ಮೂಲ್ಕಿ: ತುಳುನಾಡಿನಲ್ಲಿ ನಾಗ, ಬ್ರಹ್ಮರ ಆರಾಧನೆಗೆ ಮಹತ್ವವಿದ್ದು ಸುಮಾರು 18 ಶತಮಾನಗಳ ಹಿಂದೆ ಇದ್ದಂತಹ ಸುರತ್ಕಲ್, ಎಕ್ಕಾರು ಮತ್ತು ಕುತ್ತೆತ್ತೂರು ಅನ್ನು ಒಳಗೊಂಡ ಮೂರುನಾಡು ಬ್ರಹ್ಮಸ್ಥಾನ ಇದೀಗ ಪುನರ್ ನಿರ್ಮಾಣಗೊಳ್ಳಲಿದ್ದು ಶಿಲಾನ್ಯಾಸದ ಮೂಲಕ ಹಿಂದಿನ ವೈಭವ ಮರುಕಳಿಸಲೆಂದು ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಸಭಾ ಕಾರ್ಯಕ್ರಮದ ಮೊದಲು ಮೂಡಿತ್ತಾಯ ಹಯವದನ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿತು. ಸಭಾ ಕಾರ್ಯಕ್ರಮದಲ್ಲಿ ನೂತನ ಬ್ರಹ್ಮಸ್ತಾನದ ನಿಧಿ ಸಂಚಯನಕ್ಕೆ ಚಾಲನೆ ನೀಡಲಾಯಿತು. ಹಾಗೂ ಮುಷ್ತಿ ಕಾಣಿಕೆ ಸಮರ್ಪಣೆ ನಡೆಯಿತು.
ಶ್ರೀ ಕ್ಷೇತ್ರ ಪೊನ್ನಗಿರಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಗಡಿ ಪ್ರಧಾನರು, ಮಿತ್ತೋಡಿ ಅರಸುಮನೆ ಅಶೋಕ ಪೈವ ಹೆಗ್ಡೆ ಕುತ್ತೆತ್ತೂರು ಮಾತನಾಡಿ ಎಲ್ಲರ ಸಹಕಾರದಿಂದ ಮುಂದಿನ 6 ತಿಂಗಳ ಒಳಗೆ ಸಂಪೂರ್ಣ ಜೀರ್ಣೋದ್ದಾರ ಕಾರ್ಯ ಸಂಪೂರ್ಣಗೊಳ್ಳಲಿದೆಯೆಂದು ತಿಳಿಸಿದರು.ಶ್ರೀ ಕ್ಷೇತ್ರ ಪೊನ್ನಗಿರಿಯ ತಂತ್ರಿಗಳಾದ ವಿಜಯದಾಸ ಆಚಾರ್ಯ, ಮೂಡಿತ್ತಾಯ ಹಯವದನ ಭಟ್, ಕೃಷ್ಣರಾಜ ತಂತ್ರಿ, ಕುಡುಪು, ವಾಸುದೇವ ಆಚಾರ್ಯ, ಮೂಡುಮಠ ಶಿಬರೂರು, ಉಮೇಶ್ ಶೆಟ್ಟಿ ಶಿಬರೂರು ಗುತ್ತಿನಾರ್, ಪ್ರತಾಪ್ ಶೆಟ್ಟಿ ಕಲ್ಲಂಜಬಾಳಿಕೆ, ಮನೋಹರ್ ಶೆಟ್ಟಿ ಬೊಳ್ಳರ ಗುತ್ತು, ಪುಳಿತ್ತೂರ್ ವಿಶ್ವನಾಥ್ ಭಂಡಾರಿ, ಕೃಷ್ಣಯ್ಯ, ನಾಗೇಶ್ ಶೆಟ್ಟಿ ಕಲ್ಲೋಳಿ, ಪ್ರಕಾಶ್ ಕೊಡಪ, ಕರುಣಾಕರ ಶೆಟ್ಟಿ ಆಡಿಮಾರು ಗುತ್ತು, ಆನಂದ ಶೆಟ್ಟಿ ನಾಯರ್ ಕೋಡಿ, ವಿಶ್ವನ್ನಾಥ ಪೂಜಾರಿ ಹೊಯ್ಗೆ ಮನೆ, ನಿತಿನ್ ಶೆಟ್ಟಿ, ಸುದರ್ಶನ್ ಅಮೀನ್, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಸೀತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.