ಆನೇಕೆರೆ ಗ್ರಾಪಂ ಉಪಾಧ್ಯಕ್ಷರಾಗಿ ಎಲ್.ಭವ್ಯ

KannadaprabhaNewsNetwork |  
Published : Jun 18, 2025, 12:42 AM IST
17 ಟಿವಿಕೆ 2 – ತುರುವೇಕೆರೆ ತಾಲೂಕು ಆನೇಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎಲ್.ಭವ್ಯ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರು ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು. | Kannada Prabha

ಸಾರಾಂಶ

ತಾಲೂಕಿನ ಆನೇಕೆರೆ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಬೂವನಹಳ್ಳಿ ಪಾಳ್ಯದ ಸದಸ್ಯೆ ಎಲ್.ಭವ್ಯ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಆನೇಕೆರೆ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಬೂವನಹಳ್ಳಿ ಪಾಳ್ಯದ ಸದಸ್ಯೆ ಎಲ್.ಭವ್ಯ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಭವ್ಯ ರಮೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಗ್ರೇಡ್ 2 ತಹಸೀಲ್ದಾರ್ ಸುಮತಿ ನೂತನ ಉಪಾಧ್ಯಕ್ಷರಾಗಿ ಎಲ್.ಭವ್ಯ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಎಂ.ಕೆ.ಮಂಜುಶ್ರೀ, ಸದಸ್ಯರಾದ ಅನ್ನಪೂರ್ಣ, ರತ್ನಮ್ಮ, ಜಿ.ಎಂ.ಬಹುಗುಣ, ಬಿ.ಜಿ.ಮೋಹನ್ (ಪುನಿ), ಸರೋಜಮ್ಮ, ರೇಣುಕಾ, ಜಿ.ಶಾರದಮ್ಮ, ಎ.ಎಸ್.ರಾಜಶೇಖರಯ್ಯ, ಡಿ.ಬಿ.ಶ್ರೀನಿವಾಸ ಗೌಡ, ಮಂಗಳ ಗೌರಮ್ಮ ಮತ್ತು ಟಿ.ಎಸ್.ರಾಮಕೃಷ್ಣ, ಪಿಡಿಒ ಕುಮಾರಸ್ವಾಮಿ, ಮುಖಂಡರಾದ ಬೂವನಹಳ್ಳಿ ಪಾಳ್ಯದ ಕೃಷ್ಣ, ಹುಚ್ಚಾಲಯ್ಯ, ಕುಮಾರ್ ಸೇರಿದಂತೆ ಹಲವಾರು ಮಂದಿ ನೂತನ ಉಪಾಧ್ಯಕ್ಷೆ ಎಲ್.ಭವ್ಯ ರಮೇಶ್ ರನ್ನು ಅಭಿನಂದಿಸಿದರು. 17 ಟಿವಿಕೆ 2 – ತುರುವೇಕೆರೆ ತಾಲೂಕು ಆನೇಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎಲ್.ಭವ್ಯ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರು ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ