ಕನ್ನಡಪ್ರಭ ವಾರ್ತೆ ವಿಜಯಪುರ
ಶಿಲ್ಪಾ ಭಸ್ಮೆ ಮಾತನಾಡಿ, ಜೀವನದ ಪರಿವರ್ತನೆಗೆ ಸಾಹಿತ್ಯ, ಜ್ಞಾನ, ಅರಿವು, ಸಂಗೀತ, ಕಲೆ ಮುಂತಾದ ಮಾನಸಿಕ ಸಾಮರ್ಥ್ಯ ಬೆಳಿಸಿಕೊಳ್ಳಬೇಕು. ಪ್ರಕೃತಿಯ ವೈಶಿಷ್ಟ್ಯಗಳನ್ನು ಅರ್ಥಪೂರ್ಣವಾಗಿ ಅರಿತು ಬೇಂದ್ರೆಯವರು ಕವನ ರಚಿಸಿದರು. ಕುವೆಂಪು ಅವರ ಸಾಹಿತ್ಯ ಮಾನವೀಯ ಮೌಲ್ಯಗಳಿಂದ ಕೂಡಿದೆ ಎಂದು ಹೇಳಿದರು.
ಸಾಹಿತಿ ರುದ್ರಮ್ಮ ಗಿಡ್ಡಪ್ಪಗೋಳ ಡಾ.ದ.ರಾ.ಬೇಂದ್ರೆ ಕುರಿತು ಉಪನ್ಯಾಸ ನೀಡಿ, ಕಾವ್ಯಕ್ಕೆ ಹೊಸ ರೂಪ ನೀಡಿದವರು ಡಾ.ದ.ರಾ.ಬೇಂದ್ರೆಯವರು. ಕುಟುಂಬದ ಅನೇಕ ಸಮಸ್ಯೆಗಳಿಂದ ಬಳಲಿದರು ಸಾಹಿತ್ಯ ಕೃಷಿಯನ್ನು ಬಿಡಲಿಲ್ಲ. ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದರು. ಇವರ ಕವನಗಳು ಬ್ರಿಟೀಷರ ಆಡಳಿತ ವಿರುದ್ಧವಾಗಿದ್ದರಿಂದ ಜೈಲುಪಾಲಾದರು. ಕೈದಿಗಳನ್ನು ಕವಿಗಳನ್ನಾಗಿ ಪರಿವರ್ತಿಸಿದರು ಎಂದರು.ಸಾಹಿತಿ ಶರಣಮ್ಮ ಹಾದಿಮನಿ ಕುವೆಂಪು ಸಾಹಿತ್ಯ ಕುರಿತು ಮಾತನಾಡಿ, ಜಗದಕವಿ, ಯುಗದಕವಿ ಕುವೆಂಪು ಸಾಹಿತ್ಯ ಮಾನವೀಯ ಮೌಲ್ಯಗಳ ಆಧಾರದ ಮೇಲೆ ರಚಿತವಾದವು. ಆಂಗ್ಲ ಭಾಷೆಯ ಹಾವಳಿಯಿದ್ದಾಗ ಕನ್ನಡ ಭಾಷೆಗೆ ಮಹತ್ವ ಸಾರಿದರು. ಕುವೆಂಪು ರಚಿಸಿದ ನಾಡಗೀತೆ ನಿತ್ಯ ಹಾಡುತ್ತೇವೆ. ರಾಮಾಯಣ ದರ್ಶನಂ ಗ್ರಂಥಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದರು. ವಿಶ್ವಮಾನವ ಕವಿ ಕನ್ನಡಕ್ಕೆ ಹೋರಾಡು ಕನ್ನಡದ ಕಂದ ಎಂದು ಅವರ ಕವನಗಳು ಗಮನಿಸಬೇಕಾಗಿದೆ. ಇಲ್ಲಿ ಯಾರು ಮುಖ್ಯರಲ್ಲ ಇಲ್ಲಿ ಯಾರು ಅಮುಖ್ಯರಲ್ಲ. ಇಂತಹ ಅಪರೂಪದ ನುಡಿಮುತ್ತುಗಳನ್ನು ಹೇಳಿದರು.
ಮುಖ್ಯ ಅತಿಥಿ ಮಲ್ಲಿಕಾರ್ಜುನ ಕೆಳಗಡೆ, ಡಯಟ್ ಕಾಲೇಜು ವಿಶ್ರಾಂತ ಉಪನ್ಯಾಸಕಿ ಮಹಿರುನ್ನೀಸಾ ಆಲಮೇಲ, ರೇಣುಕಾ ಹುಣಸಿಗಿಡದ, ಜಿ.ಎಸ್.ಬಳ್ಳೂರ ಮಾತನಾಡಿದರು. ಅಭಿಷೇಕ ಚಕ್ರವರ್ತಿ, ಬಿ.ಎಮ್.ಅಜೂರ, ಸಿದ್ದಣ್ಣ ಸಾತಲಗಾಂವ. ಎ.ಡಿ.ಮುಲ್ಲಾ, ಶ್ರೀಕಾಂತ ನಾಡಗೌಡ, ಅರ್ಜುನ ಶಿರೂರ, ಟಿ.ಆರ್.ಹಾವಿನಾಳ, ಗಂಗಮ್ಮ ರೆಡ್ಡಿ, ಪೀರಸಾಬ ವಾಲಿಕಾರ, ಶಿವಾಜಿ ಮೋರೆ ಉಪಸ್ಥಿತರಿದ್ದರು. ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಜಯಶ್ರೀ ಹಿರೇಮಠ ಸ್ವಾಗತಿಸಿದರು. ಕೆ.ಎಸ್.ಹಣಮಾಣಿ ವಂದಿಸಿದರು.