- ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕನ್ನಡ ನಾಡಗೀತೆಗೆ 100 ವರ್ಷ ಕಾರ್ಯಕ್ರಮ
.22. ನಾಡ ಗೀತೆ ಬರೆದ ಮೇರು ಕವಿ ಕುವೆಂಪು ಅವರು ತಮ್ಮ ಗ್ರಂಥಗಳಲ್ಲಿ ಮಲೆನಾಡಿನ ಪಶ್ಚಿಮ ಘಟ್ಟಗಳ ಚಿತ್ರಣವನ್ನು ಸುಂದರವಾಗಿ ದಾಖಲಿಸಿದ್ದಾರೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ದೇವೇಂದ್ರ ನಾಯಕ್ ತಿಳಿಸಿದರು.
ಶನಿವಾರ ಜೈಲ್ ರಸ್ತೆಯಲ್ಲಿರುವ ಅಗ್ನಿ ಶಾಮಕ ಠಾಣೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕನ್ನಡ ನಾಡಗೀತೆಗೆ 100 ವರ್ಷದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಮಾತೃ ಭಾಷೆ ಕನ್ನಡವನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ಕುವೆಂಪು ಅವರು ಪಕ್ಕದ ಕೊಪ್ಪ ತಾಲೂಕಿನಲ್ಲಿ ಹುಟ್ಟಿದ್ದರೂ ಎಂಬುದು ನಮಗೆ ಹೆಮ್ಮೆಯಾಗುತ್ತದೆ. ಪ್ರತಿಯೊಬ್ಬರೂ ಕುವೆಂಪು ಹಾಗೂ ಇತರ ಸಾಹಿತಿಗಳ ಬರೆದ ಗ್ರಂಥ ಓದಬೇಕು ಎಂದು ಸಲಹೆ ನೀಡಿದರು.ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಬದುಕು ಅಂದು ಮತ್ತು ಇಂದು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಕುವೆಂಪು ಬರೆದ ನಾಡಗೀತೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕ.ಸಾ.ಪ ದಿಂದ ಶಾಲೆಗಳಲ್ಲಿ ಸಾಮೂಹಿಕ ನಾಡಗೀತೆ ಸ್ಪರ್ಧೆ ಏರ್ಪಡಿಸಲಾಗುವುದು. ಕನ್ನಡ ಭಾಷೆಗಳಲ್ಲಿ ಬೇರೆ ಭಾಷೆ ಪದಗಳು ಸಹ ಸೇರಿ ಕೊಂಡಿದೆ. ಸಾದ್ಯವಾದಷ್ಟು ಕನ್ನಡದಲ್ಲೇ ಮಾತನಾಡೋಣ. ದೇಶದಲ್ಲಿ ಯೋಧರು,ವೈದ್ಯರು, ಪೊಲೀಸರು, ಅಗ್ನಿ ಶಾಮಕದಳದವರು ಹಾಗೂ ರೈತರ ಸೇವೆ ಅನನ್ಯವಾದುದು. ಅಗ್ನಿ ಶಾಮಕದಳದಲ್ಲಿ ಸಾಹಿತಿಗಳಿದ್ದಾರೆ. ಅವರನ್ನು ಕ.ಸಾ.ಪ ದಿಂದ ಪ್ರೋತ್ಸಾಹಿಸಲಾಗುವುದು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ,1924 ರಲ್ಲಿ ಕುವೆಂಪು ಅವರ ನಾಡಗೀತೆ ರಚನೆ ಮಾಡಿದ್ದರು.2004 ರಲ್ಲಿ ರಾಜ್ಯ ಸರ್ಕಾರ ಅದನ್ನು ನಾಡಗೀತೆಯಾಗಿ ಅನುಮೋದನೆ ನೀಡಿದೆ.ಅದೇ ರೀತೆ ರವೀಂದ್ರ ನಾಥ ಠ್ಯಾಗೂರ್ ಬರೆದ ಒಂದೇ ಮಾತರಂ ಗೀತೆಗೆ 150 ವರ್ಷ ತುಂಬಿದೆ ಎಂದರು.
ಅತಿಥಿಗಳಾಗಿ ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ,ಗ್ರಾಮ ಪಂಚಾಯಿತಿ ಸದಸ್ಯ ಕೆ.ಗಂಗಾಧರ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ಜೇಸಿ ನಿಯೋಜಿತ ಅಧ್ಯಕ್ಷ ಆದರ್ಶ ಬಿ ಗೌಡ ಇದ್ದರು. ಭಾನುಮತಿ ಪ್ರಾರ್ಥಿಸಿದರು. ಅಗ್ನಿ ಶಾಮಕದಳ ನವೀನ್ ಸ್ವಾಗತಿಸಿದರು.