ಕುಷ್ಟಗಿ, ನರಗುಂದ, ಘಟಪ್ರಭಾ ಹೊಸ ರೈಲ್ವೆ ಮಾರ್ಗ ಆರಂಭಿಸಿ

KannadaprabhaNewsNetwork |  
Published : Mar 07, 2025, 11:48 PM IST
ಪೋಟೊ7ಕೆಎಸಟಿ3: ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ನಿಯೋಗವೂ ಗ್ರಾಹಕ ವ್ಯವಹಾರಗಳು ಅಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಕುಷ್ಟಗಿ- ನರಗುಂದ- ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಬೇಡಿಕೆಯ ಕುರಿತು ಮನವಿಯನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಕುಷ್ಟಗಿ-ನರಗುಂದ-ಘಟಪ್ರಭಾ ರೈಲ್ವೆ ಹೋರಾಟ ಸಮಿತಿ ಈ ಹೊಸ ಮಾರ್ಗದ ಬೇಡಿಕೆಗೆ ಹೋರಾಟ ಆರಂಭಿಸಿದೆ. ಈ ಮಾರ್ಗ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಸೇತುವೆ ಆಗಲಿದೆ. ಕೃಷಿ, ತೋಟಗಾರಿಕೆ ಉತ್ಪನ್ನ ವಾಣಿಜ್ಯ ವಹಿವಾಟು, ಸರಕು ಸಾಗಾಣಿಕೆ ಜನರಿಗೆ ಆದಾಯ ದ್ವಿಗುಣ ಹಾಗೂ ಕಡಿಮೆ ವೆಚ್ಚದ ಪ್ರಯಾಣ ಸೇರಿದಂತೆ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ಅನುಕೂಲವಾಗಲಿದೆ.

ಕುಷ್ಟಗಿ:

ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ನಿಯೋಗವೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಬೇಡಿಕೆ ಕುರಿತು ಮನವಿ ಸಲ್ಲಿಸಿದೆ.ಈ ವೇಳೆ ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್, ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಕುಷ್ಟಗಿ-ನರಗುಂದ-ಘಟಪ್ರಭಾ ರೈಲ್ವೆ ಹೋರಾಟ ಸಮಿತಿ ಈ ಹೊಸ ಮಾರ್ಗದ ಬೇಡಿಕೆಗೆ ಹೋರಾಟ ಆರಂಭಿಸಿದೆ. ಈ ಮಾರ್ಗ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಸೇತುವೆ ಆಗಲಿದೆ. ಕೃಷಿ, ತೋಟಗಾರಿಕೆ ಉತ್ಪನ್ನ ವಾಣಿಜ್ಯ ವಹಿವಾಟು, ಸರಕು ಸಾಗಾಣಿಕೆ ಜನರಿಗೆ ಆದಾಯ ದ್ವಿಗುಣ ಹಾಗೂ ಕಡಿಮೆ ವೆಚ್ಚದ ಪ್ರಯಾಣ ಸೇರಿದಂತೆ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ಅನುಕೂಲಗಳ ಬಗ್ಗೆ ಹೇಳಿದರು. ಇದೇ ವೇಳೆ ಗದಗ-ವಾಡಿ, ಅಲಮಟ್ಟಿ ಚಿತ್ರದುರ್ಗ, ಗದಗ-ಕೃಷ್ಣಾವರಂ, ದರೋಜಿ-ಬಾಗಲಕೋಟೆ ರೈಲ್ವೆ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದರು.

ಮನವಿ ಸ್ವೀಕರಿಸಿದ ಸಚಿವ ಪ್ರಹ್ಲಾದ ಜೋಶಿ, ನಿಮ್ಮ ಬೇಡಿಕೆ ನ್ಯಾಯಸಮ್ಮತವಾಗಿದ್ದು ಈ ಕುರಿತು ರೈಲ್ವೆ ಸಚಿವರೊಂದಿಗೆ ಚರ್ಚಿಸಿ 2026-2027ನೇ ಸಾಲಿನ ಬಜೆಟ್‌ನಲ್ಲಿ ಸೇರಿಸಲಾಗುವುದು. ಸಾಧ್ಯವಾದಲ್ಲಿ ಹೊಸ ರೈಲ್ವೆ ಮಾರ್ಗ ಸೇರಿಸುವ ಅವಕಾಶ ಇದ್ದರೆ ಅದು ಕೂಡ ಪ್ರಯತ್ನಿಸಲಾಗುವುದು ಎಂದರು. ಈ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಮುಖ್ಯಾಂಶಗಳನ್ನು ಒಳಗೊಂಡ ಮನವಿಯನ್ನು ಇನ್ನೊಮ್ಮೆ ಸಲ್ಲಿಸಲು ರೈಲ್ವೆ ಹೋರಾಟ ಸಮಿತಿಗೆ ಸೂಚಿಸಿದರು.

ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಬಸವರಾಜ ಹಳ್ಳೂರು, ಮಲ್ಲಣ್ಣ ಪಲ್ಲೇದ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳಲಿಮಠ, ನಜೀರಸಾಬ್ ಮೂಲಿಮನಿ, ಬಾಬು ಘೋರ್ಪಡೆ, ಚಂದ್ರಕಾಂತ ವಡಿಗೇರಿ, ಬಸವರಾಜ್ ಗಾಣಗೇರ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ