ಕುತ್‌ನಾಡು ಬೆರಳಿನಾಡು ಹಾಕಿ: ಇಂದು ಕ್ವಾರ್ಟರ್‌ ಫೈನಲ್‌

KannadaprabhaNewsNetwork |  
Published : Nov 29, 2024, 01:00 AM IST
ಎಎಸ್ಸಿ ಅಮ್ಮತಿ ಮತ್ತು ಬ್ಲೆಜ್ ಮೂರ್ನಾಡು ನಡುವಿನ ಪಂದ್ಯ  | Kannada Prabha

ಸಾರಾಂಶ

ಕುತ್ ನಾಡು ಬೆರಳಿನಾಡು ಪ್ರೌಢಶಾಲೆಯ ವಜ್ರಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಲೀಗ್ ಹಂತದ ಹಾಕಿ ಪಂದ್ಯವಾಳಿಯ ಕ್ವಾರ್ಟರ್ರ್‌ ಫೈನಲ್ ಪಂದ್ಯಗಳು ಶುಕ್ರವಾರ ನೆರವೇರಲಿವೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕುತ್ ನಾಡು ಬೆರಳಿನಾಡು ಪ್ರೌಢಶಾಲೆಯ ವಜ್ರಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಲೀಗ್ ಹಂತದ ಹಾಕಿ ಪಂದ್ಯವಾಳಿಯ ಮೂರನೆಯ ದಿನದ ಪ್ರಥಮ ಪಂದ್ಯದಲ್ಲಿ ಮಹದೇವರ ಸ್ಪೋರ್ಟ್ಸ್ ಕ್ಲಬ್‌ ತಂಡ ಶಿವಾಜಿ ನಾಪೋಕ್ಲ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು.ಮಹದೇವ ತಂಡದ ಅತಿಥಿ ಆಟಗಾರ ಮುಹಮ್ಮದ್ ನಹಿಮ್ 49 ನೇ ನಿಮಿಷ ಮತ್ತು ಅಕಿಲ್ ಅಯ್ಯಪ್ಪ 59ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಗೆಲವು ಪ್ರಾಪ್ತಿಯಾಯಿತು.

ದ್ವಿತೀಯ ಪಂದ್ಯದಲ್ಲಿ ಬೂಟ್ಟಿಯತ್ ನಾಡು ಕುಂದ ತಂಡವು ಅತಿಥಿ ಆಟಗಾರ ರೋಷನ್‌ 43ನೇ ನಿಮಿಷ ಹಾಗು ಸೋಮಣ್ಣ 44ನೇ ನಿಮಿಷ ಮತ್ತು 59ನೇ ನಿಮಿಷದಲ್ಲಿ ಅನೀಲ್ ಬಾರಿಸಿದ ಗೋಲುಗಳ ನೆರವಿನಿಂದ ಎಂಆರ್‌ಎಫ್‌ ತಂಡವನ್ನು 3-2 ಅಂತರದಿಂದ ಪರಾಭವಗೊಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಮೂರ್ನಾಡು ತಂಡದ ಪರವಾಗಿ ಶಾಬಾಜ್ 54 ನೇ ನಿಮಿಷ ಹಾಗು ವಿಘ್ನೇಶ್ 58 ನೇ ನಿಮಿಷದಲ್ಲಿ ಗೋಲು ದಾಖಲಿಸಿದರು

ಮೂರನೇ ಪಂದ್ಯದಲ್ಲಿ ಕೋಣನಕಟ್ಟೆ ತಂಡವು ಕುತ್ತ್ ನಾಡು ಸ್ಟ್ರೈಕರ್ಸ್ ತಂಡವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ತಂಡದ ಪರವಾಗಿ ಅತಿಥಿ ಆಟಗಾರ ರಂಜಿತ್ 7, 43, 55ನೇ ನಿಮಿಷದಲ್ಲಿ ಗಳಿಸಿದ ಹ್ಯಾಟ್ರಿಕ್ ಗೋಲು ಮತ್ತು ಪ್ರಫುಲ್ ಬಿದ್ದಪ್ಪ 16 ನೇ ನಿಮಿಷದಲ್ಲಿ ಗಳಿಸಿದ ಗೋಲುಗಳಿಂದ ಗೆಲವು ಲಭಿಸಿತು. ಕುತ್ತ್ ನಾಡು ಪರವಾಗಿ ಅಕಿಲ್, ಜಯಪ್ರಕಾಶ್ ಗೋಲು ಗಳಿಸಿದರು.

ದಿನದ ನಾಲ್ಕನೇ ಪಂದ್ಯದಲ್ಲಿ ಡ್ರಿಬ್ಲರ್ಸ್ ಹಂಪ್ ತಂಡದ ಪರವಾಗಿ ಸುಬ್ಬಯ್ಯ 2 ಹಾಗು 35ನೇ ನಿಮಿಷದಲ್ಲಿ ಗಳಿಸಿದ ಜೋಡಿ ಗೋಲುಗಳ ನೆರವಿನಿಂದ ಇವೈಸಿ ಬೇಗೂರು ತಂಡವನ್ನು 2-0 ಅಂತರದಿಂದ ಸೋಲಿಸಿತು.

ದಿನದ ಕೊನೆಯ ಪಂದ್ಯದಲ್ಲಿ ಬ್ಲೆಜ್ ಮೂರ್ನಾಡು ತಂಡವು ಹರ್ ಪಾಲ್ 48 ಮತ್ತು 59ನೇ ನಿಮಿಷ ದಲ್ಲಿ ಗಳಿಸಿದ ಗೋಲಿನಿಂದ ಎಎಸ್‌ಸಿ ಅಮ್ಮತ್ತಿ ತಂಡವನ್ನು 2-0 ಗೋಲು ಅಂತರದಿಂದ ಸೋಲಿಸಿತು.

ಪಂದ್ಯಾವಳಿ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ತೀರ್ಪುಗಾರರಾಗಿ ವಿನೋದ ಕುಮಾರ್, ಕುಪ್ಪಂಡ ದಿಲನ್, ಮೂಕಚಂಡ ನಾಚ್ಚಪ್ಪ, ಚೊಯಮಾಡಂಡ ಚಂಗಪ್ಪ, ಅಪ್ಪಚೆಟೋಳಂಡ ಅಯ್ಯಪ್ಪ, ಕಲ್ಮಾಡಂಡ ಸೋಮಣ್ಣ, ಕರವಂಡ ಅಪ್ಪಣ್ಣ, ಅನ್ನಾಡಿಯಂಡ ಪೊನ್ನಣ್ಣ, ಪಟ್ರಪಂಡ ಸಚಿನ್‌ ಕಾರ್ಯ ನಿರ್ವಹಿಸಿದರು

--------------

ಇಂದಿನ ಕ್ವಾರ್ಟರ್‌ ಫೈನಲ್‌ ಪಂದ್ಯಗಳುಪೂರ್ವಾಹ್ನ 10ಕ್ಕೆ ಡ್ರಿಬ್ಲರ್ಸ್ ಹಂಪ್ ಮತ್ತು ಕೆಎಸ್‌ಆರ್‌ಸಿ ವಿರಾಜಪೇಟೆ

ಪೂರ್ವಾಹ್ನ 11ಕ್ಕೆ ಮಹದೇವರ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ ಮತ್ತು ಬೊಟ್ಟಿಯತ್ ನಾಡು ಕುಂದ

ಅಪರಾಹ್ನ 12ಕ್ಕೆ ಕೊಣನಕಟ್ಟೆ ‌11 ಮತ್ತು ಕಿರುಗೂರು ಸ್ಪೋರ್ಟ್ಸ್ ಕ್ಲಬ್

ಅಪರಾಹ್ನ 1ಕ್ಕೆ ಮಲ್ಮ ಸ್ಪೋರ್ಟ್ಸ್ ಕ್ಲಬ್ ಕಕ್ಕಬ್ಬೆ ಮತ್ತು ಬ್ಲೆಜ್ ಮೂರ್ನಾಡು

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ