ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಬಿರುನಾಣಿಯ ಮರೆನಾಡ್ ಕೊಡವ ಕೇಂದ್ರದಲ್ಲಿ ಆಯೋಜಿಸಿದ್ದ ಕೈಲ್ ಪೊಳ್ದ್ ಒತ್ತೋರ್ಮೆ ಕೂಟ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವ ಜನಸಂಖ್ಯೆ ಹೆಚ್ಚಳ, ಜಾಗ ಮಾರಾಟ ತಡೆಗಟ್ಟುವ, ಜಾಗ ಅತಿಯಾಗಿ ವಾಣಿಜ್ಯ ಹಾಗೂ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಸೇರಿದಂತೆ ಜನಾಂಗದ ಕೆಲವು ಆಂತರಿಕ ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸಿ ಸೂಕ್ತ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರುಮತ್ತೊರ್ವ ಮುಖ್ಯ ಅಥಿತಿ ಬೆಂಗಳೂರಿನ ಮರೆನಾಡ್ ಕೊಡವ ಸಂಘದ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ ಅವರು ಮಾತನಾಡಿ ಬಿರುನಾಣಿಯ ಮರೆನಾಡ್ ಕೊಡವ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ದಾನಿಗಳ ನೆರವಿನಿಂದ ಯೋಜನೆ ರೂಪಿಸಲು ಸಾಧ್ಯವಿದೆ. ಜನಾಂಗದಲ್ಲಿ ರಾಜಕೀಯ ವೈಷಮ್ಯ ಬಿಟ್ಟು ಜನಾಂಗದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಶೂಟಿಂಗ್ ಸ್ಪರ್ಧೆ :ಕಾರ್ಯಕ್ರಮದ ಅಂಗವಾಗಿ 12 ಬೋರ್, ಪಾಯಿಂಟ್ 22, ಏರ್ ಗನ್ ಮೂರು ವಿಭಾಗದಲ್ಲಿ ಆಯೋಜಿಸಿದ್ದ ಶೂಟಿಂಗ್ ಸ್ಪರ್ಧೆಯನ್ನು ಮುಖ್ಯ ಅಥಿತಿ ಕೈಬುಲೀರ ಹರೀಶ್ ಅಪ್ಪಯ್ಯ ಅವರು ಉದ್ಘಾಟಿಸಿದರು. ಶೂಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಪಾಯಿಂಟ್ 22 ವಿಭಾಗ : ಕರ್ತಮಾಡ ಸುಜು (ಪ್ರ), ಕಾಯಪಂಡ ಕಿರಣ್(ದ್ವಿ ), ಕಾಯಪಂಡ ಚಿರಾಗ್ (ತೃ )
ಬಿರುನಾಣಿ ಮರೆನಾಡ್ ಕೊಡವ ಕೇಂದ್ರದ ಅಧ್ಯಕ್ಷ ಕುಪ್ಪುಡಿರ ಪೊನ್ನು ಮುತ್ತಪ್ಪ, ಕಾರ್ಯಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಉಪಾಧ್ಯಕ್ಷರಾದ ಅಣ್ಣಳಮಾಡ ಲಾಲ ಅಪ್ಪಣ್ಣ,ಕರ್ತಮಾಡ ಮಿಲನ್ ಮೇದಪ್ಪ, ಕುಪ್ಪಣಮಾಡ ಬೇಬಿ ನಂಜಮ್ಮ,