ಗಜೇಂದ್ರಗಡದಲ್ಲಿ ಕಾರ್ಮಿಕರ ದಿನಾಚರಣೆ

KannadaprabhaNewsNetwork |  
Published : May 02, 2026, 02:30 AM IST
ಗಜೇಂದ್ರಗಡ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಮ ಸಂಸ್ಕೃತಿ ಮಾತ್ರ ಸಮಾಜವನ್ನು ಸಮಾನತೆಯಡೆಗೆ ಕರೆದುಕೊಂಡು ಹೋಗಲು ಸಾಧ್ಯ.

ಗಜೇಂದ್ರಗಡ: ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ ತಾಲೂಕು ಸಮಿತಿ ನೇತೃತ್ವದಲ್ಲಿ ಆಚರಿಸಲಾಯಿತು.

ಈ ವೇಳೆ ಗ್ರಾಮೀಣ ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಬಾಲು ರಾಠೋಡ ಮಾತನಾಡಿ, ಶ್ರಮ ಸಂಸ್ಕೃತಿಗಳ ಮಾತ್ರ ಸಮಾಜವನ್ನು ಸಮಾನತೆಯಡೆಗೆ ಕರೆದುಕೊಂಡು ಹೋಗಲು ಸಾಧ್ಯ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಅದನ್ನು ಪಡೆಯಲು ಬಸವಣ್ಣನವರ ಹಾದಿಯಲ್ಲಿ ಕ್ರಾಂತಿ ಮಾಡಬೇಕಿದೆ ಎಂದರು.ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಕಾರ್ಯದರ್ಶಿ ಎಂ.ಎಸ್. ಹಡಪದ ಮಾತನಾಡಿ, ಜಗತ್ತಿನ ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಬೇಕು. ಕಾರ್ಮಿಕ ವಿರೋಧಿ ನಾಲ್ಕು ಕೋಡ್‌ಗಳನ್ನು ರದ್ದುಪಡಿಸಲು ಹೋರಾಟ ಮಾಡಬೇಕಿದೆ ಎಂದರು.

ಸಿಐಟಿಯುನ ತಾಲೂಕು ಸಂಚಾಲಕ ಪೀರು ರಾಠೋಡ ಮಾತನಾಡಿದರು. ಅಂಗನವಾಡಿ ಸಂಘಟನೆಯ ತಾಲೂಕು ಅಧ್ಯಕ್ಷೆ ನೀಲಮ್ಮ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಚಂದ್ರು ರಾಠೋಡ ಪ್ರಸನ್ನ, ಅನಿಲ್ ಆರ್., ಆನಂದ ರಾಠೋಡ, ಮೈಬೂ ಹವಾಲ್ದಾರ್, ರೂಪಲೇಶ ಮಾಳೋತ್ತರ, ಕೆ.ಸಿ. ಗೋಡೆಕಾರ್ ಇತರರು ಇದ್ದರು. ಬಟ್ಟೆ ಅಂಗಡಿ ಕಾರ್ಮಿಕರಿಗೆ ಸನ್ಮಾನ

ಗಜೇಂದ್ರಗಡ: ಪಟ್ಟಣದ ಎಂ. ದೇವರಾಜ ಬಾಗಮಾರ ಬಟ್ಟೆ ಅಂಗಡಿಯಲ್ಲಿ ಶುಕ್ರವಾರ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಶೇಷವಾಗಿ ಕಾರ್ಮಿಕರ ದಿನವನ್ನು ಆಚರಿಸಲಾಯಿತು.ಈ ವೇಳೆ ಅಜಿತ್ ಬಾಗಮಾರ ಮಾತನಾಡಿ, ಯಾವುದೇ ಸಂಸ್ಥೆಯ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಶ್ರಮದಿಂದಲೇ ವ್ಯವಹಾರ ಬೆಳೆಯುತ್ತದೆ ಎಂದರು.ಕಾರ್ಮಿಕರ ಪರಿಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸಿ, ಅವರಿಗೆ ಹಾರ- ಪುಷ್ಪಗಳು ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವು ಕಾರ್ಮಿಕರ ಪ್ರೋತ್ಸಾಹಕ್ಕೆ ಕಾರಣವಾಗಿತ್ತು. ಕಾರ್ಮಿಕ ದಿನಾಚರಣೆ ಅಂಗವಾಗಿ ಈ ರೀತಿಯ ಸನ್ಮಾನ ಕಾರ್ಯಕ್ರಮಗಳು ಸಮಾಜದಲ್ಲಿ ಕಾರ್ಮಿಕರ ಗೌರವವನ್ನು ಹೆಚ್ಚಿಸಲು ಸಹಾಯಕವಾಗುತ್ತವೆ ಎಂದರು.ರಾಮರಾಯ, ವೀರೇಶ ಅಂಗಡಿ, ಬಾಬುಸಾಬ ಮುಧೋಳ, ಮಾಬುಸಾಬ ಚಾಮಲಾಪುರ, ರೇಣುಕ್ರಾಜ್, ಸಲೀಂ, ಶಿವು ಮದರ ಯಮನ್ನೂರ, ಮಂಜು ಗುಳೇದ, ಕಿರಣ ಕಲಾಲ, ಶರಣಪ್ಪ ಭೂನೇರಿ, ರವಿ ಕಲಾಲ, ಕೇಶವ ಇಂಜಿನಿ, ಹನುಮಂತ ಸಿಂಗ್. ಓಂ.ಜಿ. ಚೆನ್ನಮ್ಮ, ಪವಿತ್ರ, ಸಂಜನಾ, ಸುಜಾತ, ಮಾಲಮ್ಮ, ಸಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ವರ್ಧಮಾನ ಬಾಗಮಾರ, ಅರಿಹಂತ ಬಾಗಮಾರ, ಯಶಸ್ವಿ ಬಾಗಮಾರ, ಯುಗ ಭಾಗಮಾರ್, ಬಸು ಮೇಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕಾರ್ಮಿಕ ಶ್ರಮ ಆಧಾರ
ಬಿಎಸ್‌ವೈ ಅಭಿಮಾನೋತ್ಸವ ಯಶಸ್ವಿಗೊಳಿಸಿ: ಜಿ.ಕರುಣಾಕರ ರೆಡ್ಡಿ