂರು ಗ್ರಾ.ಪಂ. ಕದನೂರು ಗ್ರಾಮ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಂಡು ವಿರಾಜಪೇಟೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ಆದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ ಮುಖ್ಯಾಧಿಕಾರಿ, ಪುರಸಭೆ, ವಿರಾಜಪೇಟೆ ಇವರು ವಿರಾಜಪೇಟೆ ಪುರಸಭೆಯ ವಾರ್ಡ್ಗಳನ್ನು 2011 ರ ಜನಗಣತಿಯ ಆಧಾರದ ಮೇರೆಗೆ ಪುನರ್ ವಿಂಗಡಣೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಆದ್ದರಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ 13 ರ ಮೇರೆಗೆ ವಿರಾಜಪೇಟೆ ಪುರಸಭೆಯ ವಾರ್ಡ್ಗಳನ್ನು 2011 ರ ಜನಗಣತಿಯನ್ನು ಆಧಾರಿಸಿ ಪುನರ್ ವಿಂಗಡಣೆ ಮಾಡಿ, ವಾರ್ಡಿನ ಹೆಸರು ಹಾಗೂ ವಾರ್ಡಿನ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವರ ಮತ್ತು ಚೆಕ್ಕುಬಂದಿಗಳನ್ನು ವಿವರವಾಗಿ ನಮೂದಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ/ ಸಲಹೆಗಳನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗೆ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಸಲ್ಲಿಸಬೇಕು ಎಂದು ಹಾಗೂ ಆಕ್ಷೇಪಣೆಯನ್ನು ಸಲಹೆಗಳನ್ನು ಈ ಅವಧಿಯ ತರುವಾಯ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ವಿರಾಜಪೇಟೆ ಪುರಸಭೆ ವ್ಯಾಪ್ತಿಯ ವಾರ್ಡ್ಗಳ ವಿವರ

ವಿರಾಜಪೇಟೆ 1 (ಚರ್ಚ್ ರಸ್ತೆ), ವಿರಾಜಪೇಟೆ-2(ಅರಸು ನಗರ), ವಿರಾಜಪೇಟೆ 3(ಮಲೆತಿರಿಕೆ ಬೆಟ್ಟ), ವಿರಾಜಪೇಟೆ-4(ತೆಲುಗರ ಬೀದಿ), ವಿರಾಜಪೇಟೆ 5(ದಖ್ಖನಿ ಮೊಹಲ್ಲಾ), ವಿರಾಜಪೇಟೆ-6(ಜೈನರ ಬೀದಿ), ವಿರಾಜಪೇಟೆ-7(ಮೊಗರಗಲ್ಲಿ), ವಿರಾಜಪೇಟೆ-8 (ನೆಹರುನಗರ-1), ವಿರಾಜಪೇಟೆ-9(ನೆಹರು ನಗರ-2), ವಿರಾಜಪೇಟೆ-10(ವಿದ್ಯಾನಗರ-01), ವಿರಾಜಪೇಟೆ-11(ವಿದ್ಯಾನಗರ-02), ವಿರಾಜಪೇಟೆ-12(ನಿಸರ್ಗ ಲೇಔಟ್), ವಿರಾಜಪೇಟೆ-13(ಕಲ್ಲುಬಾಣೆ), ವಿರಾಜಪೇಟೆ-14(ಮಂಜುನಾಥ ನಗರ), ವಿರಾಜಪೇಟೆ-15(ವಿಜಯನಗರ), ವಿರಾಜಪೇಟೆ-16(ಸುಣ್ಣದ ಬೀದಿ), ವಿರಾಜಪೇಟೆ-17(ಶಾಂತಿನಗರ), ವಿರಾಜಪೇಟೆ-18(ಮೀನುಪೇಟೆ), ವಿರಾಜಪೇಟೆ-19(ಗೌರಿಕೆರೆ), ವಿರಾಜಪೇಟೆ-20(ಗಾಂಧಿನಗರ), ವಿರಾಜಪೇಟೆ-21(ಚಿಕ್ಕಪೇಟೆ), ವಿರಾಜಪೇಟೆ-23(ಶಿವಕೇರಿ),

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!