ಪರಶಿವಮೂರ್ತಿ ಮಾಟಲದಿನ್ನಿ
ಸರಳ ನಿಖಾ, ವರದಕ್ಷಿಣೆ ರಹಿತ ವಿವಾಹ ಹಾಗೂ ಅನಗತ್ಯ ಆಚರಣೆಗಳಿಗೆ ವಿದಾಯ ಹೇಳುವ ಮೂಲಕ ಸಮಾಜದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯಲು ಮುಂದಾಗಿದೆ.
ಪಟ್ಟಣದ ಶಾದಿ ಮಹಲ್‌ನಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮಾಜದ ವಿಶೇಷ ಸಭೆಯಲ್ಲಿ ಮುಖಂಡರು, ಧರ್ಮಗುರುಗಳು, ಹಾಫಿಜ್‌ಗಳು, ಹಿರಿಯರು ಹಾಗೂ ಯುವಕರು ಭಾಗವಹಿಸಿ ಸರಳ ವಿವಾಹ ಪದ್ಧತಿಗೆ ಸಂಪೂರ್ಣ ಬೆಂಬಲ ಸೂಚಿಸಿದರು.ಸಭೆಯಲ್ಲಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ್ ಮಾತನಾಡಿ, ಮದುವೆಯ ಹೆಸರಿನಲ್ಲಿ ನಡೆಯುತ್ತಿರುವ ದುಂದುವೆಚ್ಚದಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಾಲದ ಸುಳಿಗೆ ಸಿಲುಕುವಂತಾಗಿದೆ. ಇಸ್ಲಾಂ ಧರ್ಮ ಸರಳತೆ ಮತ್ತು ಮಾನವೀಯತೆಯನ್ನು ಬೋಧಿಸುತ್ತದೆ. ಹೀಗಿರುವಾಗ ಮದುವೆಗಳನ್ನು ಆಡಂಬರದ ಪ್ರದರ್ಶನವನ್ನಾಗಿ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ಸರಳ ನಿಖಾಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಮುಸ್ತಫಾ ಕಮಲ್, ಅಹ್ಮದ್ ಹುಸೇನ್ ಆದ್ವಾನಿ, ಮೈನುದ್ದೀನ್ ಮುಲ್ಲಾ ಹಾಗೂ ಸಮಾಜದ ಮುಖಂಡರು, ಧರ್ಮಗುರುಗಳು, ಹಾಫಿಜ್‌ಗಳು ಉಪಸ್ಥಿತರಿದ್ದರು.ಆಡಂಬರವಲ್ಲ, ಆದರ್ಶವಾಗಲಿ ವಿವಾಹ: ಮದುವೆ ಎಂಬುದು ಎರಡು ಕುಟುಂಬಗಳ ಬೆಸುಗೆ ಮತ್ತು ಹೊಸ ಬದುಕಿನ ಆರಂಭವೇ ಹೊರತು, ಆರ್ಥಿಕ ಸಾಮರ್ಥ್ಯ ಪ್ರದರ್ಶಿಸುವ ವೇದಿಕೆಯಾಗಬಾರದು. ಸರಳ ವಿವಾಹ ಪದ್ಧತಿ ಜಾರಿಯಾದರೆ ಬಡ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುವ ಜತೆಗೆ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಬೆಳೆಯಲು ಸಾಧ್ಯ ಎಂಬ ಆಶಯ ಸಭೆಯಲ್ಲಿ ವ್ಯಕ್ತವಾಯಿತು.